ETV Bharat / state

'ಡಿ ಕೆ ಶಿವಕುಮಾರ್​ ಹೇಳಿದಂಗ್‌ ಕೇಳ್ಬೇಕು, ರೊಕ್ಕ ಕೊಟ್ಟು ಗೋವಾಗೆ ಕಳುಹಿಸ್ತಿದ್ದಾರೆ'.. ಸಿಡಿ ಲೇಡಿ 2ನೇ ಆಡಿಯೋ ಲೀಕ್​ - DK Sivakumar

ತೀವ್ರ ಸಂಚಲನ ಮೂಡಿಸಿರುವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸಿಡಿ ಲೇಡಿ ಸಹೋದರನ ಜೊತೆ ಮಾತನಾಡಿದ್ದಾಳೆ ಎನ್ನಲಾದ ಮತ್ತೊಂದು ಆಡಿಯೋ ಲೀಕ್‌ ಆಗಿದೆ. ಡಿ ಕೆ ಶಿವಕುಮಾರ್​ ಹಣ ಕೊಟ್ಟು ಗೋವಾಗೆ ಕಳುಹಿಸುತ್ತಿದ್ದಾರೆ ಎಂದು ಹೇಳಿರೋದು ಆಡಿಯೋದಲ್ಲಿದೆ..

CD Lady 2nd Audio Leak
ಸಿಡಿ ಲೇಡಿ ಆಡಿಯೋ
author img

By

Published : Mar 27, 2021, 9:19 PM IST

Updated : Mar 27, 2021, 9:48 PM IST

ಬೆಂಗಳೂರು : 'ಸ್ವತ: ಡಿ ಕೆ ಶಿವಕುಮಾರ್​ ನನ್ನನ್ನು ಭೇಟಿಯಾಗಿ ಮಾತನಾಡಿದ್ದಾರೆ. ಅವರೇ ಹಣ ಕೊಟ್ಟು ಗೋವಾಗೆ ಕಳುಹಿಸುತ್ತಿದ್ದಾರೆ' ಎಂದು ಸಿಡಿ ಲೇಡಿ ತನ್ನ ಸಹೋದರನೊಂದಿಗೆ ಮಾತನಾಡಿದ್ದಾಳೆ ಎನ್ನಲಾದ ಮತ್ತೊಂದು ಆಡಿಯೋ ಲೀಕ್ ಆಗಿದೆ.

ಆಡಿಯೋದಲ್ಲಿ ಯುವತಿಯು 'ನಾನು ಡಿ.ಕೆ ಶಿವಕುಮಾರ್​ ಹೇಳಿದ ಹಾಗೇ ಕೇಳಬೇಕು. ಎಲ್ಲಿಗೂ ಹೋಗಬಾರದು' ಎಂದಿದ್ದಾಳೆ. ಈ ವೇಳೆ ಯುವತಿ ಸಹೋದರ, 'ನಿನ್ನನ್ನು ಕೈಬಿಟ್ಟು ಬಿಡುತ್ತಾರೆ. ಇದೆಲ್ಲ ಬೇಡ ಊರಿಗೆ ಬಾ' ಎಂದು ಕರೆದಿದ್ದಾನೆ.

ಈ ವೇಳೆ ಯುವತಿ, 'ಹಾಗೆಲ್ಲ ಆಗೋದಿಲ್ಲ. ನನ್ನ ಮೊಬೈಲ್​ ಸಹ ಕಸಿದುಕೊಂಡು ಬೇಸಿಕ್​ ಮೊಬೈಲ್​ ನೀಡಿದ್ದಾರೆ. ನನ್ನೊಂದಿಗೆ ಆಕಾಶ್ ಜತೆಗೆ ಏಳೆಂಟು ಜನ ಬರ್ತಿದ್ದಾರೆ. ನೀನು ವಿಷಯವನ್ನು ಯಾರ ಬಳಿಯೂ ಮಾತನಾಡಬೇಡ' ಎಂದು ಹೇಳಿರುವ ಆಡಿಯೋ ಈಗ ಸಿಡಿ ಕೇಸ್​ಗೆ ಹೊಸ ತಿರುವು ನೀಡುತ್ತಿದೆ.

ನಿನ್ನೆ ಯುವತಿ ಡಿ ಕೆ ಶಿವಕುಮಾರ್​ ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದ ಆಡಿಯೋ ಲೀಕ್ ಆಗಿತ್ತು. ಈ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ಸಹ ಪ್ರತಿಕ್ರಿಯಿಸಿ, ಸಿಡಿ ಲೇಡಿ ನನ್ನನ್ನು ಭೇಟಿಯಾಗಲು ಪ್ರಯತ್ನಿಸಿದ್ದು ನಿಜ ಎಂದಿದ್ದರು.

ಓದಿ:ಮಹಾನಾಯಕನ ಹೆಸರು ಬಾಯ್ಬಿಟ್ಟ ಮಾಜಿ ಸಚಿವ: ಡಿಕೆಶಿಗೆ ರಮೇಶ್ ಜಾರಕಿಹೊಳಿ ಬಹಿರಂಗ ಸವಾಲು

Last Updated : Mar 27, 2021, 9:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.