ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ 10 ಮಂದಿ ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆಯನ್ನು ಖಾಯಂಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ನ್ಯಾಯಮೂರ್ತಿಗಳಾದ ಎಂ.ಐ. ಅರುಣ್, ಇ.ಎಸ್ ಇಂದಿರೇಶ್, ರವಿ ವೆಂಕಪ್ಪ ಹೊಸಮನಿ, ಎಸ್.ವಿಶ್ವಜಿತ್ ಶೆಟ್ಟಿ, ಶಿವಶಂಕರ ಅಮರಣ್ಣನವರ್, ಎಂ.ಜಿ ಉಮಾ, ವಿ.ಶ್ರೀಷಾನಂದ, ಹೆಂಚೇಟಿ ಸಂಜೀವ್ ಕುಮಾರ್, ಪಿ.ಎನ್ ದೇಸಾಯಿ ಮತ್ತು ಪಿ.ಕೃಷ್ಣ ಭಟ್ ಅವರ ಸೇವೆಯನ್ನು ಖಾಯಂಗೊಳಿಸಿ ರಾಷ್ಟ್ರಪತಿಗಳ ಆದೇಶಾನುಸಾರ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಜಿಂದರ್ ಕಶ್ಯಪ್ ಆದೇಶ ಹೊರಡಿಸಿದ್ದಾರೆ.
2020ರ ಜ.7ರಂದು ಎಂ.ಐ ಅರುಣ್, ಇ.ಎಸ್ ಇಂದಿರೇಶ್ ಹಾಗೂ ರವಿ ವೆಂಕಪ್ಪ ಹೊಸಮನಿ ಅವರು, 2020ರ ಏ.28ರಂದು ಎಸ್.ವಿಶ್ವಜಿತ್ ಶೆಟ್ಟಿ ಅವರು, 2020ರ ಮೇ 4ರಂದು ಶಿವಶಂಕರ ಅಮರಣ್ಣನವರ್, ಎಂ.ಜಿ. ಉಮಾ, ವಿ.ಶ್ರೀಷಾನಂದ, ಹೆಂಚೇಟಿ ಸಂಜೀವ್ ಕುಮಾರ್ ಹಾಗೂ ಪಿ.ಎನ್.ದೇಸಾಯಿ ಮತ್ತು 2020ರ ಮೇ 21ರಂದು ಪಿ.ಕೃಷ್ಣ ಭಟ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಇದೀಗ ಇವರೆಲ್ಲರ ಸೇವೆಯನ್ನು ಖಾಯಂಗೊಳಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ನಾಳೆ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಷಣ