ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದ ವ್ಯಕ್ತಿ ನರೇಶ್ ಗೌಡ ಸಂಪರ್ಕದಲ್ಲಿದ್ದ ಎನ್ನಲಾದ ಉದ್ಯಮಿ ಶಿವಕುಮಾರ್ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ.
ಇದನ್ನೂ ಓದಿ: ಎಸ್ಐಟಿಯಿಂದ 5ನೇ ಆರೋಪಿ ವಿಚಾರಣೆ.. ಮಾಜಿ ಪತ್ರಕರ್ತನ ಸುದ್ದಿ ತಿಳಿದು ಅಚ್ಚರಿಗೊಳಗಾದ ಗ್ರಾಮಸ್ಥರು
ಸಿಡಿ ಪ್ರಕರಣ ಬೆಳಕಿಗೆ ಬಂದಾಗಿನಿಂದ ಶಿವಕುಮಾರ್ ಕಣ್ಮರೆಯಾಗಿದ್ದ. ತಲೆಮರೆಸಿಕೊಂಡಿರುವ ನರೇಶ್ ಗೌಡ ಜೊತೆಗೆ ಕಳೆದ ಮೂರು ತಿಂಗಳಿಂದ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಸಿಡಿಯಲ್ಲಿರುವ ಯುವತಿಗೆ ಹಣ ಕೊಟ್ಟ ಆರೋಪ ಈತನ ಮೇಲಿದೆ. ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ನೋಟಿಸ್ ಜಾರಿ ಮಾಡಿದ್ದರೂ ಹಾಜರಾಗಿರಲಿಲ್ಲ. ಹೀಗಾಗಿ ಎಸ್ಐಟಿ ದಾಳಿ ನಡೆಸಿದೆ.
ಇದನ್ನೂ ಓದಿ: 'ನನ್ನ ಮಗ ನಿರಪರಾಧಿ, ಅವನನ್ನು ಬಿಟ್ಟು ಬಿಡಿ'.. ಎಸ್ಐಟಿ ವಶದಲ್ಲಿರುವ ಯುವಕನ ತಾಯಿ ಕಣ್ಣೀರು
ಕಳೆದ 10 ದಿನಗಳಿಂದ ಮನೆಗೆ ಶಿವಕುಮಾರ್ ಬಂದಿಲ್ಲ ಎಂದು ಆತನ ಕುಟುಂಬಸ್ಥರು ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ದಾಳಿ ಬಳಿಕ ತನಿಖಾಧಿಕಾರಿಗಳು ವಾಪಸ್ ಆಗಿದ್ದಾರೆ. ಸಿಡಿಯಲ್ಲಿರುವ ಯುವತಿ ಹಾಗೂ ಇತರರೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಸಿಡಿಯಲ್ಲಿ ಈತನ ಕೈವಾಡವಿದೆ ಎಂದು ಹೇಳಲಾಗುತ್ತಿದೆ.