ETV Bharat / state

ನೈಸ್‌ ರಸ್ತೆಯಲ್ಲಿ ಮಹಿಳಾ ಬೈಕ್ ರೈಡರ್ಸ್-ಸ್ಥಳೀಯ ವ್ಯಕ್ತಿಯ ನಡುವೆ ಗಲಾಟೆ; ಪೊಲೀಸರಿಗೆ ದೂರು

ಬೈಕ್ ರೈಡ್‌ಗೆ ತೆರಳಿದ್ದ ಯುವತಿಯರು ಮತ್ತು ಸ್ಥಳೀಯ ವ್ಯಕ್ತಿಯ ನಡುವೆ ನಡೆದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Clash between women bike riders and a local man
ಮಹಿಳಾ ಬೈಕ್ ರೈಡರ್ಸ್ ಹಾಗೂ ಸ್ಥಳಿಯ ವ್ಯಕ್ತಿ ನಡುವೆ ಗಲಾಟೆ
author img

By

Published : Mar 6, 2023, 12:00 PM IST

Updated : Mar 6, 2023, 12:45 PM IST

ಬೈಕ್ ರೈಡ್​​ಗೆ ತೆರಳಿದ್ದ ಯುವತಿಯರು - ಸ್ಥಳೀಯ ವ್ಯಕ್ತಿ ನಡುವೆ ವಾಗ್ವಾದ.

ಬೆಂಗಳೂರು : ಮಹಿಳಾ ದಿನಾಚರಣೆ ಪ್ರಯುಕ್ತ ನಗರದ ಯುವತಿಯರ ತಂಡವೊಂದು ನಿನ್ನೆ ಮಧ್ಯಾಹ್ನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ‌ ರೈಡ್‌ಗೆ ಹೋಗಿತ್ತು. ಮಾರ್ಗ ಮಧ್ಯೆೆ ಒಂದೆಡೆ ಬೈಕ್‌ಗಳನ್ನು ನಿಲ್ಲಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಯಾದ ವ್ಯಕ್ತಿಯೊಬ್ಬ ಬೈಕ್‌ಗಳನ್ನು ಅಲ್ಲಿಂದ ತೆಗೆದುಕೊಂಡು ಹೋಗುವಂತೆ ಸೂಚಿಸಿ, ನಿಂದಿಸಿದ್ದಾನೆ ಎಂದು ಯುವತಿಯರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಯುವತಿಯರು ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. "ರಸ್ತೆ ಪಕ್ಕದಲ್ಲಿ‌ ಬೈಕ್ ನಿಲ್ಲಿಸಿ ನೀರು ಕುಡಿಯುತ್ತಿದ್ದಾಗ ಆಗಮಿಸಿದ ವ್ಯಕ್ತಿ ಏಕಾಏಕಿ ಅವಾಚ್ಯ ಪದಗಳಿಂದ ನಿಂದಿಸಿ ನಮ್ನನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದ್ದಾನೆ. ಇದು ನನ್ನ ಜಾಗ, ನೀವು ಇಲ್ಲಿರಬಾರದು ಎಂದು ಬೈಕ್ ಕೀ ಕಿತ್ತುಕೊಂಡು, ನಾನು ಅಡ್ವೊಕೇಟ್ ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಧಮ್ಕಿ ಹಾಕಿದ.​ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದರೂ ಆ ವ್ಯಕ್ತಿ‌ ಕೀ ಕೊಡಲಿಲ್ಲ" ಎಂದು‌ ಬೈಕರ್ ಪ್ರಿಯಾಂಕ ತಿಳಿಸಿದ್ದಾರೆ.

ಆರೋಪ ಹೊತ್ತಿರುವ ವ್ಯಕ್ತಿಯೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. "ಯುವತಿಯರು ಬೈಕ್ ನಿಲುಗಡೆ ಮಾಡಿದ ರಸ್ತೆ ಪಕ್ಕದಲ್ಲೇ ನನಗೆ ಸೇರಿದ ಜಾಗವಿದೆ. ಹೀಗಾಗಿ ಅಲ್ಲಿಂದ ತೆರಳಲು ಸೂಚಿಸಿದ್ದೆ" ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ಎಲ್ಲೆೆಡೆ ಹರಡುತ್ತಿದ್ದಂತೆ ತಡರಾತ್ರಿ ಕೋಣನಕುಂಟೆ ಪೊಲೀಸ್ ಠಾಣೆಯ ಮುಂದೆ ಹಲವು ಬೈಕ್ ರೈಡರ್ಸ್‌ ಜಮಾಯಿಸಿದ್ದರು. ದೂರು- ಪ್ರತಿದೂರುಗಳು ಸ್ವೀಕರಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಾಕಥಾನ್: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಯಲಹಂಕದ ನವಚೇತನ ಆಸ್ಪತ್ರೆ ವತಿಯಿಂದ ಬೃಹತ್ ವಾಕಥಾನ್ ಆಯೋಜನೆ ಮಾಡಲಾಗಿತ್ತು. ನಟಿ ಅನು ಪ್ರಭಾಕರ್ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ವಿಶ್ವನಾಥ್ ಅವರ ಪತ್ನಿ ವಾಣಿ ಶ್ರೀ ವಿಶ್ವನಾಥ್, ಪದ್ಮಶ್ರೀ ಪುರಸ್ಕೃತೆ ತುಳಸಿ ಭಾಗಿಯಾಗಿದ್ದರು.

ವಾಕಥಾನ್‌ನಲ್ಲಿ 1000ಕ್ಕೂ ಹೆಚ್ಚು ಮಹಿಳೆಯರು, ಶಾಲಾ ಮಕ್ಕಳು ಭಾಗಿಯಾಗಿದ್ದರು. ನವಚೇತನ ಆಸ್ಪತ್ರೆಯಿಂದ ಯಲಹಂಕ ನಗರದಲ್ಲಿ 3 ಕಿ.ಮೀವರೆಗೂ ನಡಿಗೆ ಮಾಡಿ ಮಹಿಳಾಮಣಿಗಳು ಜನ ಜಾಗೃತಿ ಮೂಡಿಸಿದರು.

ಇದನ್ನೂ ಓದಿ :ಆನೇಕಲ್: ಯುವತಿಯ ಕೈ, ಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಕಳ್ಳರು

Last Updated : Mar 6, 2023, 12:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.