ETV Bharat / state

ತ್ಯಾಜ್ಯದ ಟೆಂಡರ್​: ಇಂದೋರ್ ಮಾದರಿಯಲ್ಲಿ ಬದಲಾವಣೆಗೆ ಮುಂದಾದ ಬಿಬಿಎಂಪಿ ಮೇಯರ್​ - ತ್ಯಾಜ್ಯದ ಟೆಂಡರ್

ಬಿಬಿಎಂಪಿ ಈ ಹಿಂದೆ ಸಿದ್ಧಪಡಿಸಿದ್ದ ಹಸಿ ತ್ಯಾಜ್ಯದ ಟೆಂಡರ್​ನಲ್ಲಿ ಬದಲಾವಣೆ ತಂದು ಹಸಿ ಹಾಗೂ ಒಣಕಸ ಒಟ್ಟಿಗೆ ಟೆಂಡರ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಇಂದೋರ್ ಮಾದರಿಯಲ್ಲಿ ಮೊದಲು ನಾಲ್ಕು ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ಬಳಿಕ ಮೂರು ತಿಂಗಳಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಹಳೆಯ ಟೆಂಡರ್​ನ್ನು ಸ್ವಲ್ಪ ಬದಲಾವಣೆಯೊಂದಿಗೆ ಜಾರಿಗೆ ತರಲಾಗುವುದು ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

mayor gowtham kumar
ಮೇಯರ್ ಗೌತಮ್ ಕುಮಾರ್
author img

By

Published : Jan 1, 2020, 7:42 AM IST

ಬೆಂಗಳೂರು: ಬಿಬಿಎಂಪಿ ಈ ಹಿಂದೆ ಸಿದ್ಧಪಡಿಸಿದ್ದ ಹಸಿ ತ್ಯಾಜ್ಯದ ಟೆಂಡರ್​ನಲ್ಲಿ ಬದಲಾವಣೆ ತಂದು ಹಸಿ ಹಾಗೂ ಒಣ ಕಸ ಒಟ್ಟಿಗೆ ಟೆಂಡರ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

ಮೇಯರ್ ಗೌತಮ್ ಕುಮಾರ್

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಯರ್, ಸದ್ಯ ಇಂದೋರ್ ಮಾದರಿಯಲ್ಲಿ ಮೊದಲು ನಾಲ್ಕು ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು ಬಳಿಕ ಮೂರು ತಿಂಗಳಲ್ಲಿ ಎಲ್ಲಾ ವಾರ್ಡ್​ಗಳಲ್ಲಿ ಹಳೆಯ ಟೆಂಡರ್​ಅನ್ನು​ ಬದಲಾವಣೆಯೊಂದಿಗೆ ಜಾರಿಗೆ ತರಲಾಗುವುದು. ಕಸದ ವಿಚಾರದಲ್ಲಿ ಈಗಾಗಲೇ ಸಭೆಯಾಗಿದೆ. ನಾಲ್ಕು ವಾರ್ಡ್ ಗಳಲ್ಲಿ ಇಂದೋರ್ ಮಾಡೆಲ್​ನಲ್ಲಿ ಕಸ ನಿರ್ವಹಣೆ ಮಾಡಲಾಗುವುದು. ಮೊದಲನೆಯದಾಗಿ ವಾಹನಗಳ ಬದಲಾವಣೆ ಮಾಡಿ ಒಂದೇ ಕಾಂಪ್ಯಾಕ್ಟರ್​ನ ಎರಡು ವಿಭಾಗಗಳಲ್ಲಿ ಒಣ ಕಸ, ಹಸಿ ಕಸ ಹಾಕಲಾಗುವುದು.

ಹಳೆಯ ಹಸಿ ಕಸ ಟೆಂಡರ್​ನ್ನು ಹಾಗೆಯೇ ಜಾರಿಗೆ ತರಲು ಸಾಧ್ಯವಿಲ್ಲ. ಕಸದ ಟಿಪ್ಪರ್​ಗಳಲ್ಲಿ ಎದುರು ವಿಭಾಗ ಇರಬೇಕು. ಮತ್ತೆ ಸಭೆ ನಡೆಸಿ ವಾಹನ ಖರೀದಿ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು. 80 ಟನ್ ಪ್ರಾಣಿ ತ್ಯಾಜ್ಯ ಸಾಗಿಸಲು ಪ್ರತ್ಯೇಕ ವಾಹನ ಬೇಕು. ಇದಕ್ಕಾಗಿ ಎಲ್ಲವನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಮಾತನಾಡಿ, ವಾಣಿಜ್ಯ ಪ್ರದೇಶಗಳ ಕಸಕ್ಕೂ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಿದೆ. ವಾಣಿಜ್ಯ ಕಟ್ಟಡಗಳಿಂದ ಹೆಚ್ಚು ಒಣಕಸ, ಬಲ್ಕ್ ಜನರೇಟರ್ಸ್ ಕಡೆಯಿಂದ ಹಸಿಕಸ ಹೆಚ್ಚಾಗಿ ರಸ್ತೆ ಮೇಲೆ ಬೀಳುತ್ತದೆ. ಹೀಗಾಗಿ ವಾಣಿಜ್ಯ ಕಟ್ಟಡಗಳಿಂದ ಕಸ ವಿಂಗಡಿಸಿ ನೇರವಾಗಿ ಪ್ರತ್ಯೇಕ ವಿಭಾಗಗಳಿರುವ ಕಾಂಪಾಕ್ಟರ್​ಗಳಲ್ಲಿ ತೆಗೆದುಕೊಂಡು ಹೋಗಲಾಗುವುದು. ಪ್ರತ್ಯೇಕ ಸಮಯ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.

