ETV Bharat / state

ವಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಪ್ರಕರಣ..ವಿಧಾನಸಭೆಯಲ್ಲಿ ಆಡಳಿತ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನಚಕಮಕಿ - ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ವೆಂಟಿಲೇಟರ್ ವೈಫಲ್ಯದಿಂದ ಈ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಪ್ರತಿಪಕ್ಷದ ಸದಸ್ಯರ ಆರೋಪಗಳನ್ನು ತಳ್ಳಿ ಹಾಕಿರುವ ಸರ್ಕಾರ, ಈ ಸಾವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದೆ.

Clash between ruling and opposition members in the assembly
ವಿಧಾನಸಭೆಯಲ್ಲಿ ಆಡಳಿತ- ಪ್ರತಿಪಕ್ಷ ಸದಸ್ಯರ ನಡುವೆ ಮಾತಿನಚಕಮಕಿ
author img

By

Published : Sep 15, 2022, 3:39 PM IST

ಬೆಂಗಳೂರು: ಬಳ್ಳಾರಿ ಜಿಲ್ಲೆಯ ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ಮೃತಪಟ್ಟಿರುವ ಪ್ರಕರಣ ಪ್ರತಿಧ್ವನಿಸಿ, ಈ ಸಾವಿಗೆ ಸರ್ಕಾರವೇ ಹೊಣೆ. ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂಬ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರ ನೋಟಿಸ್​ನಲ್ಲಿ ಉಲ್ಲೇಖಿಸಿರುವ ವಿಷಯ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಇದೇ ವಿಚಾರವಾಗಿ ವಿಧಾನಸಭೆಯಲ್ಲಿ ಇ‌ಂದು ಕೆಲಕಾಲ ಗದ್ದಲದ ವಾತಾವರಣವೂ ನಿರ್ಮಾಣವಾಯಿತು.

ವೆಂಟಿಲೇಟರ್ ವೈಫಲ್ಯದಿಂದ ಈ ರೋಗಿಗಳು ಮೃತಪಟ್ಟಿದ್ದಾರೆ ಎಂಬ ಪ್ರತಿಪಕ್ಷದ ಸದಸ್ಯರ ಆರೋಪಗಳನ್ನು ತಳ್ಳಿ ಹಾಕಿರುವ ಸರ್ಕಾರ, ಈ ಸಾವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಹೇಳಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮೂವರು ರೋಗಿಗಳು ವೆಂಟಿಲೇಟರ್ ವೈಫಲ್ಯದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ವಿದ್ಯುತ್ ಕೈಕೊಟ್ಟು, ಜನರೇಟರ್‌ಗಳು ಕೆಲಸ ಮಾಡದೇ ವೆಂಟಿಲೇಟರ್ ವೈಫಲ್ಯವಾಗಿ ಅವರು ಮೃತಪಟ್ಟಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆ, ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ವಾಗ್ದಾಳಿ ನಡೆಸಿದರು.

ಇದು ಆಕಸ್ಮಿಕ ಘಟನೆ: ಈ ಸಂದರ್ಭದಲ್ಲಿ ಎದ್ದು ನಿಂತ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು, ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಲಿರಲಿಲ್ಲ. ಇದು ಆಕಸ್ಮಿಕ ಘಟನೆ. ಆಕಸ್ಮಿಕ ಘಟನೆಗಳಿಗೆ ಸರ್ಕಾರವೇ ಹೊಣೆ, ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಿರುವುದು ಸರಿಯಲ್ಲ ಎಂದು ಸಿಟ್ಟಿನಿಂದ ಹೇಳಿದರು.

ಇದಕ್ಕೆ ಸಚಿವ ಶ್ರೀರಾಮುಲು, ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿ ಪ್ರತಿಪಕ್ಷದ ನಾಯಕರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯರು ಸಹ ತಮ್ಮ ನಾಯಕನ ಮಾತುಗಳ ಸಮರ್ಥನೆಗೆ ಇಳಿದಿದ್ದು, ಸದನದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಇದರಿಂದ ಸದನದಲ್ಲಿ ಕೆಲ ಕಾಲ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಗಿತ್ತು.

ಗದ್ದಲ ನಿಯಂತ್ರಿಸಿದ ಸ್ಪೀಕರ್​: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಧ್ಯ ಪ್ರವೇಶಿಸಿ, ಹೀಗೆ ಎಲ್ಲರೂ ಒಮ್ಮೆಲೇ ಎದ್ದು ನಿಂತು ಮಾತನಾಡುವುದು ಸರಿಯಲ್ಲ. ಸರ್ಕಾರದ ಉತ್ತರ ಕೇಳೋಣ ಎಂದು ಹೇಳಿ ಗದ್ದಲವನ್ನು ನಿಯಂತ್ರಿಸಿ ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಅವರಿಗೆ ಉತ್ತರ ನೀಡುವಂತೆ ಸೂಚಿಸಿದರು.

