ಬೆಂಗಳೂರು: ರಾಜ್ಯದಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಯ ಕುರಿತು ಕೇಂದ್ರದ ಮೂರು ತಂಡಗಳು ಭಾನುವಾರದಿಂದ ಮೂರು ದಿನಗಳ ಕಾಲ ವಿವಿಧ ಭಾಗಗಳಲ್ಲಿ ಅಧ್ಯಯನ ನಡೆಸಲಿವೆ.
ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿರುವ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ರಮೇಶ್ ಕುಮಾರ್ ಗಂಠ ನೇತೃತ್ವದ 6 ಅಧಿಕಾರಿಗಳ ತಂಡ, ಸಂಜೆ ಸಿಎಂ ಯಡಿಯೂರಪ್ಪ ಅವರ ಜೊತೆ ಸಭೆ ನಡೆಸಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕೇಂದ್ರ ಅಧ್ಯಯನ ತಂಡಕ್ಕೆ ಸರ್ಕಾರ ಸಮಗ್ರ ಮಾಹಿತಿ ನೀಡಲಿದೆ.
ಸಭೆಯ ಬಳಿಕ ಮೂರು ತಂಡಗಳಾಗಿ ಕಲಬುರಗಿ, ವಿಜಯಪುರ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರ ಹಾನಿ ಪರಿಶೀಲನೆ ನಡೆಸಲಿದ್ದು, ಆಯಾ ಜಿಲ್ಲಾಧಿಕಾರಿಗಳ ಜತೆ ಹಾನಿ ಸಂಬಂಧ ಚರ್ಚಿಸಿ ಮಾಡಹಿತಿ ಪಡೆಯಲಿದೆ. ಕಲಬುರಗಿ ಜಿಲ್ಲೆಯ ಕಪನೂರ್, ಸಿರನೂರ್, ಹಾಗರಗುಂಡಗಿ, ಜೇವರ್ಗಿ, ಫಿರೋಜಾಬಾದ್ ಹಾಗೂ ಕೋಡಿ ದರ್ಗ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದೆ.
ಗೈರಾದವರ ವೇತನ ಕಡಿತಗೊಳಿಸಿದ ಬಿಎಂಟಿಸಿ: ಸಿಬ್ಬಂದಿಗೆ ಶಾಕ್ ಕೊಟ್ಟ ನಿಗಮ
ವಿಜಯಪುರ ಜಿಲ್ಲೆಯ ಸಿಂಧಗಿ, ತಾರಾಪುರ್, ಅಗರಖೇಡ, ಗುಬ್ಬೇವಾಡ ಪ್ರದೇಶಗಳಲ್ಲಿ ಪರಿಶೀಲನೆ ಉಡುಪಿ ಜಿಲ್ಲೆಯ ಶಿವಳ್ಳಿ, ಕಕ್ಕುಂಜೆ, ನಾಡೂರು, ಜನ್ನಾಡಿ, ತೆಕ್ಕಟ್ಟೆ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಿದೆ. ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್. ಅಶೋಕ್ ಜೊತೆ ಸಭೆ ನಡೆಸಲಿರುವ ಕೇಂದ್ರ ಅಧ್ಯಯನ ತಂಡ ನಂತರ ಕೇಂದ್ರಕ್ಕೆ ತನ್ನ ವರದಿ ಸಲ್ಲಿಸಲಿದೆ.