ಬೆಂಗಳೂರು: ಕಾರ್ಪೋರೇಟ್ ವಲಯದವರು ಬ್ಯಾಂಕ್ ಆರಂಭಿಸಲು ಅನುಮತಿ ನೀಡಲು ಕೇಂದ್ರ ಸರ್ಕಾರ ಮಂದಾಗಿದೆ ಎಂದು ಮಾಜಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾರ್ಪೋರೇಟ್ ವಲಯದವರೂ ಸಹ ಬ್ಯಾಂಕುಗಳನ್ನು ಸ್ಥಾಪಿಸಬಹುದು ಎಂಬ ಸೂಚನೆಯನ್ನು ನೀಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಇಂದಿರಾ ಗಾಂಧಿಯವರ ಬ್ಯಾಂಕುಗಳ ರಾಷ್ಟ್ರೀಕರಣದ ಮಹತ್ವ ತಿಳಿಯಬಲ್ಲದೇ ಎಂದು ಪ್ರಶ್ನಿಸಿದ್ದಾರೆ.
-
ಕಾರ್ಪೊರೇಟ್ ವಲಯದವರೂ ಸಹ ಬ್ಯಾಂಕುಗಳನ್ನು ಸ್ಥಾಪಿಸಬಹುದು ಎಂಬ ಸೂಚನೆಯನ್ನು ನೀಡುತ್ತಿರುವ ಕೇಂದ್ರ @BJP4Karnataka ಸರ್ಕಾರಕ್ಕೆ ಇಂದಿರಾ ಗಾಂಧಿಯವರ ಬ್ಯಾಂಕುಗಳ ರಾಷ್ಟ್ರೀಕರಣದ ಮಹತ್ವ ತಿಳಿಯಬಲ್ಲದೇ?
— Dr H.C.Mahadevappa (@CMahadevappa) November 24, 2020 " class="align-text-top noRightClick twitterSection" data="
">ಕಾರ್ಪೊರೇಟ್ ವಲಯದವರೂ ಸಹ ಬ್ಯಾಂಕುಗಳನ್ನು ಸ್ಥಾಪಿಸಬಹುದು ಎಂಬ ಸೂಚನೆಯನ್ನು ನೀಡುತ್ತಿರುವ ಕೇಂದ್ರ @BJP4Karnataka ಸರ್ಕಾರಕ್ಕೆ ಇಂದಿರಾ ಗಾಂಧಿಯವರ ಬ್ಯಾಂಕುಗಳ ರಾಷ್ಟ್ರೀಕರಣದ ಮಹತ್ವ ತಿಳಿಯಬಲ್ಲದೇ?
— Dr H.C.Mahadevappa (@CMahadevappa) November 24, 2020ಕಾರ್ಪೊರೇಟ್ ವಲಯದವರೂ ಸಹ ಬ್ಯಾಂಕುಗಳನ್ನು ಸ್ಥಾಪಿಸಬಹುದು ಎಂಬ ಸೂಚನೆಯನ್ನು ನೀಡುತ್ತಿರುವ ಕೇಂದ್ರ @BJP4Karnataka ಸರ್ಕಾರಕ್ಕೆ ಇಂದಿರಾ ಗಾಂಧಿಯವರ ಬ್ಯಾಂಕುಗಳ ರಾಷ್ಟ್ರೀಕರಣದ ಮಹತ್ವ ತಿಳಿಯಬಲ್ಲದೇ?
— Dr H.C.Mahadevappa (@CMahadevappa) November 24, 2020
ಕೇಂದ್ರ ಸರ್ಕಾರ ಜನ ವಿರೋಧಿ ನಿಲುವುಗಳನ್ನು ಕೈಗೊಳ್ಳುತ್ತಿದೆ ಎಂದು ನಿರಂತರವಾಗಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕುತ್ತಾ ಬಂದಿರುವ ಮಹದೇವಪ್ಪ ಇದೀಗ ಸರ್ಕಾರ ಬ್ಯಾಂಕುಗಳ ವಿಚಾರದಲ್ಲಿ ತಪ್ಪು ನಿರ್ಧಾರ ಕೈಗೊಳ್ಳುತ್ತದೆ ಎಂದು ಆರೋಪಿಸುವ ಜೊತೆಗೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಕೈಗೊಂಡ ನಿರ್ಧಾರಗಳು ಜನಸ್ನೇಹಿಯಾಗಿದ್ದವು ಎಂಬುದನ್ನು ಪ್ರತಿಪಾದಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ನಾಯಕರು ನಿರಂತರವಾಗಿ ಕೇಂದ್ರ ಸರ್ಕಾರದ ನಿಲುವುಗಳನ್ನು ಖಂಡಿಸುತ್ತಾ ಬಂದಿದ್ದು, ಇದೀಗ ಬ್ಯಾಂಕುಗಳನ್ನು ಆರಂಭಿಸಲು ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶ ನೀಡುವ ವಿಚಾರವಾಗಿಯೂ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಗೋಚರಿಸುತ್ತಿದೆ.