ಬೆಂಗಳೂರು: ಮೈಸೂರು ರಸ್ತೆಯ ಬಾಪುಜಿ ನಗರದ ರೇಖಾ ಕೆಮಿಕಲ್ ಗೋಡೌನ್ನಲ್ಲಿ ಮಂಗಳವಾರ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ರಾಸಾಯನಿಕ ಗೋಡೌನ್ ಆಗಿದ್ದರಿಂದ ಬೆಂಕಿಯನ್ನು ಸಂಪೂರ್ಣ ನಂದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕಂಟ್ರೋಲ್ ಅಂಡ್ ಬರ್ನ್ ನಿಯಮವನ್ನು ಅಗ್ನಿಶಾಮಕ ಸಿಬ್ಬಂದಿ ಪಾಲಿಸುವ ಮೂಲಕ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಸದ್ಯ ನಿನ್ನೆ ಇದ್ದ ದೊಡ್ಡಮಟ್ಟದ ಬೆಂಕಿ ಕೆನ್ನಾಲಿಗೆ ನಿಯಂತ್ರಣಕ್ಕೆ ಬಂದಿದ್ದು, ತಳಹಂತದಲ್ಲಿ ಬೆಂಕಿ ಉರಿಯುತ್ತಿದೆ. ಇನ್ನು ಎರಡು ಮೂರು ಗಂಟೆಗಳ ಕಾಲ ಬೆಂಕಿ ಉರಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈ ಕಾರ್ಯಾಚರಣೆಯಲ್ಲಿ ತೊಡಗಿರುವ ಎಂಟು ಜನ ಅಗ್ನಿ ಶಾಮಕ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ. ಇನ್ಸ್ಪೆಕ್ಟರ್ಗಳಾದ ರೇವಣ್ಣ ಸಿದ್ದಪ್ಪ (36) ಸಂಪತ್ ರಾಜ್ (35) ಇನ್ಸ್ಪೆಕ್ಟರ್ ಸಿದ್ದೇಗೌಡ (34), ಜಿ. ಕೃಷ್ಣ ಸ್ವಾಮಿ ಹಾಗೂ ಹೆಡ್ ಕಾನ್‌ಸ್ಟೇಬಲ್ ಸೋಮಶೇಖರ್, ಹೆಡ್ ಕಾನ್‌ಸ್ಟೇಬಲ್, ಫೈರ್ ಮ್ಯಾನ್ ಸೋಮನಾಥ್, ಆನಂದ್, ಕೋಟ್ರೇಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಅಗ್ನಿ ದುರಂತದಲ್ಲಿ ಪಂಜರದಲ್ಲಿದ್ದ ಪಾರಿವಾಗಳ ಮಾರಣ ಹೋಮವಾಗಿದೆ. ಬೆಂಕಿ ಬಿದ್ದ ಜಾಗದಲ್ಲಿ ಬಿಸಿಯ ಬೇಗೆಗೆ ಪಾರಿವಾಳಗಳು ಬೆಂದು ಹೋಗಿದೆ. ಮಾನವೀಯತೆ ದೃಷ್ಟಿಯಿಂದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಪಂಜರದಲ್ಲಿದ್ದ ಪಾರಿವಾಳಗಳನ್ನ ರಕ್ಷಣೆ ಮಾಡಿದ್ದಾರೆ.