ವೆಂಟಿಲೇಟರ್​​​​​​​​ ವೈಫಲ್ಯದಿಂದ ಈ ಸಾವು ಆಗಿಲ್ಲ: ಉತ್ತರ ನೀಡಿದ ಸಚಿವ ಶ್ರೀರಾಮುಲು ಅವರು, ಈ ಸಾವು ವೆಂಟಿಲೇಟರ್ ವೈಫಲ್ಯದಿಂದ ಆಗಿಲ್ಲ. ವಿದ್ಯುತ್ ಹೋಗಿದ್ದರೂ ಜನರೇಟರ್ ಕೆಲಸ ಮಾಡುತ್ತಿತ್ತು. ಮೃತಪಟ್ಟಿರುವ ರೋಗಿಗಳಲ್ಲಿ ಇಬ್ಬರು ಮಾತ್ರ ವೆಂಟಿಲೆಟರ್‌ನಲ್ಲಿದ್ದರು. ಇವರು ಮೃತಪಟ್ಟಿರುವುದು ವೆಂಟಿಲೇಟರ್ ವೈಫಲ್ಯದಿಂದ ಅಲ್ಲ ಬೇರೆ ಬೇರೆ ಕಾರಣದಿಂದ.

ಒಬ್ಬರು ಹಾವು ಕಚ್ಚಿ ಉಸಿರಾಟ ತೊಂದರೆಯಿಂದ ಮೃತಪಟ್ಟಿದ್ದರೆ, ಮತ್ತೊಬ್ಬರು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ ಎಂದು ಹೇಳಿದರು. ಅಷ್ಟೇ ಅಲ್ಲ ಈ ಬಗ್ಗೆ ಆಸ್ಪತ್ರೆಯ ಸೂಪರಿಟೆಂಡೆಂಟ್​​ ನೀಡಿರುವ ವರದಿಯನ್ನು ಸದನದಲ್ಲಿ ವಿವರಿಸಿದರು.

ಪ್ರಾಯೋಜಿತ ಕೊಲೆ ಆರೋಪಕ್ಕೆ ಆಕ್ಷೇಪ: ಪ್ರತಿಪಕ್ಷದ ನಾಯಕರು ಈ ಸಾವಿಗೆ ಸರ್ಕಾರವೇ ಹೊಣೆ, ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಉಲ್ಲೇಖ ಮಾಡಿದ್ದು ಸರಿಯಲ್ಲ. ಹಿಂದೆ ಅವರು ಅಧಿಕಾರದಲ್ಲಿದ್ದಾಗ ಈ ರೀತಿಯ ಆಕಸ್ಮಿಕ ಸಾವುಗಳಾಗಿವೆ. ಆಗ ನಾವು ಎಂದೂ ಸರ್ಕಾರದ ಪ್ರಾಯೋಜಿತ ಕೊಲೆ ಎಂದು ಹೇಳಿದ್ದಿಲ್ಲ ಎಂದು ಸಿದ್ಧರಾಮಯ್ಯನವರ ಮಾತಿಗೆ ತಿರುಗೇಟು ನೀಡಿ ವೆಂಟಿಲೇಟರ್ ವೈಫಲ್ಯದಿಂದ ಸಾವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ತನಿಖೆಗೆ ಸಿದ್ದರಾಮಯ್ಯ ಒತ್ತಾಯ: ಆಗ ಸಿದ್ಧರಾಮಯ್ಯ, ಇದು ವೆಂಟಿಲೇಟರ್ ವೈಫಲ್ಯದಿಂದ ಸಾವುಗಳಾಗಿಲ್ಲದಿದ್ದರೆ ಈ ಬಗ್ಗೆ ತನಿಖೆ ನಡೆಸಿ ಮೃತಪಟ್ಟವರಿಗೆ ಪರಿಹಾರ ಕೊಡಿ ಎಂದು ಆಗ್ರಹಿಸಿದರು. ಸಿದ್ಧರಾಮಯ್ಯ ಅವರ ಮಾತಿಗೆ ಸ್ಪಂದಿಸಿದ ಸಚಿವ ಮಾಧುಸ್ವಾಮಿ, ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿ, ತನಿಖೆಯಲ್ಲಿ ಈ ಸಾವುಗಳು ಆಸ್ಪತ್ರೆಯ ಅಜಾಗರೂಕತೆಯಿಂದ ಆಗಿದ್ದರೆ ಪರಿಹಾರ ಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಕರೆಂಟ್​ ಇಲ್ಲದ್ದಕ್ಕಾಗಿ ಮಗ ಸತ್ತಿದ್ದಾನೆ.. ಮನೋಜ್​ ಕುಮಾರ್​ ಪೋಷಕರ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.