ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮಿ ಸ್ಪಷ್ಟೀಕರಣ ನೀಡಿ ಪತ್ರ ಬರೆದಿದ್ದಾರೆ.
ಡಿಸೆಂಬರ್ 15 ರಂದು ವಿಧಾನ ಪರಿಷತ್ತಿನಲ್ಲಿ ನಡೆದ ಗಲಾಟೆಗೆ ಕಾರಣ ವಿವರಿಸಿ ಸ್ಪಷ್ಟೀಕರಣ ನೀಡುವಂತೆ ಸಭಾಪತಿಗಳು ನೋಟಿಸ್ ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರದ ಮೂಲಕ ಅವರು ಉತ್ತರ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಮೂರು ಪುಟಗಳ ಸುದೀರ್ಘ ವಿವರಣೆಯನ್ನು ಮಹಾಲಕ್ಷ್ಮಿ ಅವರು ನೀಡಿದ್ದು ಇದರಲ್ಲಿ ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ : ಪರಿಷತ್‌ನಲ್ಲಿ ಕೋಲಾಹಲ ವಿಚಾರ: ಬಿಜೆಪಿ-ಜೆಡಿಎಸ್ ಸದಸ್ಯರ ವಿರುದ್ಧ ಕ್ರಮಕ್ಕೆ ಪಿ.ಆರ್.ರಮೇಶ್ ಒತ್ತಾಯ
ವಿಧಾನ ಪರಿಷತ್ ಕಲಾಪ ಆರಂಭಕ್ಕೂ ಮುನ್ನ ಬೆಲ್ ನಡೆಯುತ್ತಿರುವ ಸಂದರ್ಭದಲ್ಲಿ ಉಪ ಸಭಾಪತಿಗಳು ಸಭಾಪತಿ ಪೀಠದ ಮೇಲೆ ಕುಳಿತುಕೊಂಡಾಗ ಅವರಿಗೆ ಸಭಾಪತಿ ಇರುವಾಗ ತಾವು ಕೂಡಬೇಕೊ ಬೇಡವೋ ಎನ್ನುವ ಮಾಹಿತಿಯ ಝರಾಕ್ಸ್ ನೀಡಿರುವುದಾಗಿ ಕಾರ್ಯದರ್ಶಿ ಸಭಾಪತಿ ನೋಟಿಸ್ ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಭಾಪತಿಗಳ ಆಗಮನಕ್ಕೆ ಮುನ್ನವೇ ಉಪಸಭಾಪತಿಗಳು ಅವರ ಸ್ಥಾನದಲ್ಲಿ ಕುಳಿತಿರುವ ಹಿಂದೆ ಕಾರ್ಯದರ್ಶಿಗಳ ಪ್ರೋತ್ಸಾಹವು ಇರಬಹುದು ಎಂಬ ಸಂಶಯವನ್ನು ವ್ಯಕ್ತಪಡಿಸಿದರು. ಇದೀಗ ತಮ್ಮ ವಿವರಣೆಯನ್ನು ಮಹಾಲಕ್ಷ್ಮಿ ನೀಡಿದ್ದಾರೆ.
ಸದನದಲ್ಲಿ ಗಲಾಟೆ ನಡೆದ ಸಂದರ್ಭದಲ್ಲಿ ಸಚಿವರುಗಳು ಹಿರಿಯ ಸದಸ್ಯರು ಹಾಜರಿದ್ದರು ಎಂಬ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಆ ಸಂದರ್ಭದಲ್ಲಿ ತಮ್ಮಿಂದ ಯಾವುದೇ ಲೋಪವಾಗಿಲ್ಲ ಎಂಬ ವಿವರ ಒಳಗೊಂಡ ಸಮರ್ಥನೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಇದೆ.