ಬೆಂಗಳೂರು: ಕೊರೊನಾ ಹರಡುವಿಕೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಈ ಬಾರಿ ಸಿಇಟಿ ಕೌನ್ಸೆಲಿಂಗ್ ಆನ್ಲೈನ್ ಮೂಲಕ ನಡೆಯಲಿದೆ. ಪ್ರಸಕ್ತ ಸಾಲಿನ ವೃತ್ತಿಪರ ಕೋರ್ಸ್ ಪ್ರವೇಶಾತಿ ಸೀಟು ಹಂಚಿಕೆ ಸೆಪ್ಟೆಂಬರ್ 2ರಿಂದ 24ರ ವರೆಗೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ.
ಸೀಟು ಹಂಚಿಕೆಗೆ ನಿಗದಿಪಡಿಸಿರುವ ವೇಳಾಪಟ್ಟಿಗೆ ಅನುಸಾರವಾಗಿ ಅರ್ಹ ಅಭ್ಯರ್ಥಿಗಳು ದಾಖಲಾತಿಗಳು ಹಾಗೂ ಪ್ರಮಾಣ ಪತ್ರಗಳನ್ನು ಪಿಡಿಎಫ್ ರೂಪದಲ್ಲಿ ಪ್ರಾಧಿಕಾರದ ವೆಬ್ಸೈಟ್ನಲ್ಲಿ ನಿಗದಿತ ಲಿಂಕ್ಅನ್ನು ಆಯ್ಕೆ ಮಾಡಿ ಪ್ರತಿಯೊಂದು ದಾಖಲೆಗಳನ್ನೂ ಅಪ್ಲೋಡ್ ಮಾಡಬೇಕಲಾಗುತ್ತದೆ.
ಸೀಟು ಹಂಚಿಕೆ ಪ್ರಕ್ರಿಯೆ ಆನ್ಲೈನ್ ಮುಖಾಂತರ ನಡೆಯುವುದರಿಂದ ಅಭ್ಯರ್ಥಿಗಳು, ಪೋಷಕರು ದಾಖಲಾತಿ ಪರಿಶೀಲನೆಗಾಗಿ ಯಾವುದೇ ಸಹಾಯಕ ಕೇಂದ್ರಗಳಿಗೆ ಬರುವ ಅಗತ್ಯವಿರುವುದಿಲ್ಲ. ಆಯಾ ರ್ಯಾಂಕ್ಗಳಿಗೆ ನಿಗದಿಪಡಿಸಿದ ದಿನಾಂಕಗಳಲ್ಲಿ ವಿದ್ಯಾರ್ಥಿಗಳು ನೀಡಬೇಕಾದ ದಾಖಲೆಗಳ ವಿವರಗಳನ್ನು ವೆಬ್ಸೈಟ್ ನೀಡಲಾಗಿದೆ.
ಸೀಟು ಹಂಚಿಕೆ ದಿನಾಂಕ ಹಾಗೂ ಸೀಟುಗಳ ಸಂಖ್ಯೆ
- 2-9-2020 1 ರಿಂದ 2000
- 4-9-2020 2,001 ರಿಂದ 7,000
- 7-9-2020 7,001 ರಿಂದ 15,000
- 10-9-2020 15,001 ರಿಂದ 25,000
- 13-9-2020 25,001 ರಿಂದ 40,000
- 16-9-2020 40,001 ರಿಂದ 70,000
- 20-9-2020 70,001 ರಿಂದ 1,00,000
- 24-9-2020 1,00,001 ರಿಂದ ಕೊನೆಯ ರ‍್ಯಾಂಕ್ ವರೆಗೆ