ETV Bharat / state

ಸಿಲಿಕಾನ್​ ಸಿಟಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ

ಪ್ಲಾಗ್ ರನ್ ಮಾಡುವುದರಿಂದ ಎಷ್ಟೆಲ್ಲ ಅನಗತ್ಯ ವಸ್ತುಗಳನ್ನು ನಾವು ಬಳಸುತ್ತಿದ್ದೇವೆ ಎಂಬ ಅರಿವು ಮೂಡಲಿದೆ. ಇದರಿಂದ ಮರುಬಳಕೆ ಮಾಡುವ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಲು ಉತ್ತೇಜನ ಸಿಗಲಿದೆ..

ಸಿಲಿಕಾನ್​ ಸಿಟಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ
Clean Survekshaan Campaign in Bangalore
author img

By

Published : Feb 27, 2021, 6:47 PM IST

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2021ರ ಭಾಗವಾಗಿ ಅಗರ ಕೆರೆ ದ್ವಾರದಿಂದ ಪ್ಲಾಗ್ ರನ್ ನಡೆಸಲಾಯಿತು.

ಹೆಚ್‌ಎಸ್​​ಆರ್ ಸಿಟಿಜನ್ಸ್ ಫೋರಂ, ಇಂಡಿಯನ್ ಬ್ಲಾಗರ್ಸ್ ಆರ್ಮಿ ಹಾಗೂ ಜರ್ಕಾ ಅಸೋಸಿಯೇಷನ್ ಸಹಯೋಗದೊಂದಿಗೆ ಪಾಲಿಕೆ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಘನತ್ಯಾಜ್ಯ ವಿಶೇಷ ಆಯುಕ್ತರಾದ ರಂದೀಪ್ ಅವರು ಚಾಲನೆ ನೀಡಿದರು.

Clean Survekshaan Campaign in Bangalore
ಸಿಲಿಕಾನ್​ ಸಿಟಿಯಲ್ಲಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನ

ಬಳಿಕ ಮಾತನಾಡಿದ ಅವರು, ಸ್ವಚ್ಛ ಸರ್ವೇಕ್ಷಣ್ ಭಾಗವಾಗಿ ಪ್ಲಾಗ್ ರನ್ ಮಾಡಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಸಂಬಂಧ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಬಹಳ ಮುಖ್ಯವಾಗಿದೆ. ನಗರದ ಸ್ವಚ್ಛತೆ ಕೇವಲ ಬಿಬಿಎಂಪಿ, ಮಾರ್ಷಲ್ಸ್​ರಿಂದ ಸಾಧ್ಯವಿಲ್ಲ.

ನಾಗರಿಕರ ಬೆಂಬಲವೂ ಬೇಕಿದೆ. ಪ್ರತಿಯೊಬ್ಬರೂ ಸ್ವಚ್ಛ ಬೆಂಗಳೂರು ಮಾಡಲು ಪಣತೊಡಬೇಕು. ಈ ಬದಲಾವಣೆ ಸಣ್ಣ ಗುಂಪಿನಿಂದ ಆರಂಭವಾಗಿ ಇತರರಲ್ಲೂ ತರಬಹುದು ಎಂದರು.

ಪ್ಲಾಗ್ ರನ್ ಮಾಡುವುದರಿಂದ ಎಷ್ಟೆಲ್ಲ ಅನಗತ್ಯ ವಸ್ತುಗಳನ್ನು ನಾವು ಬಳಸುತ್ತಿದ್ದೇವೆ ಎಂಬ ಅರಿವು ಮೂಡಲಿದೆ. ಇದರಿಂದ ಮರುಬಳಕೆ ಮಾಡುವ ವಸ್ತುಗಳನ್ನು ಹೆಚ್ಚು ಹೆಚ್ಚು ಬಳಸಲು ಉತ್ತೇಜನ ಸಿಗಲಿದೆ.

ಈ ಅಭಿಯಾನದ ಅಂಗವಾಗಿ ನಾಗರಿಕರಿಂದ 97 ಸಾವಿರ ಫೀಡ್​​ಬ್ಯಾಕ್ ಬಂದಿದೆ. ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರಾಮಾಣಿಕ ವಿಮರ್ಶೆ ನೀಡಬಹುದು. ಮಾರ್ಚ್ ಅಂತ್ಯದಲ್ಲಿ 1.5 ಲಕ್ಷ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಗುರಿ ಹೊಂದಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.