ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಎಸ್ಐಟಿ ವಿಚಾರಣೆಗೊಳಪಡಿಸಿದ ಬಳಿಕ, ಸಂತ್ರಸ್ತ ಯುವತಿಯ ಜೊತೆಗೆ ಮಹಜರು ಮಾಡುವ ಸಾಧ್ಯತೆಯಿದೆ. ಆದರೆ, ಪ್ರಕರಣಕ್ಕೆ ಪ್ರಮುಖ ಸಾಕ್ಷಿಗಳು ಸಿಗುವುದು ಬಹುತೇಕ ಅನುಮಾನವಾಗಿದೆ.
ಯುವತಿ ಸೂಚಿಸುವ ಸ್ಥಳ, ಆಕೆಯ ಮಾಹಿತಿ ಮೇರೆಗೆ ಮಹಜರು ನಡೆಯುತ್ತದೆ. ಘಟನೆ ನಡೆದ ಜಾಗದಲ್ಲಿ ಎಸ್ಐಟಿ ಸಾಕ್ಷಿ ಕಲೆ ಹಾಕಲಿದೆ.ಈ ಪ್ರಕರಣದಲ್ಲಿ ಜೈವಿಕ ಸಾಕ್ಷಿ ( biological evidence) ಸಿಗುವುದು ವಿರಳವಾಗಿದೆ. ಕೃತ್ಯ ನಡೆದ ಸಂದರ್ಭದಲ್ಲಿ ಬಳಸಿದ ಬಟ್ಟೆ , ಹಾಸಿಗೆ, ಹೊದಿಕೆ ಇವುಗಳು ಸಿಕ್ಕಲ್ಲಿ ಜೈವಿಕ ಸಾಕ್ಷ್ಯ ಸಂಗ್ರಹಿಸಬಹುದು. ರಕ್ತ, ಕೂದಲು, ವೀರ್ಯ, ಲಾಲಾರಸ ಇವುಗಳು ಜೈವಿಕ ಸಾಕ್ಷ್ಯಗಳಾಗುತ್ತವೆ. ಕಳೆದ ಕೆಲ ತಿಂಗಳ ಹಿಂದೆ ಘಟನೆ ನಡೆದಿರುವುದಾಗಿ ಯುವತಿ ತಿಳಿಸಿದ್ದಾಳೆ. ಇದೀಗ ಎಸ್ಐಟಿ ದೈಹಿಕ ಸಂಪರ್ಕ ನಡೆದ ಜಾಗದ ಸ್ಥಳ ಮಹಜರು ಮಾಡಬೇಕಾಗುತ್ತದೆ.
ಓದಿ:ಸಿಡಿ ಪ್ರಕರಣ: ಸಂತ್ರಸ್ತ ಯುವತಿ ಪೋಷಕರನ್ನು ಬಿಗಿ ಭದ್ರತೆಯಲ್ಲಿ ವಿಜಯಪುರಕ್ಕೆ ಶಿಫ್ಟ್ ಮಾಡಿದ ಪೊಲೀಸ್
ಟೆಕ್ನಿಕಲ್ ಎವಿಡೆನ್ಸ್ಗಳಷ್ಟೇ ಈ ಕೇಸ್ನ ಜೀವಾಳವಾಗಿದೆ. ಅಂದರೆ ಪೋನ್ ಕರೆ , ವಾಟ್ಸ್ಆ್ಯಪ್ ಚಾಟ್, ಟವರ್ ಡಂಪ್ ಇವುಗಳು ಟೆಕ್ನಿಕಲ್ ಎವಿಡೆನ್ಸ್ಗಳಾಗಿವೆ. ಅಲ್ಲದೇ ಅಪಾರ್ಟಮೆಂಟ್ನಲ್ಲಿನ ಸಿಬ್ಬಂದಿ, ಸೆಕ್ಯೂರಿಟಿಗಳ ಹೇಳಿಕೆಯನ್ನು ಎಸ್ಐಟಿ ದಾಖಲಿಸಲಿದೆ. ಅಲ್ಲಿ ಸೆರೆಯಾಗಿರುವ ಸಿಸಿಟಿವಿ ಕ್ಯಾಮರದ ದೃಶ್ಯಾವಳಿಗಳನ್ನು ಸಂಗ್ರಹಿಸಲಿದೆ. ಕೃತ್ಯ ನಡೆದ ವೇಳೆ ಯುವತಿ ಹಾಗೂ ಆರೋಪಿತ ಸ್ಥಾನದಲ್ಲಿರುವ ವ್ಯಕ್ತಿ ಒಂದೇ ಸ್ಥಳದಲ್ಲಿ ಇದ್ದಾರಾ ಎಂಬುವುದರ ಬಗ್ಗೆ ಟವರ್ ಲೊಕೇಷನ್ ಪರಿಶೀಲನೆ ನಡೆಸಲಿದೆ.