ETV Bharat / state

'ಸ್ವಚ್ಛ ಬೆಂಗಳೂರಿಗಾಗಿ ಘನತ್ಯಾಜ್ಯ ವಿಲೇವಾರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಿ'

author img

By

Published : Dec 24, 2020, 3:18 AM IST

“ಬೆಂಗಳೂರು ಮಿಷನ್-2022” ಸಂಬಂಧಿಸಿದ “ಸ್ವಚ್ಛ ಬೆಂಗಳೂರು” ಸಭೆಯಲ್ಲಿ ಘನತ್ಯಾಜ್ಯ ವಿಲೇವಾರಿ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಆಡಳಿತಗಾರರು ಖಡಕ್ ಸೂಚನೆ ನೀಡಿದರು.

Clean Bangaluru Meeting In BBMP Central Office
ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ನಡೆದ ಸಭೆ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ "ಬೆಂಗಳೂರು ಮಿಷನ್-2022"ಗೆ ಸಂಬಂಧಿಸಿದಂತೆ “ಸ್ವಚ್ಛ ಬೆಂಗಳೂರು” ಅಂಶದಡಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಆಡಳಿತಗಾರರ ಅಧ್ಯಕ್ಷತೆಯಲ್ಲಿ ಬುಧವಾರ ಪಾಲಿಕೆಯ ಕೇಂದ್ರ ಕಚೇರಿ ಸಭಾಂಗಣ-01ರಲ್ಲಿ ನಡೆದ ಸಭೆಯಲ್ಲಿ ಪ್ರಾತ್ಯಕ್ಷಿಕೆ ಮೂಲಕ ಘನತ್ಯಾಜ್ಯ ವಿಭಾಗದಲ್ಲಿ ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು.

ಈ ವೇಳೆ ವಿಶೇಷ ಆಯುಕ್ತರು(ಘನತ್ಯಾಜ್ಯ) ರಂದೀಪ್, ಜಂಟಿ ಆಯುಕ್ತರು(ಘನತ್ಯಾಜ್ಯ) ಸರ್ಫರಾಜ್ ಖಾನ್, ಮುಖ್ಯ ಅಭಿಯಂತರರು(ಘನತ್ಯಾಜ್ಯ) ವಿಶ್ವನಾಥ್, ಅಧೀಕ್ಷಕ ಅಭಿಯಂತರರು ಬಸವರಾಜ್ ಕಬಾಡೆ, ವಲಯ ಅಧೀಕ್ಷಕ ಅಭಿಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಂಗಳೂರು ಮಿಷನ್-2022ಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಂಸ್ಕರಣಾ ಘಟಕಗಳ ನಿರ್ವಹಣೆ, ಹೊಸ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಟೆಂಡರ್, ಕಲಿಕಾ ಕೇಂದ್ರಗಳ ಸ್ಥಾಪನೆ, ಕಸದ ವಾಹನಗಳಿಗೆ ಜಿ.ಪಿ.ಎಸ್ ಅಳವಡಿಸುವುದು ಸೇರಿದಂತೆ ಇನ್ನಿತರೆ ಮಾಹಿತಿಯನ್ನು ಪಡೆದ ಆಡಳಿತಗಾರರು, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಇದನ್ನೂ ಓದಿ : ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಹು-ಧಾ ಮಹಾನಗರ ಪಾಲಿಕೆ

