ಬೆಂಗಳೂರು: ಕಳವು ಮಾಡಿದ್ದ ದ್ವಿಚಕ್ರ ವಾಹನ ಬಳಸಿಕೊಂಡು ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಉತ್ತರ ವಿಭಾಗದ ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
![chain snatching case of bangalore: 2 arrested](https://etvbharatimages.akamaized.net/etvbharat/prod-images/10993297_nbfrj.jpg)
ಆಸಿಫ್ ಪಾಷಾ ಮತ್ತು ಅರ್ಶದ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ 6.9 ಲಕ್ಷ ರೂ. ಬೆಲೆ ಬಾಳುವ 154 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಆರೋಪಿಗಳು ಹಗಲು ದರೋಡೆ ಮಾಡಿ ಜೈಲುಪಾಲಾಗಿ ಹೊರ ಬಂದಿದ್ದರು. ಆದ್ರೆ ಮತ್ತೆ ಅದೇ ಚಾಳಿ ಮುಂದುವರೆಸಿ ದರೋಡೆ ಮಾಡುತ್ತಿದ್ದರು.
ಇದನ್ನೂ ಓದಿ: ಕುಡಿದ ನಶೆಯಲ್ಲಿದ್ದ ಹೆತ್ತಮ್ಮನಿಂದ ಮಗುವಿನ ಮೇಲೆ ಭಯಂಕರ ಹಲ್ಲೆ.. ವಿಡಿಯೋ ವೈರಲ್!
ಸದ್ಯ ಆರೋಪಿಗಳ ಬಂಧನದಿಂದ ಸಂಜಯನಗರ, ಹೆಬ್ಬಾಳ, ಬಯ್ಯಪ್ಪನಹಳ್ಳಿ, ವಿವೇಕ್ ನಗರ ಠಾಣೆಗಳ ಪ್ರಕರಣಗಳು ಬೆಳಕಿಗೆ ಬಂದಿವೆ. ದ್ವಿಚಕ್ರ ವಾಹನ ಕಳವು, ಸರಗಳ್ಳತನ ಸೇರಿದಂತೆ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸಲಾಗುತ್ತಿದೆ.