ETV Bharat / state

ಕಿಟಕಿ ಪಕ್ಕ ಮಲಗಿದ್ದವರೇ ಈತನ ಟಾರ್ಗೆಟ್ : ರಾತ್ರಿ ಸರ ಕದ್ದು ಪರಾರಿಯಾಗ್ತಿದ್ದ ಕಳ್ಳ ಅಂದರ್

ಚೋರ್ ರಫಿಯನ್ನು ಬಂಧಿಸಿರುವ ಮಾಗಡಿ ರೋಡ್ ಪೊಲೀಸರು, ಈತನಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು‌ ಕೆಜಿ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಇನ್ನೂ ಹೆಚ್ಚಿನ ವಿಚಾರಣೆ ಮುಂದುವರಿದಿದೆ..

bengaluru
ಚೋರ್ ರಫಿ
author img

By

Published : Jun 29, 2021, 3:54 PM IST

ಬೆಂಗಳೂರು : ಕಿಟಕಿ ಪಕ್ಕ ಮಲಗಿರುವವರ ಸರವನ್ನು ಈಸಿಯಾಗಿ ಎಗರಿಸಿ ಎಸ್ಕೇಪ್​ ಆಗ್ತಿದ್ದ ಖತರ್ನಾಕ್ ಕಳ್ಳನನ್ನ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ‌‌. ರಾತ್ರಿ ವೇಳೆಯಲ್ಲಿ ಮನೆಯ ಕಿಟಕಿ ಪಕ್ಕ ಮಲಗುವವರೇ ಇವನ ಟಾರ್ಗೆಟ್​​. ಎಲ್ಲರೂ ಮಲಗುವುದನ್ನೇ ಹೊಂಚು ಹಾಕಿ ಕಾದು ರಾತ್ರಿ 3 ಗಂಟೆ ವೇಳೆಯಲ್ಲೇ ಈತ ಕಳ್ಳತನ‌ ಮಾಡಲು ಮುಂದಾಗುತ್ತಿದ್ದ.

ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಜನರಿಗೆ ಅನುಮಾನ ಬರಬಾರದು ಅಂತ ಕುಡಿದು ಬರ್ತಿದ್ದ. ಕುಡಿದು ಬಂದ್ರೆ ಕಳ್ಳತನ ಮಾಡುವಾಗ ಸಿಕ್ಕಿ ಹಾಕಿಕೊಂಡ್ರೂ, ತಾನು ಕಳ್ಳತನ ಮಾಡಲು ಬಂದಿದ್ದೇನೆ ಎಂದು ಜನರಿಗೆ ಅನುಮಾನ ಬರಲ್ಲ, ಕುಡಿದ ಮತ್ತಿನಲ್ಲಿ ಬಂದಿದ್ದಾನೆ ಅಂತ ಹಾಗೇ ಬಿಟ್ಟು ಬಿಡ್ತಾರೆ ಎಂದು ಮೊದಲೇ ಪ್ಲಾನ್ ಮಾಡಿಕೊಂಡು ಕಳ್ಳತನಕ್ಕೆ ಇಳಿಯುತ್ತಿದ್ದ.

bengaluru
ಸರಗಳ್ಳರ ಬಂಧನ

ಈ ಸರಗಳ್ಳನ ಹೆಸರು ಸೈಯದ್ ರಫಿ ಅಲಿಯಾಸ್ ಚೋರ್ ರಫಿ.. ಈ ಆರೋಪಿ ನಗರದ ಮಾಗಡಿ ರೋಡ್, ಬಸವೇಶ್ವರ ನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಇದೇ ರೀತಿ ಕಳ್ಳತನ ಮಾಡಿದ್ದಾನೆ. ಈಗಾಗಲೇ ಈತನ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಾಗಿವೆ.

bengaluru
ಚೋರ್ ರಫಿ

ಚೋರ್ ರಫಿಯನ್ನು ಬಂಧಿಸಿರುವ ಮಾಗಡಿ ರೋಡ್ ಪೊಲೀಸರು, ಈತನಿಂದ 7 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಎರಡು‌ ಕೆಜಿ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಇನ್ನೂ ಹೆಚ್ಚಿನ ವಿಚಾರಣೆ ಮುಂದುವರಿದಿದೆ.

bengaluru
7 ಲಕ್ಷ ಮೌಲ್ಯದ ಚಿನ್ನಾಭರಣ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.