ವಿಶೇಷ ಆಯುಕ್ತರಾದ ರಂದೀಪ್ ಮಾತನಾಡಿ, ಪಾಲಿಕೆ ವ್ಯಾಪ್ಯಿಯಲ್ಲಿ ಘನತ್ಯಾಜ್ಯ ವಿಲೇವಾರಿಗೆ ಹಲವಾರು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 7 ತ್ಯಾಜ್ಯ ಸಂಸ್ಕರಣಾ ಘಟಕಗಳ ಅಭಿವೃದ್ಧಿ, ಇದರ ಸಾಮರ್ಥ್ಯ ಹೆಚ್ಚಿಸುವಿಕೆ, ಕಸ ಸಂಗ್ರಹಣೆಯ ವಾಹನಗಳ ಮೇಲೆ ತಂತ್ರಜ್ಞಾನದ ಮೂಲಕ ನಿಗಾವಹಿಸಲು ವಾಹನಗಳಿಗೆ ಶೇ.90 ರಷ್ಟು ಆರ್.ಎಫ್.ಐ.ಡಿ ಕಾರ್ಡ್ ಹಾಗೂ ಶೇ.60 ರಷ್ಟು ಜಿ.ಪಿ.ಎಸ್ ಅಳವಡಿಸಲಾಗಿದ್ದು, ಅದನ್ನು ಶೇ.100ಕ್ಕೆ ಮಾಡಲು ಕ್ರಮವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಘನತ್ಯಾಜ್ಯ ಸಂಗ್ರಹ/ವಿಲೇವಾರಿ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿಗಾವಹಿಸುವ ಸಂಬಂಧ ಕಮಾಂಡ್ ಕಂಟ್ರೋಲ್ ಸೆಂಟರ್ ಸ್ಥಾಪನೆ, ಲೈವ್ ಡ್ಯಾಶ್ ಬೋರ್ಡ್ ಮುಖೇನ ವಾಹನಗಳ ಚಲನವಲನಗಳನ್ನು ವೀಕ್ಷಿಸಲು ಮತ್ತು ಬ್ಲಾಕ್ ಸ್ಪಾಟ್(ಕಸ ಸುರಿಯುವ ಸ್ಥಳ)ಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ಅಂತಹ ಸ್ಥಳಗಳಲ್ಲಿ ಕಸ ಸುರಿಯದಂತೆ ಕ್ರಮವಹಿಸಲು ಯೋಜನೆ ರೂಪಿಸಿರುವ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.

ಆಡಳಿತಗಾರರು ಮಾತನಾಡಿ, ವಿವಿಧ ವೆಬ್ ಅಪ್ಲಿಕೇಷನ್‌ಗಳನ್ನು ಕ್ರೂಢೀಕರಿಸಿ, ಒಂದೇ ಸೂರಿನಡಿ ಎಲ್ಲಾ ಘನತ್ಯಾಜ್ಯ ಪ್ರಕ್ರಿಯೆಗಳ ಮೇಲೆ ನಿಗಾವಹಿಸಲು ಮತ್ತು ಸಾರ್ವಜನಿಕರು ಬ್ಲಾಕ್ ಸ್ಪಾಟ್‌ಗಳ ಸ್ಥಳಗಳನ್ನು ಗುರುತಿಸಲು ಲೋಕೇಶನ್ ಅನುಗುಣವಾದ ಮಾಹಿತಿಯನ್ನು ಪಡೆದು ಶೀಘ್ರವಾಗಿ ದೂರುಗಳಿಗೆ ಸ್ಪಂದಿಸುವಂತೆ ಮತ್ತು ಜಿ.ಪಿ.ಎಸ್ ಅಳವಡಿಸಲಾಗಿರುವ ವಾಹನಗಳ ಮಾಹಿತಿಯೂ ಸಹ ಲಭ್ಯವಾಗುವಂತೆ ತಂತ್ರಜ್ಞಾನ ರೂಪಿಸುವಂತೆ ಸಲಹೆ ನೀಡಿದರು.

ನಗರದ ಲ್ಯಾಂಡ್‌ಫಿಲ್ ಪ್ರದೇಶಗಳಲ್ಲಿ ಬಯೋ ಮೈನಿಂಗ್ ಯೋಜನೆಗೆ ಸಂಬಂಧಿಸಿದಂತೆ ಆಡಳಿತಗಾರರು ಪ್ರತಿಕ್ರಿಯಿಸಿ, ಬಯೋ ಮೈನಿಂಗ್ ಮಾಡಲು ನುರಿತ ವೈಜ್ಞಾನಿಕ ತಂತ್ರಜ್ಞನರನ್ನು ಅದಕ್ಕೆ ನಿಯೋಜನೆ ಮಾಡಿ, ಅವರಿಂದ ಸಲಹೆ ಪಡೆದು ಯೋಜನೆ ಸಮರ್ಪಕವಾಗಿ ಜಾರಿಗೊಳಿಸಬಹುದೇ ಎಂಬುದರ ನಿಖರವಾಗಿ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಿ ಎಂದು ವಿಶೇಷ ಆಯಕ್ತರಿಗೆ ಸೂಚನೆ ನೀಡಿದರು.

