ETV Bharat / state

ಇಂದು ವಿಕ್ರಮ ಲ್ಯಾಂಡಿಂಗ್​ ಹೇಗಿರುತ್ತೆ... ಇಸ್ರೋ ಅಧ್ಯಕ್ಷರ ಬಾಯಲ್ಲೇ ಕೇಳಿ ಚಂದ್ರಯಾನದ ಸಂಪೂರ್ಣ ಮಾಹಿತಿ

ಹಳೆಯ ಅನುಭವಗಳಿಂದ ಪಾಠ ಕಲಿತಿದ್ದೇವೆ, ಅದನ್ನು ಸರಿ ಪಡಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಫೆಲ್ಯೂವರ್​ಗಳಿಂದ ಬಹಳಷ್ಟು ಕಲಿತಿದ್ದು, ಇಂದು ತಂತ್ರಜ್ಞಾನ ನಮ್ಮ ಊಹೆಗೂ ಮೀರಿ ಮುಂದುವರೆದಿದೆ. ಸರಿಯಾದ ನಿರ್ಧಾರ ಕೈಗೊಳ್ಳಲು ಈ ಹಿಂದಿನ ಹಲವು ಕೆಟ್ಟ ನಿರ್ಧಾರಗಳು ಪಾಠ ಕಲಿಸಿವೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್​ ತಿಳಿಸಿದರು.

author img

By

Published : Aug 20, 2019, 1:31 PM IST

Updated : Sep 6, 2019, 7:22 PM IST

ಸಿವನ್

ಬೆಂಗಳೂರು: ಚಂದ್ರಯಾನ-2 ನೌಕೆಯು​​ ಚಂದ್ರನ ಕಕ್ಷೆಗೆ ಸೇರುವ ಅರ್ಧ ಗಂಟೆ ನಮ್ಮ ಹೃದಯ ಸ್ತಬ್ಧವಾಗಿತ್ತು. ನಾವು ಇದೇ ಮೊದಲ ಬಾರಿಗೆ ಇಂತಹ ಪರೀಕ್ಷೆಗೆ ಒಳಪಡಿಸಿಕೊಂಡಿದ್ದು, ಅಂತಿಮವಾಗಿ ಚಂದ್ರಯಾನ - 2 ಚಂದ್ರನ ಕಕ್ಷೆ ಸೇರಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಅಕ್ಟೋಬರ್​ 20 ರಂದು​ ಸುದ್ದಿಗೋಷ್ಠಿ ನಡೆಸಿ ಘೋಷಿಸಿದ್ದರು.

ಕೆ.ಸಿವನ್ ಮಾಧ್ಯಮಗೋಷ್ಠಿ

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಸಾಫ್ಟ್​ ಲ್ಯಾಂಡಿಂಗ್​ ಸಕ್ಸಸ್​ ರೇಟ್​ ಕೇವಲ 30 ಪರ್ಸೆಂಟ್​ ಇದೆ. ಲ್ಯಾಂಡಿಂಗ್​ ಸ್ಮೂತ್​ ಆಗಿ, ಯಶಸ್ವಿಯಾಗಿ ಮಾಡಲು ನಾವು ಎಲ್ಲ ಶ್ರಮ ಹಾಕಿದ್ದೇವೆ. ಇದರಲ್ಲಿ ನಾವು ಸಕ್ಸಸ್​ ಆಗುತ್ತೇವೆ ಎಂಬ ವಿಶ್ವಾಸ ಇದೆ. ನಮ್ಮ ತಂಡ ದಿನಕ್ಕೆ 17- 18 ಗಂಟೆ ಕೆಲಸ ಮಾಡುತ್ತಿದ್ದು, ಲ್ಯಾಂಡ್​ ಆಗುವವರೆಗೂ ಕೆಲಸ ನಿರಂತರವಾಗಿರಲಿದೆ. ಮಿಷನ್​ ಸಂಪೂರ್ಣವಾಗಿ ಸಕ್ಸಸ್​ ಆದ ಮೇಲೆ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಸಿವನ್ ಹೇಳಿದರು.

