ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಚಂದ್ರ ಲೇಔಟ್ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
![seized jewellery](https://etvbharatimages.akamaized.net/etvbharat/prod-images/kn-bng-04-software-engineer-house-theft-house-maid-arrested-ka10032_06032022172522_0603f_1646567722_481.jpg)
ಇಂಜಿನಿಯರೋರ್ವರ ಮನೆಯಲ್ಲಿ ಚಿನ್ನಾಭರಣ ಕಳ್ಳತನ ನಡೆದಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಚಂದ್ರಕಲಾ ಎಂಬ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆ ಕಳೆದ 15 ವರ್ಷಗಳಿಂದ ಇಂಜಿನಿಯರ್ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ಕಳೆದ ಕೆಲ ದಿನಗಳ ಹಿಂದೆ ಅಧಿಕಾರಿಯ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಮಹಿಳೆ 1.35 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಕಳ್ಳತನ ಮಾಡಿದ್ದಳು ಎನ್ನಲಾಗ್ತಿದೆ. ಸದ್ಯ ಪೊಲೀಸರ ಅತಿಥಿಯಾಗಿದ್ದಾಳೆ.
ಕ್ಯಾಮರಾ ಸರಣಿ ಕಳ್ಳತನದ ಆರೋಪಿ ಅಂದರ್:
![seized camera](https://etvbharatimages.akamaized.net/etvbharat/prod-images/kn-bng-03-camera-theft-accused-arrested-ka10032_06032022161604_0603f_1646563564_161.jpg)
ನಗರದ ವಿವಿಧ ಸ್ಟುಡಿಯೋಗಳಲ್ಲಿ ಬೆಲೆ ಬಾಳುವ ಕ್ಯಾಮರಾಗಳನ್ನು ಸರಣಿ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ಪುರುಷೋತ್ತಮ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನಿಂದ 3.65 ಲಕ್ಷ ರೂ ಬೆಲೆ ಬಾಳುವ ಕಂಪನಿಯ ನಾಲ್ಕು ಕ್ಯಾಮರಾಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಚ್ಚೆತ್ತ ಸೈಬರ್ ಪೊಲೀಸರು: 35 ಅನಧಿಕೃತ ಲೋನ್ ಆ್ಯಪ್ಗಳ ವಿರುದ್ಧ 9 ಎಫ್ಐಆರ್ ದಾಖಲು