ಇದನ್ನೂ ಓದಿ : ವಿದ್ಯುತ್ ಬಿಲ್ ಜೊತೆ ಬರಲಿದೆ ಕಸ ನಿರ್ವಹಣೆ ಶುಲ್ಕ: ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ

ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸಮುದಾಯದ ಸಹಯೋಗ ಪ್ರಾಮುಖ್ಯವಾಗಿದ್ದು, ನಮ್ಮ ಕಸ ನಮ್ಮ ಜವಾಬ್ದಾರಿ ಅಡಿ ಎಲ್ಲಾ ನಾಗರಿಕರು ಅವರ ಜವಾಬ್ದಾರಿಯನ್ನು ಅರಿತು ಪಾಲಿಕೆ ಜೊತೆ ಕೈಜೋಡಿಸಬೇಕು. ಸಮುದಾಯದ ಹಂತದಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸುವಿಕೆ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಆ ಬಗ್ಗೆ ಎಲ್ಲರಿಗೂ ತರಬೇತಿಗಳನ್ನು ನೀಡಬೇಕು. ಮನೆ/ಅಪಾರ್ಟ್​ಮೆಂಟ್​ಗಳಲ್ಲಿಯೇ ಹಸಿ ತ್ಯಾಜ್ಯ ಸಂಸ್ಕರಣೆ ಮಾಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಹೇಳಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 4,200 ಬ್ಲಾಕ್‌ಗಳಿದ್ದು, ಪ್ರತಿ ಬ್ಲಾಕ್ ಹಂತದಲ್ಲಿ ಸುಚಿಮಿತ್ರನನ್ನು ಗುರುತಿಸುವುದು, ಪ್ರತಿ ವಾರ್ಡ್​ಗೆ ಒಬ್ಬ ಸ್ವಯಂ ಸೇವಕರು, ಇವರುಗಳಿಗೆ ಸೂಕ್ತ ತರಬೇತಿ ನೀಡಲು ವಿಧಾನಸಭಾ ಕ್ಷೇತ್ರಕ್ಕೊಬ್ಬ ಮಾಸ್ಟರ್ ಟ್ರೈನರ್ ಗುರುತಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು, ಸ್ಥಳೀಯ ನಾಗರಿಕ ಸಂಸ್ಥೆಗಳು/ಆರ್.ಡಬ್ಲ್ಯೂ.ಎ ಗಳನ್ನು ಇದರಲ್ಲಿ ಭಾಗಿಯಾಗಿಸಿಕೊಂಡು ಕಸದ ಸಮಸ್ಯೆ ನಿವಾರಣೆಗೆ ಅಗತ್ಯಕ್ರಮವಹಿಸಬೇಕು ಎಂದರು.

ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದ ಹೆಚ್.ಎಸ್.ಆರ್ ಲೇಔಟ್‌ನಲ್ಲಿ ಸ್ವಚ್ಛಾಗ್ರಹ ಸಂಸ್ಥೆಯವರು ಹಸಿ ಕಸದಿಂದ ಗೊಬ್ಬರ ಉತ್ಪಾದನೆ, ಮನೆಯಲ್ಲಿಯೇ ಗೊಬ್ಬರ ಉತ್ಪಾದನೆ ಮಾಡುವ ಬಗ್ಗೆ ನಾಗರೀಕರಲ್ಲಿ ಅರಿವು ಮೂಡಿಸಲು ‘ಕಲಿಕಾ ಕೇಂದ್ರ’ವಿದ್ದು, ಎಲ್ಲಾ ವಲಯ ಅಧೀಕ್ಷಕ ಅಭಿಯಂತರರು ಈ ಕಲಿಕಾ ಕೇಂದ್ರಕ್ಕೆ ಭೇಟಿ ನೀಡಿ, ಅಧ್ಯಯನ ನಡೆಸಿ ಉಳಿದೆಲ್ಲಾ ವಲಯದಲ್ಲೂ ಕಲಿಕಾ ಕೇಂದ್ರ ತೆರೆಯಲು ಕ್ರಮವಹಿಸಬೇಕು ಎಂದು ಆಡಳಿತಗಾರರು ಸೂಚನೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.