ETV Bharat / state

ಬುಕ್​​ ಮೈ ಶೋ ಆ್ಯಪ್​ನಲ್ಲಿ ಸಿನಿಮಾ ರೇಟಿಂಗ್ಸ್​​ ಗೋಲ್​ಮಾಲ್​ ಆರೋಪ: ದೂರು

author img

By

Published : Mar 15, 2019, 6:15 PM IST

ಜನಪ್ರಿಯ ಬುಕ್​​ ಮೈ ಶೋ ಆ್ಯಪ್​ನಲ್ಲಿ ಕೆಲ ಪ್ರೊಮೋಷನಲ್ ಏಜೆನ್ಸಿಗಳು ವಂಚಿಸ್ತಿದ್ದಾವೆ ಎಂಬ ಆರೋಪ ಕೇಳಿಬಂದಿದ್ದು, ವಂಚನೆಗೊಳಗಾದವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಬುಕ್​​ ಮೈ ಶೋ ಆ್ಯಪ್​ನಲ್ಲಿ ವಂಚನೆ ಆರೋಪ

ಬೆಂಗಳೂರು: ಕುಳಿತಲ್ಲೇ ಆನ್​ಲೈನ್​ ಮೂಲಕ ಟಿಕೆಟ್​ ಬುಕ್​ ಮಾಡೋಕೆ ಜನರು ಹೆಚ್ಚು ಮೊರೆ ಹೋಗೋದು ಬುಕ್ ಮೈ ಶೋ ಆ್ಯಪ್. ಆದ್ರೆ ಇದೀಗ ಈ ಆ್ಯಪ್ ಸಿನಿಮಾ ರೇಟಿಂಗ್ಸ್ ವಿಷಯದಲ್ಲಿ ಗೋಲ್​ಮಾಲ್
ಮಾಡಿ ದುಡ್ಡು ಹೊಡಿತಿದೆ ಎಂದು ಕೆಲ ನಿರ್ದೇಶಕರು ದೂರು ನೀಡಿದ್ದಾರೆ.

ಬುಕ್ ಮೈ ಶೋ ಆ್ಯಪ್​ನಲ್ಲಿ ಕೇವಲ ಟಿಕೆಟ್​ ಬುಕ್​ ಮಾಡೋದು ಮಾತ್ರವಲ್ಲದೇ ಯಾವ ಸಿನಿಮಾಗೆ ಎಷ್ಟು ರೇಟಿಂಗ್ಸ್ ಇದೆ, ಸಿನಿಮಾ ಎಷ್ಟು ಚೆನ್ನಾಗಿದೆ ಅನ್ನೋದನ್ನ ಕೂಡ ನೋಡಬಹುದು. ಆದ್ರೆ ಸದ್ಯ ಅದೇ ರೇಟಿಂಗ್ಸ್​ನಲ್ಲಿ ಗೋಲ್​ಮಾಲ್ ನಡಿತಿದೆ ಎನ್ನೋ ಆರೋಪ ಕೇಳಿ ಬಂದಿದೆ.

films
ಬುಕ್​​ ಮೈ ಶೋ ಆ್ಯಪ್​ನಲ್ಲಿ ವಂಚನೆ ಆರೋಪ

ಹೌದು, ಸಿನಿಮಾ ರೇಟಿಂಗ್ಸ್ ಕೊಡೋದ್ರಲ್ಲಿ ಕೆಲ ಪ್ರೊಮೋಷನಲ್ ಏಜೆನ್ಸಿಗಳು ವಂಚಿಸ್ತಿದ್ದಾವಂತೆ. ಇನ್ನೂ ಕೆಲ ಸಿನಿಮಾಗಳಿಗೆ ಇಂತಿಷ್ಟು ಹಣ ಕೊಟ್ರೆ ರೇಟಿಂಗ್ಸ್ ಹೈ ಮಾಡ್ತೀವಿ ಅಂತ ಬಂದಷ್ಟು ಹಣ ಪೀಕ್ತಿದ್ದಾರಂತೆ. ಅಷ್ಟೇ ಅಲ್ಲದೇ ಸಿನಿಮಾಗಳಿಗೆ ತಾವಾಗೆ ನೆಗೆಟಿವ್ ಕಾಮೆಂಟ್ಸ್​ಗಳನ್ನ ಹಾಕಿ ಸಿನಿಮಾ ಬಗ್ಗೆ ಅಪಪ್ರಚಾರ ಮಾಡಿ, ಅನಂತರ ಸಂಬಂಧಪಟ್ಟ ಡೈರೆಕ್ಟರ್​ಗೆ ಕರೆ ಮಾಡಿ ನಿಮಗೆ ನಿಮ್ಮ ಸಿನಿಮಾ ರೇಟಿಂಗ್ಸ್ ಚೆನ್ನಾಗಿರಬೇಕು ಅಂದ್ರೆ ಇಷ್ಟು ಹಣ ಕೊಡಿ. ಆಗ ನಾವು ಪಾಸಿಟಿವ್ ಕಾಮೆಂಟ್ಸ್ ಹಾಕಿ ಸಿನಿಮಾ ಚೆನ್ನಾಗಿ ಓಡೋ ಹಾಗೆ ಮಾಡ್ತೀವಿ ಅಂದಿದ್ದಾರಂತೆ.

films
ಬುಕ್​​ ಮೈ ಶೋ ಆ್ಯಪ್​ನಲ್ಲಿ ವಂಚನೆ ಆರೋಪ

ಇನ್ನು ಈ ರೀತಿ ಮೋಸ ಆಗ್ತಿದ್ರು ಪ್ರೊಮೋಷನಲ್ ಏಜೆನ್ಸಿಗಳ ಮಾತಿಗೆ ಒಪ್ಪಿಗೆ ಸೂಚಿಸಿರುವ ಕೆಲ ಡೈರೆಕ್ಟರ್​​ಗಳು, ಸಿನಿಮಾಗೆ ಹೂಡಿರುವ ಹಣವಾದರು ಬಂದಷ್ಟು ಬರಲಿ, ಮಾಡಿದ ಸಾಲವಾದ್ರೂ ತೀರಲಿ ಅಂತ ಕೇಳಿದಷ್ಟು ಹಣವನ್ನ ಹಾಕಿದ್ದಾರಂತೆ. ಆದ್ರೂ ಈಗ ಏಜೆನ್ಸಿಗಳಿಂದ ‌ಮೋಸ ಹೋಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಮಗೆ ನ್ಯಾಯ ಕೊಡಿ ಎಂದು ಮಾಧ್ಯಮದ ಮೊರೆ ಹೋಗುತ್ತಿದ್ದಾರೆ.

Intro:Body:

1 KN_BNG_3_15_ book my show _7204498 2nd.jpg   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.