ಬೆಂಗಳೂರು: ಜೆಎಂಬಿ ಭಯೋತ್ಪಾದಕರ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಸಿದ್ದು, 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಓದಿ: ದುಬಾರಿ ಬೆಲೆಗೆ ಮಾರಲು ಅಕ್ರಮ ಮದ್ಯ ಸಂಗ್ರಹ: ಬೆಳಗಾವಿ ಪೊಲೀಸರಿಂದ 436 ಮದ್ಯದ ಬಾಟಲಿ ಸೀಜ್
ನಜೀರ್ ಶೇಖ್ ಪಟ್ಲ, ಹ್ಯಾರೀಫ್ ಹುಸೇನ್ ಅಲಿಯಾಸ್ ಮೋಟಾ, ಆಸೀಫ್ ಇಕ್ಬಾಲ್, ಜಹೀದುಲ್ಲ ಇಸ್ಲಾಂ, ಮುಸ್ತಾಪ್ ಇಸ್ಸುರ್ ರೆಹಮಾನ್, ಆದಿಲ್ ಶೇಕ್ ಅಲಿಯಾಸ್, ಅಸ್ಸಾದ್ ಉಲ್ಲಾ, ಅಬ್ದುಲ್ ಕರೀಂ, ಮುಸಾರಾಪ್ತಾ ಹುಸೇನ್ ಸೇರಿದಂತೆ 11 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಫೆಬ್ರವರಿ 2018ರಲ್ಲಿ ಮಾಲ್ ಎ ಗಣಿಮತ್ನಲ್ಲಿ ಜೆಎಂಬಿ ಭಯೋತ್ಪಾದಕ ಸಂಘಟನೆಗಾಗಿ ಹಣ ಸಂಗ್ರಹಕ್ಕೆ ಸಂಚು ರೂಪಿಸಿದ್ದರು. ಈ ಘಟನೆ ಸಂಬಂಧ ಕೆಆರ್ಪುರಂ ಹಾಗೂ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ವಿದ್ವಂಸಕ ಕೃತ್ಯ ಎಸಗಲು ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಸ್ತುಗಳ ಸಂಗ್ರಹಕ್ಕೆ ಆರೋಪಿಗಳು ಯತ್ನಿಸಿದ್ದು, ಜೆಎಂಬಿ ತನ್ನ ಸಂಘಟನೆ ಜಾಲ ವಿಸ್ತರಿಸುವ ಮೊದಲೇ ಆರೋಪಿಗಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಎನ್ಐಎ ಹುಡುಕಾಟ ಮುಂದುವರೆಸಿದೆ.