ಬೆಂಗಳೂರು: ಕೆಲಸದ ವಿಚಾರವಾಗಿ ಇಬ್ಬರು ಬಾಣಸಿಗರ ನಡುವೆ ನಡೆದ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾಗಿದೆ.
ಜೆ.ಪಿ. ನಗರದ 55 ವಾಲ್ ಸ್ಟ್ರೀಟ್ ಪಬ್ನಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಸಾಗರ್ (22) ಕೊಲೆಯಾದ ವ್ಯಕ್ತಿ. ತ್ರಿಪುರ ಮೂಲದ ಮೌಸಿಕ್ ಎಂಬಾತನಿಂದ ಕೃತ್ಯ ನಡೆದಿದೆ.
ಮೃತ ಸಾಗರ್ ಹಾಗೂ ಆರೋಪಿ ಮೌಸಿಕ್ ಇಬ್ಬರು ಒಂದೇ ಪಬ್ನಲ್ಲಿ ಸಹಾಯಕ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ರಾತ್ರಿ ಕೆಲಸದ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ಆಗಿದೆ.
ನೀನು ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದು ಮೌಸಿಕ್ ಸಾಗರ್ಗೆ ಹೇಳಿದಾಗ, ಕೋಪಗೊಂಡ ಸಾಗರ್ ಮೌಸಿಕ್ಗೆ ಹೊಡೆದಿದ್ದಾನೆ. ಇದರಿಂದ ಆಕ್ರೋಶಗೊಂಡ ಮೌಸಿಕ್, ಕಿಚನ್ನಲ್ಲಿದ್ದ ಚಾಕುವಿನಿಂದ ಸಾಗರ್ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಇರಿದು ಎಸ್ಕೇಪ್ ಆಗಿದ್ದಾನೆ.
ತೀವ್ರ ರಕ್ತಸ್ರಾವದಿಂದ ನೆಲದ ಮೇಲೆ ಬಿದ್ದಿದ್ದ ಸಾಗರ್ನನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲಿಸಿದ ಜೆ.ಪಿ. ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.