ETV Bharat / state

ಕ್ರಿಶ್ಚಿಯನ್ ಅಂದರೆ ಮತಾಂತರ ಮಾಡುವವರಲ್ಲ, ಪ್ರೀತಿ ಹಂಚಿ, ಶಾಂತಿ ಕಾಪಾಡುವವರು : ವಿನಿಷಾ ನೀರೋ

ಕ್ರೈಸ್ತ ಚರ್ಚ್​​ಗಳ ಮೇಲೆ ದಾಳಿ, ಆಹಾರ ಪದ್ದತಿಯ ವಿರುದ್ಧವಾಗಿರುವ ಕಾನೂನುಗಳು, ಮತಾಂತರ ನಿಷೇಧ ಕಾಯ್ದೆ, ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳಿಗೆ ನೀಡುತ್ತಿದ್ದ ಬೆಂಬಲ ರದ್ದು, ತಾರತಮ್ಯ ಆತಂಕ ಸೃಷ್ಟಿಸಿದೆ. ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ ಎಂದು ವಿನಿಷಾ ನೀರೋ ಹೇಳಿದರು..

Anglo-Indian member Vinisha Nero
ಆಂಗ್ಲೋ-ಇಂಡಿಯನ್​​ ನಾಮನಿರ್ದೇಶಿತ ಸದಸ್ಯೆ ವಿನಿಷಾ ನೀರೋ
author img

By

Published : Mar 25, 2022, 3:47 PM IST

ಬೆಂಗಳೂರು : ಕ್ರಿಶ್ಚಿಯನ್ ಅಂದರೆ ಮತಾಂತರ ಮಾಡುವವರಲ್ಲ. ಕ್ರಿಶ್ಚಿಯನ್ ಅಂದರೆ ಪ್ರೀತಿ ಹಂಚುವುದು ಮತ್ತು ಶಾಂತಿ ಕಾಪಾಡುವುದು ಎಂದು ಆಂಗ್ಲೋ-ಇಂಡಿಯನ್​​ ನಾಮನಿರ್ದೇಶಿತ ಸದಸ್ಯೆ ವಿನಿಷಾ ನೀರೋ ಹೇಳಿದರು. ವಿಧಾನಸಭೆಯಲ್ಲಿ ಬೇಡಿಕೆಗಳ ಮೇಲಿನ ಚರ್ಚೆ ವೇಳೆ ಅವರು ಮಾತನಾಡಿದರು.

ಶಿಕ್ಷಣ, ಆರೋಗ್ಯ, ಸಾಮಾಜಿಕ ಕಾರ್ಯಕ್ರಮ, ಚಾರಿಟಿ ಮತ್ತು ಉತ್ತಮ ನಡೆಯಾಗಿದೆ. ನನ್ನ ಬ್ಯಾಗ್ ತುಂಬಾ ವಿವಿಧ ಸಚಿವರು ಮತ್ತು ಶಾಸಕರು ಕೊಟ್ಟಿರೋ ಪತ್ರಗಳಿವೆ. ಅವೆಲ್ಲವೂ ಕ್ರಿಶ್ಚಿಯನ್ ಶಾಲೆಗಳಿಗೆ ಪ್ರವೇಶಾತಿ ಕೊಡಿಸುವ ಕುರಿತದ್ದಾಗಿದೆ. ಯಾಕೆ ಅಂದರೆ ಕ್ರಿಶ್ಚಿಯನ್ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತೆ ಎಂಬ ಕಾರಣಕ್ಕಾಗಿ ಎಂದರು.

ಕ್ರಿಶ್ಚಿಯನ್ ಅಂದರೆ ಮತಾಂತರ ಮಾಡುವವರಲ್ಲ, ಪ್ರೀತಿ ಹಂಚಿ, ಶಾಂತಿ ಕಾಪಾಡುವವರು : ವಿನಿಷಾ ನೀರೋ

ವಿಧಾನಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಆಂಗ್ಲೋ-ಇಂಡಿಯನ್ ಸದಸ್ಯರ ಸದಸ್ವತ್ವ ರದ್ದು ಅಸಂವಿಧಾನಿಕವಾಗಿದೆ. ಕ್ರೈಸ್ತ ಚರ್ಚ್​​ಗಳ ಮೇಲೆ ದಾಳಿ, ಆಹಾರ ಪದ್ದತಿಯ ವಿರುದ್ಧವಾಗಿರುವ ಕಾನೂನುಗಳು, ಮತಾಂತರ ನಿಷೇಧ ಕಾಯ್ದೆ, ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳಿಗೆ ನೀಡುತ್ತಿದ್ದ ಬೆಂಬಲ ರದ್ದು, ತಾರತಮ್ಯ ಆತಂಕ ಸೃಷ್ಟಿಸಿದೆ. ಬಲವಂತದ ಮತಾಂತರಕ್ಕೆ ನಮ್ಮ ವಿರೋಧವಿದೆ ಎಂದರು.

ಕ್ರೈಸ್ತರು ನೂರಾರು ವರ್ಷಗಳಿಂದ ಭಾರತದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಶಿಕ್ಷಣ, ಆರೋಗ್ಯ ಸೇವೆಗಳ ಮೂಲಕ ದೇಶಕ್ಕೆ ಕೊಡುಗೆ ನೀಡಿದ್ದಾರೆ ಎಂದು ವಿನಿಷಾ ನೀರೋ ಹೇಳಿದರು. ಆದರೆ, ಶಾಸಕ ಪಿ.ರಾಜೀವ್ ಆಕ್ಷೇಪ ವ್ಯಕ್ತಪಡಿಸಿ, ಮತಾಂತರ ನಿಷೇಧ ಕಾಯ್ದೆಯನ್ನು ಅಸಂವಿಧಾನಿಕ ಎಂದರೆ ಹೇಗೆ? ಹಾಗೆಂದಾಗ ನಾವು ಹೇಗೆ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯ?. ಕ್ರೈಸ್ತ ಮಿಷನರಿಗಳು ಮತಾಂತರ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಈ ವೇಳೆ ವಿನಿಷಾ ಅವರಿಗೆ ಕಾಂಗ್ರೆಸ್ ಸದಸ್ಯರಾದ ಪ್ರಿಯಾಂಕ್ ಖರ್ಗೆ, ಜಮೀರ್ ಅಹ್ಮದ್, ಯು.ಟಿ‌ ಖಾದರ್ ಬೆಂಬಲ ವ್ಯಕ್ತಪಡಿಸಿದರು. ಇದರಿಂದ ಸದನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆಯಿತು. ಬಳಿಕ ಮಾತು ಮುಂದುವರಿಸಿದ ವಿನಿಷಾ, ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದರು.

ಇದನ್ನೂ ಓದಿ: ಅನ್ಯ ಧರ್ಮೀಯರ ಬಳಿ ವ್ಯಾಪಾರ ಮಾಡದಂತೆ ಹಿಂದೂ ರಕ್ಷಣಾ ವೇದಿಕೆಯಿಂದ ಜಾಗೃತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.