ETV Bharat / state

ರಾಜ್ಯದಲ್ಲಿ ಕಾಂಗ್ರೆಸ್ಸಿನ ಲೂಟಿ ಕಾರ್ಯಕ್ರಮ ಮುಂದುವರಿದಿದೆ: ಛಲವಾದಿ ನಾರಾಯಣಸ್ವಾಮಿ

ಕಾಂಗ್ರೆಸ್​ ಪಕ್ಷದಲ್ಲಿ ಮಾತ್ರವಲ್ಲ, ಸರ್ಕಾರದಲ್ಲೂ ಎರಡು ಗುಂಪುಗಳಿವೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

chalavadi-narayanaswamy-reaction-on-congress-government
ರಾಜ್ಯದಲ್ಲಿ ಕಾಂಗ್ರೆಸ್​ನ ಲೂಟಿ ಕಾರ್ಯಕ್ರಮ ಮುಂದುವರಿದಿದೆ: ಛಲವಾದಿ ನಾರಾಯಣಸ್ವಾಮಿ ಆರೋಪ
author img

By

Published : Aug 11, 2023, 5:39 PM IST

ಬೆಂಗಳೂರು: "ರಾಜ್ಯದಲ್ಲಿ ಸಿಎಂ ನೇತೃತ್ವದ ಸಿಂಡಿಕೇಟ್ ಸರ್ಕಾರ, ಡಿಸಿಎಂ ನೇತೃತ್ವದ ಇಂಡಿಕೇಟ್ ಸರ್ಕಾರವಿದ್ದು, ಇಬ್ಬರ ನೇತೃತ್ವದಲ್ಲಿ ಸಚಿವ ಸಂಪುಟ ಸುಲಿಗೆಗಿಳಿದಿದೆ" ಎಂದು ಬಿಜೆಪಿ ಎಸ್​ಸಿ ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯದಲ್ಲಿ ಕಾಂಗ್ರೆಸ್​ನ ಲೂಟಿ ಕಾರ್ಯಕ್ರಮ ಮುಂದುವರಿದಿದೆ" ಎಂದು ವಾಗ್ದಾಳಿ ನಡೆಸಿದರು.

"ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಎರಡು ಗುಂಪುಗಳಿವೆ. ಪಕ್ಷದಲ್ಲಿ ಮಾತ್ರ ಅಲ್ಲ, ಸರ್ಕಾರದಲ್ಲೂ ಎರಡು ಗುಂಪುಗಳಿವೆ. ಒಂದು ಇಂಡಿಕೇಟ್ ಸರ್ಕಾರ ಮತ್ತೊಂದು ಸಿಂಡಿಕೇಟ್ ಸರ್ಕಾರ, ಇಂಡಿಕೇಟ್ ಸರ್ಕಾರ ಡಿಸಿಎಂದು, ಸಿಂಡಿಕೇಟ್ ಸರ್ಕಾರ ಸಿದ್ದರಾಮಯ್ಯರದ್ದು. ಸುಲಿಗೆಯ ಪೈಪೋಟಿಯಲ್ಲಿ ಇಬ್ಬರೂ ಇಳಿದಿದ್ದಾರೆ. ಹೈಕಮಾಂಡ್ ಇಲ್ಲಿನ ಸಿಎಂ, ಡಿಸಿಎಂಗೆ ಟಾರ್ಗೆಟ್ ಕೊಟ್ಟಿದೆ, ಇಂಡಿಕೇಟ್​ಗೆ ತೆಲಂಗಾಣ ಚುನಾವಣೆ ಜವಾಬ್ದಾರಿ ಕೊಟ್ಟಿದ್ದಾರೆ. ಸಿಂಡಿಕೇಟ್​ಗೆ ಮಧ್ಯಪ್ರದೇಶ ಚುನಾವಣೆಯ ಜವಾಬ್ದಾರಿಯ ಜೊತೆಗೆ, ಪ್ರತಿ ಮಂತ್ರಿಗಳಿಗೂ ಜವಾಬ್ದಾರಿ ಕೊಟ್ಟು ಸುಲಿಗೆ ಮಾಡುತ್ತಿದ್ದಾರೆ. ಇವರಿಂದ ಜನರ ಮೇಲೆ ಸುಲಿಗೆಯ ಹೊರೆಬೀಳುತ್ತಿದೆ" ಎಂದು ದೂರಿದರು.