ಹಳೆ ಹಸಿ ತ್ಯಾಜ್ಯದ ಟೆಂಡರ್​ಗೆ ಆಯ್ಕೆಯಾದವರೇ ಒಣಕಸ ತೆಗೆದುಕೊಂಡು ಹೋಗಲು ಸಿದ್ಧರಿದ್ದಾರೆ. ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶ ಎರಡಕ್ಕೂ ಒತ್ತು ನೀಡಿ ಕಸ ಸಂಗ್ರಹಿಸಬೇಕಾಗಿದೆ. ಈಗಾಗಲೇ ಕೇವಲ ಹಸಿ ಕಸ ಟೆಂಡರ್ ಮಾತ್ರ ಮಾಡಲಾಗಿದ್ದು, ಅದರ ಜೊತೆಗೆ ಒಣಕಸ ಸಂಗ್ರಹಿಸುವ ಯೋಜನೆಯನ್ನೂ ಸೇರಿಸಲಾಗುವುದು. ಇದರ ನಿಯಮಗಳನ್ನು ಅಂತಿಮಗೊಳಿಸಬೇಕಾಗಿದೆ ಎಂದು ಮಾಹಿತಿ ನೀಡಿದರು.

Intro:ಹಸಿಕಸ ಪ್ರತ್ಯೇಕ ಟೆಂಡರ್ ಇಲ್ಲ- ತ್ಯಾಜ್ಯದ ಟೆಂಡರ್ ನಲ್ಲಿ ಇಂದೋರ್ ಮಾದರಿಯಲ್ಲಿ ಬದಲಾವಣೆ

ಬೆಂಗಳೂರು: ಬಿಬಿಎಂಪಿ ಈ ಹಿಂದೆ ಸಿದ್ಧಪಡಿಸಿದ್ದ ಹಸಿ ತ್ಯಾಜ್ಯದ ಟೆಂಡರ್ ನಲ್ಲಿ ಬದಲಾವಣೆ ತಂದು, ಹಸಿ ಹಾಗೂ ಒಣಕಸ ಒಟ್ಟಿಗೇ ಟೆಂಡರ್ ಮಾಡುವ ಬಗ್ಗೆ ಚರ್ಚೆ ನಡೀತಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.
ಸಧ್ಯ ಇಂದೋರ್ ಮಾದರಿಯಲ್ಲಿ ಮೊದಲು ನಾಲ್ಕು ವಾರ್ಡ್ ಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು, ಬಳಿಕ ಮೂರು ತಿಂಗಳಲ್ಲಿ ಎಲ್ಲಾ ವಾರ್ಡ್ ಗಳಲ್ಲಿ ಹಳೇಯ ಟೆಂಡರ್ ಅನ್ನೇ ಸ್ವಲ್ಪ ಬದಲಾವಣೆಯೊಂದಿಗೆ ಜಾರಿಗೆ ತರಲಾಗುವುದು ಎಂದು ಮೇಯರ್ ತಿಳಿಸಿದರು.
ಮೇಯರ್ ಗೌತಮ್ ಕುಮಾರ್ ಮಾತನಾಡಿ, ಕಸದ ವಿಚಾರದಲ್ಲಿ ಈಗಾಗಲೇ ಸಭೆಯಾಗಿದೆ. ನಾಲ್ಕು ವಾರ್ಡ್ ಗಳಲ್ಲಿ ಇಂದೋರ್ ಮಾಡೆಲ್ ನಲ್ಲಿ ಕಸ ನಿರ್ವಹಣೆ ಮಾಡಲಾಗುವುದು. ಮೊದಲನೆಯದಾಗಿ ವಾಹನಗಳ ಬದಲಾವಣೆ ಮಾಡಿ, ಒಂದೇ ಕಾಂಪ್ಯಾಕ್ಟರ್ ನಲ್ಲಿ ಎರಡು ವಿಭಾಗಗಳಲ್ಲಿ ಒಣ ಕಸ, ಹಸಿ ಕಸ ಹಾಕಲಾಗುವುದು.
ಹಳೇಯ ಹಸಿ ಕಸ ಟೆಂಡರ್ ನ ಹಾಗೇಯೇ ಜಾರಿಗೆ ತರಲು ಸಾಧ್ಯವಿಲ್ಲ. ಕಸದ ಟಿಪ್ಪರ್ ಗಳಲ್ಲಿ ಎರಡೂ ವಿಭಾಗ ಇರಬೇಕು. ಆರನೇ ತಾರೀಕು ಮತ್ತೆ ಸಭೆ ನಡೆಸಿ ವಾಹನ ಖರೀದಿಯ ಬಗ್ಗೆ ಅಂತಿಮಗೊಳಿಸಲಾಗುವುದು ಎಂದು ಮೇಯರ್ ತಿಳಿಸಿದರು. ಎಂಭತ್ತು ಟನ್ ಪ್ರಾಣಿ ತ್ಯಾಜ್ಯ ಸಾಗಾಣಿಕೆಗೂ ಪ್ರತ್ಯೇಕ ವಾಹನ ಆಗಬೇಕು. ಎಲ್ಲವನ್ನೂ ಸಿದ್ಧಪಡಿಸಲಾಗುತ್ತಿದೆ ಎಂದರು.
ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್ ಮಾತನಾಡಿ,
ವಾಣಿಜ್ಯ ಪ್ರದೇಶಗಳ ಕಸಕ್ಕೂ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಿದೆ. ವಾಣಿಜ್ಯ ಕಟ್ಟಡಗಳಿಂದ ಹೆಚ್ಚು ಒಣಕಸ, ಬಲ್ಕ್ ಜನರೇಟರ್ಸ್ ಕಡೆಯಿಂದ ಹಸಿಕಸ ಹೆಚ್ಚಾಗಿ ರಸ್ತೆ ಮೇಲೆ ಬೀಳುತ್ತವೆ. ಹೀಗಾಗಿ ವಾಣಿಜ್ಯ ಕಟ್ಟಡಗಳಿಂದ ಕಸ ವಿಂಗಡಿಸಿ, ನೇರವಾಗಿ ಪ್ರತ್ಯೇಜ ವಿಭಾಗಗಳಿರುವ ಕಾಂಪಾಕ್ಟರ್ ಗಳಲ್ಲಿ ತೆಗೆದುಕೊಂಡು ಹೋಗಲಾಗುವುದು. ಪ್ರತ್ಯೇಕ ಸಮಯ ನಿಗದಿ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದರು. ಹಳೆ ಹಸಿ ತ್ಯಾಜ್ಯದ ಟೆಂಡರ್ ಗೆ ಆಯ್ಕೆಯಾದವರೇ ಒಣಕಸ ತೆಗೆದುಕೊಂಡು ಹೋಗಲೂ ಸಿದ್ಧರಿದ್ದಾರೆ. ವಸತಿ ಪ್ರದೇಶ ಹಾಗೂ ವಾಣಿಜ್ಯ ಪ್ರದೇಶ ಎರಡಕ್ಕೂ ಒತ್ತು ನೀಡಿ ಕಸ ಸಂಗ್ರಹಿಸಬೇಕಾಗಿದೆ. ಈಗಾಗಲೇ ಕೇವಲ ಹಸಿ ಕಸ ಟೆಂಡರ್ ಮಾತ್ರ ಮಾಡಲಾಗಿದ್ದು, ಅದರ ಜೊತೆಗೇ ಒಣಕಸ ಸಂಗ್ರಹಿಸುವ ಯೋಜನೆಯನ್ನೂ ಸೇರಿಸಲಾಗುವುದು. ಇದರ ನಿಯಮಗಳನ್ನು ಅಂತಿಮಗೊಳಿಸಬೇಕಾಗಿದೆ ಎಂದರು.
ಒಟ್ಟಿನಲ್ಲಿ ನಗರದ ಕಸ ನಿರ್ವಹಣೆ ಇನ್ನೂ ಮೂರು ತಿಂಗಳು ಇದೇ ರೀತಿಯಲ್ಲಿ ಮುಂದುವರಿಯಲಿದ್ದು, ಬಳಿಕ ಹೊಸ ಟೆಂಡರ್ ಜಾರಿಗೆ ಬರುವ ಸಾಧ್ಯತೆ ಇದೆ.

Byte-BH anilkumar, commissioner
2)Gowtham kumar, mayor
ಸೌಮ್ಯಶ್ರೀ
Kn_Bng_03_garbage_tender_bbmp_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.