ಬೆಂಗಳೂರು: ಕ್ಲೀನ್ ಏರ್ ಸ್ಟ್ರೀಟ್ ಪರಿಕಲ್ಪನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಸಂಬಂಧ ಪೊಲೀಸ್ ಇಲಾಖೆ ಅಧಿಸೂಚನೆ ಹೊರಡಿಸಿದೆ.
ನಗರದ ಕೇಂದ್ರ ಭಾಗದಲ್ಲಿ ಅದರಲ್ಲಿಯೂ ವಾಣಿಜ್ಯ ಚಟುವಟಿಕೆ ಹೆಚ್ಚಿರುವ ರಸ್ತೆಯಲ್ಲಿ "ಕ್ಲೀನ್ ಏರ್ ಸ್ಟ್ರೀಟ್" ಅನುಷ್ಠಾನಕ್ಕೆ ನಿರ್ಧರಿಸಿ ಚರ್ಚ್ ಸ್ಟ್ರೀಟ್ ಆಯ್ಕೆ ಮಾಡಿಕೊಂಡಿದೆ. ಇಲ್ಲಿ ಪಾದಚಾರಿಗಳ ಓಡಾಟವು ಹೆಚ್ಚಿದ್ದು, ಇಲ್ಲಿ ವಾಯು ಮಾಲಿನ್ಯ ಕಡಿಮೆಯಾಗಿ ಗಾಳಿಯ ಗುಣಮಟ್ಟ ಹೆಚ್ಚಿದರೆ ಅದನ್ನು ಇತರೆ ಪ್ರಮುಖ ಬೀದಿಗಳಲ್ಲೂ ಅಳವಡಿಸಲು ನಗರ ಭೂ ಸಾರಿಗೆ ನಿರ್ದೇಶನಾಲಯ ನಿರ್ಧರಿಸಿದೆ. ವಾರಾಂತ್ಯದಲ್ಲಿ ಚರ್ಚ್ ಸ್ಟ್ರೀಟ್ನಲ್ಲಿ ಸಂಚಾರ ನಡೆಸಲು ನವೆಂಬರ್-2020ರಿಂದ ಫೆಬ್ರುವರಿ-2021ರ ಅಂತ್ಯದವರೆಗೆ ನಿಗದಿತ ಸಮಯದಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಆದ್ದರಿಂದ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಚರ್ಚ್ ಸ್ಟ್ರೀಟ್ಅನ್ನು ವಾರಾಂತ್ಯದ ದಿನಗಳಲ್ಲಿ ಬೆಳಗ್ಗೆ 10ರಿಂದ ಮಧ್ಯರಾತ್ರಿ 12ರವರೆಗೆ ಪಾದಚಾರಿಗಳಿಗೆ ಮಾತ್ರ ಸೀಮಿತ ಎಂದು ಆದೇಶಿಸಿದ್ದಾರೆ. ಪ್ರಾಯೋಗಿಕವಾಗಿ ಅದನ್ನ ಫ್ರೀ ಏರ್ ಅಥವಾ ಓಪನ್ ಏರ್ ಕಾನ್ಸೆಪ್ಟ್ನಲ್ಲಿ ಮಾಡಲಾಗುತ್ತಿದ್ದು, ಜನರು ಅದಕ್ಕೆ ಯಾವ ರೀತಿಯಾಗಿ ರೆಸ್ಪಾನ್ಸ್ ಮಾಡ್ತಾರೆ ಅನ್ನೋದನ್ನ ನೋಡಿ ಮುಂದುವರೆಸಲಾಗುತ್ತದೆ.
ಚರ್ಚ್ ಸ್ಟ್ರೀಟ್ ರಸ್ತೆಯನ್ನು ಆ ಮಾದರಿಯನ್ನಾಗಿ ಮಾಡಬೇಕು ಎಂದು ಈ ಹಿಂದೆಯೇ ಟೆಂಡರ್ ಶೂರ್ ಮಾಡಲಾಗಿತ್ತು. ಆ ರಸ್ತೆಯಲ್ಲಿ ವಿಶಾಲವಾಗಿ ಫುಟ್ಪಾತ್ ಇದೆ. ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಮಾಡೋದಕ್ಕೆ ಅಲ್ಲಿ ಅವಕಾಶ ಇದ್ದು, ಪ್ರಾಯೋಗಿಕವಾಗಿ ಮಾಡೋದಕ್ಕೆ ಮುಂದಾಗಿರೋದರಿಂದ ಪೊಲೀಸರು ಇದಕ್ಕೆ ಅನುಮತಿ ಕೊಟ್ಟಿದ್ದಾರೆ.