ETV Bharat / state

ಸಿಇಟಿ ರಿಸಲ್ಟ್​ ಪ್ರಕಟ: ವೈದ್ಯಕೀಯ ವಿಭಾಗದಲ್ಲಿ ಸಾಯಿ ವಿವೇಕ್, ಎಂಜಿನಿಯರಿಂಗ್​ನಲ್ಲಿ ರಕ್ಷಿತ್​​​ಗೆ ಪ್ರಥಮ ಱಂಕ್​

author img

By

Published : Aug 21, 2020, 1:36 PM IST

2020 ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಒಟ್ಟು 1,94,419 ಮಂದಿ ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,75,349 ಮಂದಿ ಪರೀಕ್ಷೆ ಬರೆದಿದ್ದು, 1,53,470 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

KCET Result announced by Minister Ashwat Narayana
2020 ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದೆ. 2020-21ನೇ ಸಾಲಿನ ಸಿಇಟಿ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವರೂ ಆಗಿರುವ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಪ್ರಕಟಿಸಿದರು.

ಈ ಬಾರಿ 127 ಸ್ಥಳಗಳ 497 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.‌ ಕೇವಲ 21 ದಿನದಲ್ಲೇ ಫಲಿತಾಂಶ ಪ್ರಕಟಿಸಿದ್ದೇವೆ. ಸೋಂಕಿತರು, ಕಂಟೇನ್​ಮೆಂಟ್​ ವಲಯದ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದರು. 63 ಕೋವಿಡ್ ಪಾಸಿಟಿವ್ ಇದ್ದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೋವಿಡ್ ಕಾರಣದಿಂದ ಸಾಕಷ್ಟು ಬಾರಿ ಪರೀಕ್ಷೆ ಮುಂದೂಡಲಾಗಿತ್ತು. ಕೊನೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಜುಲೈ 30 ರಿಂದ ಆಗಸ್ಟ್‌ 1 ರವರೆಗೆ ನಡೆಸಿದ್ದೇವೆ. ಈ ಬಾರಿ ಒಟ್ಟು 1,94,419 ಮಂದಿ ಸಿಇಟಿಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 1,75,349 ಮಂದಿ ಪರೀಕ್ಷೆ ಬರೆದಿದ್ದಾರೆ. 1,53,470 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಈ ಬಾರಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು ಆರ್ ​ವಿ ಪಿಯು ಕಾಲೇಜಿನ ರಕ್ಷಿತ್​​ ಎಂ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಹತ್ತು ಸ್ಥಾನಗಳಲ್ಲಿ 5 ಸ್ಥಾನ ಬೆಂಗಳೂರಿಗೆ, 2 ಸ್ಥಾನ ದಕ್ಷಿಣ ಕನ್ನಡಕ್ಕೆ, 2 ಸ್ಥಾನ ಹುಬ್ಬಳ್ಳಿಗೆ ಮತ್ತು 1 ಸ್ಥಾನ ಹೊರ ರಾಜ್ಯದ ವಿದ್ಯಾರ್ಥಿಗೆ ಲಭಿಸಿದೆ. ಬಿಎಸ್ಸಿ ಕೃಷಿ ವಿಭಾಗದಲ್ಲಿ ಮಂಗಳೂರಿನ ವರುಣ್ ಗೌಡ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಬೆಂಗಳೂರಿಗೆ 3, ಮಂಗಳೂರಿಗೆ 2, ಮೈಸೂರಿಗೆ 2 , ಹಾಸನ, ದಾವಣಗೆರೆ, ಮೂಡಿಗೆರೆಗೆ ತಲಾ 1 ಸ್ಥಾನ ಬಂದಿದೆ. ‌

ಪಶು ವೈದ್ಯಕೀಯ ವಿಭಾಗದಲ್ಲಿ ಬೆಂಗಳೂರಿನ ಸಾಯಿ ವಿವೇಕ್ ಮೊದಲ ಸ್ಥಾನ ಗಿಟ್ಟಿಸಿಕೊಂಡಿದ್ದು, ಬೆಂಗಳೂರಿಗೆ 3 ಸ್ಥಾನ, ಬೀದರ್​ಗೆ 2, ಮೈಸೂರು, ದಕ್ಷಿಣ ಕನ್ನಡ, ಮೂಡಿಗೆರೆಗೆ ತಲಾ 1 ಸ್ಥಾನ ಬಂದಿದೆ.‌ ಬಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ ಸಾಯಿ ವಿವೇಕ್ ಮೊದಲ ಸ್ಥಾನ ಪಡೆದಿದ್ದು, ಮೊದಲ ಹತ್ತು ಸ್ಥಾನದಲ್ಲಿ ಬೆಂಗಳೂರಿಗೆ 2, ಮತ್ತು ದಕ್ಷಿಣ ಕನ್ನಡಕ್ಕೆ 3, ಮೈಸೂರು, ಬೀದರ್, ಹುಬ್ಬಳ್ಳಿಗೆ ತಲಾ ಒಂದೊಂದು ಸ್ಥಾನ‌ ದೊರೆತಿದೆ.

ಱಂಕಿಂಗ್ :

ಎಂಜಿನಿಯರಿಂಗ್- 15,34,70 ವಿದ್ಯಾರ್ಥಿಗಳು
ಕೃಷಿ -1,27,627
ಪಶು ಸಂಗೋಪನೆ - 1,29,666
ಯೋಗ ಮತ್ತು ನ್ಯಾಚುರೋಪತಿ - 1,29,611
ಬಿ ಫಾರ್ಮಾ- 15,552

ಸಿಇಟಿ- 60 ಕ್ಕೆ 60 ಅಂಕ ಪಡೆದವರ ವಿವರ:
ಜೀವಶಾಸ್ತ್ರ- 80 ಅಭ್ಯರ್ಥಿಗಳು
ರಸಾಯನ ಶಾಸ್ತ್ರ- 3 ಅಭ್ಯರ್ಥಿಗಳು
ಭೌತಶಾಸ್ತ್ರ- 00
ಗಣಿತಶಾಸ್ತ್ರ- 00

ETV Bharat Logo

Copyright © 2024 Ushodaya Enterprises Pvt. Ltd., All Rights Reserved.