ಬೆಂಗಳೂರು: ತಮ್ಮ ಗ್ಯಾಂಗ್ ಮೆಂಬರ್ನನ್ನು ಅರೆಸ್ಟ್ ಮಾಡಿದಕ್ಕೆ ಪೊಲೀಸರಿಗೆ ಖದೀಮರು ಚಾಲೆಂಜ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಡಿಜಿಪಿ ರಾಘವೇಂದ್ರ ಔರಾಧ್ಕರ್ ಟ್ವಿಟರ್ ಅಕೌಂಟ್ ಹ್ಯಾಕ್ ಆದ ಹಿನ್ನೆಲೆ ಸೈಬರ್ ಇನ್ಸ್ಫೆಕ್ಟರ್ ಪ್ರಶಾಂತ್ ಬಾಬು ಹಾಗೂ ಅವರ ತಂಡ ಉತ್ತರ ಪ್ರದೇಶ ಮೂಲದ ಆನ್ ಲೈನ್ ವಂಚಕನನ್ನು ನೋಯ್ಡಾದಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದರು.
ನಗರಕ್ಕೆ ಕರೆ ತರುತ್ತಿದ್ದಂತೆಯಯೇ ವಂಚಕ ಗ್ಯಾಂಗ್ನ ಇತರ ಆರೋಪಿಗಳು ಸೈಬರ್ ಇನ್ಸ್ಫೆಕ್ಟರ್ ಪ್ರಶಾಂತ್ ಬಾಬುಗೆ ನಕಲಿ ಸಿಮ್ ಮೂಲಕ ಸಂದೇಶ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ನಮ್ಮ ಗ್ಯಾಂಗ್ ಸದಸ್ಯನನ್ನ ಬಂಧಿಸಿದ್ದೀರಿ, ಮುಂದೆ ಇದರ ಪರಿಣಾಮ ನೋಡ್ಬೇಕಾಗುತ್ತೆ ಎಂದಿದ್ದಾರೆ. ಹಾಗೆ ನಕಲಿ ಸಿಮ್ನ ನಂಬರ್ಗೆ ಡಿಪಿಯಾಗಿ ಇನ್ಸ್ ಪೆಕ್ಟರ್ ಪ್ರಶಾಂತ್ ಬಾಬು ಫೋಟೋ ಹಾಕಿದ್ದಾರೆ. ಸದ್ಯ ಸೈಬರ್ ಪೊಲೀಸ್ ಠಾಣೆಗೆ ಸೈಬರ್ ಇನ್ಸ್ಫೆಕ್ಟರ್ ಪ್ರಶಾಂತ್ ಬಾಬು ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.