ಈಟಿವಿ ಭಾರತ ಜೊತೆ ಸಿವನ್ ಪ್ರತಿಕ್ರಿಯೆ

ಚಂದ್ರಯಾನ-2 ನೌಕೆಯು ಚಂದ್ರನ ಕಕ್ಷೆಯನ್ನು ಸೇರಿದೆ. ಮತ್ತೆ ನಾಳೆ ಮಧ್ಯಾಹ್ನ 1 ಗಂಟೆಗೆ ಮೂರು ಪ್ರಮುಖ ಅಂಶಗಳು ನಡೆಯುತ್ತವೆ. ಹಾಗೆಯೇ 2ನೇ ಸೆಪ್ಟೆಂಬರ್​​​ ಪ್ರಮುಖ ಘಟನೆಗಳು ನಡೆಯುತ್ತವೆ. ಲ್ಯಾಂಡರ್​, ಆರ್ಬಿಟರ್​​ನಿಂದ ಪ್ರತ್ಯೇಕವಾಗಿ ಚಂದ್ರನ ಅಂಗಳದತ್ತ ಹೋಗುತ್ತದೆ. ಆ ಬಳಿಕ ಲ್ಯಾಂಡರ್​ ಸೆಪ್ಟೆಂಬರ್​ 7ರಂದು ಚಂದ್ರನ ಅಂಗಳ ತಲುಪಲಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಲ್ಯಾಂಡರ್​​​​ ಸರಿಯಾಗಿ ತನ್ನದೇ ಹಾದಿಯಲ್ಲಿ ನಡೆಯುತ್ತದೆ ಇಲ್ಲವೇ ಅನ್ನೋದನ್ನ ಆಗಾಗ ಚೆಕ್​ ಮಾಡುತ್ತೇವೆ ಎಂದು ಸಿವನ್​ ತಿಳಿಸಿದರು.

ಇನ್ನು ಚಂದ್ರನ ಅಂಗಳದಲ್ಲಿ 28 ಡಿಗ್ರಿ ಈಸ್ಟ್​ನಲ್ಲಿ ಲ್ಯಾಂಡರ್​ ಲ್ಯಾಂಡ್​ ಆಗಲಿದ್ದು, ಲ್ಯಾಂಡ್​ ಆದ 2 ಗಂಟೆಗಳ ಬಳಿಕ ಕಾರ್ಯಾಚರಣೆ ನಡೆಸಲಿದೆ. 3 ಗಂಟೆಗಳ ಬಳಿಕ ಸೋಲಾರ್​​ ತೆರೆದುಕೊಳ್ಳಲಿದ್ದು, ಬಳಿಕ ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಕಾರ್ಯಾಚರಣೆ ನಡೆಸಲಿದೆ. ನಂತರದ 5 ಗಂಟೆಗಳ ಬಳಿಕ ಲ್ಯಾಂಡರ್​ ಚಂದ್ರನ ದಕ್ಷಿಣ ಧ್ರುವಕ್ಕೆ ಮುತ್ತಿಕ್ಕಿ ಮುನ್ನಡೆಯಲಿದೆ ಎಂದು ಕೆ ಸಿವನ್​ ಲ್ಯಾಂಡರ್​​ನ ಸಂಪೂರ್ಣ ಚಿತ್ರಣ ನೀಡಿದರು.

ಸೆಪ್ಟೆಂಬರ್​ 7ರಂದು ಲ್ಯಾಂಡರ್​​ ಚಂದ್ರನ ಅಂಗಳ ತಲುಪಲಿರುವ ಹಿನ್ನೆಲೆಯಲ್ಲಿ ಈ ಕ್ಷಣಗಳಿಗೆ ಸಾಕ್ಷಿಯಾಗಲು ಪ್ರಧಾನಿಗೆ ಆಮಂತ್ರಣ ನೀಡಿದ್ದೇವೆ. ಅವರು ಭಾಗವಹಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದರು. ಹಾಗೆಯೇ 7ನೇ ಸೆಪ್ಟೆಂಬರ್ ಚಂದ್ರನ ಅಂಗಳಕ್ಕೆ ಲ್ಯಾಂಡರ್​ ತಲುಪುವುದು ಕೇವಲ ಆರಂಭವಷ್ಟೇ, ಅಲ್ಲಿ ಹೇಗೆ ಲ್ಯಾಂಡ್​ ಆಗುತ್ತೆ ಅನ್ನೋದು ಕಠಿಣ ಹಾದಿಯಾಗಿದೆ. ಯಾವ ರೀತಿ ಆಗುತ್ತದೆ ಎನ್ನುವುದನ್ನು ನೋಡಬೇಕಿದ್ದು, ಅವೆಲ್ಲವನ್ನೂ ನಿಯಂತ್ರಣ ಮಾಡಬೇಕಿದೆ ಎಂದು ಹೇಳಿದರು.

ಲ್ಯಾಂಡರ್​ ಚಂದ್ರನ ಅಂಗಳಕ್ಕೆ ಸಮೀಪವಾಗಿ ಲ್ಯಾಂಡ್​ ಆಗುವ ಆಧಾರದ ಮೇಲೆ ಮುಂದಿನ ಕಾರ್ಯಾಚರಣೆ ಅಂಶಗಳು ಏನು ಎಂಬುದು ಗೊತ್ತಾಗುತ್ತದೆ. ಸೆ.7ರ ಬೆಳಗ್ಗೆ 1:43ರ ವೇಳೆಗೆ ಲ್ಯಾಂಡರ್​ ಚಂದ್ರನ ಅಂಗಳದಲ್ಲಿ ಲ್ಯಾಂಡ್​ ಆಗಲಿದೆ. ಲ್ಯಾಂಡರ್​ ಹಾಗೂ ರೋವರ್​​​ ಏನು ಮಾಡುತ್ತವೆ ಎಂಬುದರ ಬಗ್ಗೆ ಲ್ಯಾಂಡಿಂಗ್​ ಆಗಿ 5 ಗಂಟೆ ಬಳಿಕ ಎಲ್ಲ ಮಾಹಿತಿ ಲಭ್ಯವಾಗಲಿದೆ ಎಂದು ಚಂದ್ರಯಾನದ ಎಲ್ಲ ಮಾಹಿತಿಯನ್ನ ಮಾಧ್ಯಮದವರ ಎದುರು ಬಿಚ್ಚಿಟ್ಟರು.

ಈ ಯಾನದ ಹಾದಿಯಲ್ಲಿ ಟೆನ್ಷನ್​ ಹಾಗೂ ಸಂತಸ ಎರಡೂ ಅನುಭವ ಆಗಿದೆ. ಚಂದ್ರನ ಕಕ್ಷೆ ನಿರಂತರವಾಗಿ ಅನಿಶ್ಚಿತವಾಗಿರಲಿದ್ದು, ಅಂದಾಜು ಮಾಡುವುದು ತುಂಬಾ ಕಠಿಣವಾಗಿದೆ. ನಾವು ಒಂದು ನಿಗದಿತ ಗುರಿ ನಿಗದಿ ಮಾಡಿದ್ದು, ನಮ್ಮ ಲೆಕ್ಕಾಚಾರದಂತೆ ಚಂದ್ರಯಾನವನ್ನ ನಿಯಂತ್ರಣ ಮಾಡುತ್ತಿದ್ದೇವೆ. ಅದರ ಆಧಾರದ ಮೇಲೆ ನಾವು ನಮ್ಮ ತಂಡ ಕಾರ್ಯಾಚರಣೆ ಮಾಡುತ್ತದೆ. ಅಂತಾರಾಷ್ಟ್ರೀಯ ಮಾನದಂಡಗಳ ಮೇಲೆಯೇ ಚಂದ್ರಯಾನ ಕಾರ್ಯಾಚರಣೆ ಮಾಡುತ್ತಿದೆ. ಹಳೆಯ ಅನುಭವಗಳಿಂದ ಪಾಠ ಕಲಿತಿದ್ದೇವೆ, ಅದನ್ನು ಸರಿ ಪಡಿಸಿಕೊಂಡು ಮುನ್ನಡೆಯುತ್ತಿದ್ದೇವೆ. ಫೆಲ್ಯೂವರ್​ಗಳಿಂದ ಬಹಳಷ್ಟು ಕಲಿತಿದ್ದು, ಇಂದು ತಂತ್ರಜ್ಞಾನ ನಮ್ಮ ಊಹೆಗೂ ಮೀರಿ ಮುಂದುವರೆದಿದೆ. ಸರಿಯಾದ ನಿರ್ಧಾರ ಕೈಗೊಳ್ಳಲು ಈ ಹಿಂದಿನ ಹಲವು ಕೆಟ್ಟ ನಿರ್ಧಾರಗಳು ಪಾಠ ಕಲಿಸಿವೆ ಎಂದರು.

ಇನ್ನು ರೋವರ್​ ನೇರವಾಗಿ ಭೂಮಿಗೆ ಸಂದೇಶ ಕಳುಹಿಸುವುದಿಲ್ಲ. ರೋವರ್​ ಲ್ಯಾಂಡರ್​​ಗೆ ಸಂಪರ್ಕ ಕಲ್ಪಿಸುತ್ತದೆ, ಬಳಿಕ ಲ್ಯಾಂಡರ್​ ಭೂಮಿಗೆ ಸಂದೇಶ ಕಳುಹಿಸುತ್ತವೆ. ಮೆಗ್ನಿಷಿಯಂ, ಕ್ಯಾಲ್ಸಿಯಂ, ನೀರು, ಕಬ್ಬಿಣ ಹೀಗೆ ಎಲ್ಲವನ್ನು ರೋವರ್ ಅಧ್ಯಯನ ಮಾಡುತ್ತದೆ. ಲೋಹಗಳು ಹಾಗೂ ಚಂದ್ರನ ಅಂಗಳದಲ್ಲಿನ ಹವಾಮಾನದ ಅಧ್ಯಯನ ನಡೆಸಲಿದ್ದು, ಚಂದ್ರನ ಮೇಲ್ಮೈ ಹಾಗೂ ಒಳ ಮೈ ಅಧ್ಯಯನ ನಡೆಸಿ ಭೂಮಿಗೆ ಸಂದೇಶ ಕಳುಹಿಸಲಿದೆ ಎಂದು ತಿಳಿಸಿದರು.

ವಿಶ್ವದ ಗಮನ ಚಂದ್ರಯಾನದತ್ತ:

ಇಡಿ ವಿಶ್ವವೇ ಈಗ ಚಂದ್ರಯಾನದ ಕಡೆ ಮುಖ ಮಾಡಿದೆ, ಲ್ಯಾಂಡರ್​ ಏನು ವಿಷಯ ಹೆಕ್ಕಿ ತೆಗೆಯುತ್ತಿದೆ ಎಂಬ ಬಗ್ಗೆ ಕಾತರವಾಗಿದೆ. ಅದು ಕಳುಹಿಸುವ ಡೇಟಾ ಮೇಲೆ ನಾಸಾ ಸೇರಿ ವಿಶ್ವವೇ ಕಣ್ಣಿಟ್ಟಿದೆ. ಮುಂದಿನ ದಿನಗಳಲ್ಲಿ ಇಸ್ರೋ ಕೆಮಿಕಲ್​ ಹಾಗೂ ಮಿನರೆಲ್ಸ್​ ಬಗ್ಗೆ ಸಂಪೂರ್ಣ ಅಧ್ಯಯನ ನಡೆಸಲಿದೆ. 14 ದಿನಗಳಲ್ಲಿ ಮೀಟರ್​ ಪರ್​ ಸೆಕೆಂಡ್ ನಂತೆ ಲ್ಯಾಂಡರ್​ ಸಂಚರಿಸಲಿದೆ. ಇಸ್ರೋಗೆ ಇರುವ ಮೊದಲ ಸವಾಲು ಲ್ಯಾಂಡರ್​ ಲ್ಯಾಂಡಿಂಗ್​​ನದ್ದಾಗಿದೆ. ಚಂದ್ರನ ಕಕ್ಷೆಯಿಂದ ಚಂದ್ರನ ಅಂಗಳಕ್ಕೆ ಲ್ಯಾಂಡರ್​- ರೋವರ್​ ಇಳಿಯುವುದರ ವೇಗ ನಿಯಂತ್ರಣ ಮಾಡುವುದೇ ದೊಡ್ಡ ಸವಾಲಾಗಿದೆ. ನಾವು ಕೈಗೊಂಡಿರುವ ಮಿಷನ್​ ಪ್ಲಾನ್​ ನಮಗೆ ಹೊಸದಾಗಿದ್ದು, ಪ್ರತಿಯೊಂದು ಹಂತವೂ ನಮಗೆ ಹೊಸದಾಗಿದೆ ಎಂದರು ಸಿವನ್.​

ಧೂಳೇ ಲ್ಯಾಂಡಿಂಗ್​​ಗೆ ಸವಾಲು: ಇನ್ನು ಚಂದ್ರನ ಮೇಲಿನ ಧೂಳು ದೊಡ್ಡ ಸವಾಲಾಗಿದ್ದು, ಲ್ಯಾಂಡರ್​​ ಲ್ಯಾಂಡಿಂಗ್​ ಸಮಯದಲ್ಲಿ ಹೇಗೆ ವರ್ತಿಸುತ್ತೆ ಅನ್ನೋದೇ ಕುತೂಹಲಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ನಾಲ್ಕು ಎಂಜಿನ್ ಬಂದ್​ ಆಗಿರುತ್ತದೆ. ಒಂದು ಎಂಜಿನ್​ ಮಾತ್ರ ಕಾರ್ಯಾಚರಣೆ ಮಾಡುತ್ತದೆ. ಇದರಲ್ಲಿ ಒಂದು ಎಂಜಿನ್​ ಮಾತ್ರ ಕಾರ್ಯಾಚರಣೆ ಮಾಡಿ, ಡಸ್ಟ್​ ನಿಯಂತ್ರಣ ಮಾಡುತ್ತದೆ ಎಂದರು.

ರೋವರ್​ - ಲ್ಯಾಂಡರ್​ ಲ್ಯಾಂಡಿಂಗ್​ ಸ್ವಿಚ್ಡ್​ ಆಫ್​ ಸ್ವಿಚ್ಡ್​​ ಆನ್​ ಥರ ಅಲ್ಲ, ಅದನ್ನ ಸರಳ ಮಾಡಿ ಹೇಳಲು ಸಾಧ್ಯವಿಲ್ಲ ಎಂದು ಆರ್ಬಿಟರ್​​ ಹಾಗೂ ಲ್ಯಾಂಡರ್​ ಬಗ್ಗೆ ವಿವರಣೆ ನೀಡಿದ ಸಿವನ್, ​ಆರ್ಬಿಟರ್​​ನಿಂದ ಲ್ಯಾಂಡ್​ ರೋವರ್​ ಬೇರ್ಪಡುತ್ತದೆ. ಆಗ ನಾವು ಎರಡು ಕಾರ್ಯಾಚರಣೆ ಮಾಡಬೇಕಾಗುತ್ತದೆ. ರೋವರ್​ ಬೇರ್ಪಡೆಯಾಗುತ್ತಿದ್ದಂತೆ ಆರ್ಬಿಟರ್​ ಸಂಪರ್ಕ ಕಳೆದುಕೊಳ್ಳುವುದಿಲ್ಲ. ಎರಡೂ ಒಂದಕ್ಕೊಂದು ನಿಯಂತ್ರಣದಲ್ಲಿ ಇರುತ್ತದೆ ಎಂದು ಚಂದ್ರಯಾನ -2 ವಿವರಣೆ ನೀಡಿದರು ಇಸ್ರೋ ಅಧ್ಯಕ್ಷ ಕೆ ಸಿವನ್.​

Intro:Body:

Chandrayaan2 Lunar Orbit Insertion: ISRO Chairman Dr. K. Sivan press meet 

Conclusion:
Last Updated : Sep 6, 2019, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.