"ಸೋಷಿಯಲ್ ಮೀಡಿಯಾದ ಬಿಜೆಪಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಉಡುಪಿ ಕೇಸ್​ನಲ್ಲಿ ತುಮಕೂರಿನ ಶಕುಂತಲಾ ಧ್ವನಿ ಎತ್ತಿದಾಗ ಅವರನ್ನು ಅರೆಸ್ಟ್ ಮಾಡಿದ್ದರು. ನಾವು ಹೇಳಿದ ನಂತರ ಅವರನ್ನು ಬಿಟ್ಟು ಕಳುಹಿಸಿದರು, ಹೀಗೆ ಬೇಕಾದಷ್ಟು ಜನರನ್ನು ಅರೆಸ್ಟ್ ಮಾಡುವ ಕೆಲಸ ನಡೆಯುತ್ತಿದೆ. ಮಂಡ್ಯದಲ್ಲಿ ಪೇ ಸಿಎಸ್ ಪೋಸ್ಟರ್​ ಹಾಕಿದ್ದಕ್ಕೆ ಅವರ ಮೇಲೆ ಎಫ್ಐಆರ್ ಹಾಕಿದ್ದಾರೆ. ಕರ್ನಾಟಕದಲ್ಲಿ ಏನು ಕಮ್ಯುನಿಸ್ಟ್ ಸರ್ಕಾರದ ಅಧಿಕಾರನಾ?, ನಾವು ಡಿಜಿಗೆ ಇದರ ಬಗ್ಗೆ ಮನವಿ ಮಾಡುತ್ತೇವೆ. ಸಿಎಂ, ಡಿಸಿಎಂ ಬಿಜೆಪಿ ಕಾರ್ಯಕರ್ತರನ್ನು ಹದ್ದು ಬಸ್ತಿನಲ್ಲಿ ಇಡಲು ಹೊರಟಿದ್ದರೆ ಅದು ನಿಮ್ಮಿಂದ ಸಾಧ್ಯವಿಲ್ಲ" ಎಂದರು.

"ಸಚಿವ ಪ್ರಿಯಾಂಕ್​ ಖರ್ಗೆ ಶಕ್ತಿ ಯೋಜನೆಗೆ ಸರ್ಟಿಫಿಕೇಟ್ ಕೇಳ್ತೀನಿ ಅಂತಾ ಹೇಳಿದ್ದಾರೆ. ಬಸ್ಸಿನಲ್ಲಿ ಓಡಾಡುವವರು ಎಸ್​ಸಿ, ಎಸ್​ಟಿ ಸರ್ಟಿಫಿಕೇಟ್ ತಗೊಂಡು ಪ್ರಯಾಣ ಮಾಡಬೇಕಾ?. ಜಾತಿ ಗುರುತಿಸಿ ಅಧಿಕಾರ ನಡೆಸಿದರೆ, ಇದಕ್ಕಿಂತ ದುರಾಡಳಿತ ಬೇರೊಂದು ಇಲ್ಲ. ಬಸ್ಸು ಹತ್ತುವ ಮಹಿಳೆಯನ್ನು ಯಾವ ಜಾತಿ ಅಂದರೆ? ಇದು ಎಷ್ಟರ ಮಟ್ಟಿಗೆ ಸರಿ?. ಎಸ್​ಸಿಪಿ, ಟಿಎಸ್​ಪಿಯ 11 ಸಾವಿರ ಕೋಟಿ ಹಣವನ್ನು ದಲಿತರಿಗೆ ಮಾತ್ರ ಬಳಸಬೇಕು. ಈ ರೀತಿ ಜಾತಿ ಹೆಸರಲ್ಲಿ ಅಪಮಾನ ಮಾಡೋದನ್ನು ನಿಲ್ಲಿಸಬೇಕು" ಎಂದು ಆಗ್ರಹಿಸಿದರು.

ಭಗವಂತ ಖೂಬಾ ಮೇಲೆ ಶಾಸಕ ಪ್ರಭು ಚೌಹಾಣ್ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿ, "ಇಬ್ಬರು ನಮ್ಮ ಪಕ್ಷದ ಮುಖಂಡರು, ಅವರ ಮಧ್ಯೆ ಏನು ನಡೆದಿದೆ ಎಂದು ಗೊತ್ತಿಲ್ಲ. ನಮ್ಮ ಪಕ್ಷದ ಅಧ್ಯಕ್ಷರು ಈಗಾಗಲೇ ಅವರ ಜೊತೆ ಮಾತಾಡಿದ್ದಾರೆ, ಪ್ರಭು ಚೌಹಾಣ್ ಸುಳ್ಳು ಆರೋಪ ಮಾಡಿದರೆ ಅವರ ವಿರುದ್ಧ ಕ್ರಮವೂ ಆಗುತ್ತದೆ. ಖೂಬಾ ಮತ್ತು ಚೌಹಾಣ್ ಇಬ್ಬರೂ ಹೇಳಿದ್ದನ್ನು ನಾವು ಒಪ್ಪಲ್ಲ. ದಲಿತ ಶಾಸಕನಿಗೆ ಅನ್ಯಾಯ ಮಾಡುವುನ್ನು ಪಕ್ಷ ಸಹಿಸೋದಿಲ್ಲ. ಇದರ ಬಗ್ಗೆ ಪಕ್ಷ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ, ನಮ್ಮ ಪಕ್ಷದ ಹಿರಿಯರು ಈ ವಿಚಾರದಲ್ಲಿ ಮಾತನಾಡುತ್ತಾರೆ" ಎಂದರು.

ಇದನ್ನೂ ಓದಿ: ಗುತ್ತಿಗೆದಾರರಿಗೆ ನ್ಯಾಯ ಒದಗಿಸಲು ರಾಜ್ಯಪಾಲರು ಮಧ್ಯ ಪ್ರವೇಶಿಸಬೇಕು: ಗೋಪಾಲಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.