ETV Bharat / state

ವಾಟ್ಸ್​ ಆ್ಯಪ್​ ಮೂಲಕ ನಶೆ ಪಾರ್ಟಿಯ ಪ್ಲಾನಿಂಗ್: ಮೊಬೈಲ್ ರಿಟ್ರೈವ್​ ವೇಳೆ ಹೊರಬಿತ್ತು ರೋಚಕ ಮಾಹಿತಿ! - ಸ್ಯಾಂಡಲ್​ ವುಡ್​ ಜಾಲ ನಂಟು ಆರೋಪ ಪ್ರಕರಣ

ಸ್ಯಾಂಡಲ್​ವುಡ್​ ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಮೊಬೈಲ್​ ಫೋನ್​ಗಳನ್ನು ಸಿಸಿಬಿ ಅಧಿಕಾರಿಗಳು ರಿಟ್ರೈವ್​ ಮಾಡಿದ್ದು, ನಟಿ ಮಣಿಯರ ಮಾದಕ ಜಾಲದ ನಂಟು ಮತ್ತು ನಶೆ ಪಾರ್ಟಿಯ ಕುರಿತು ಇನ್ನಷ್ಟು ಮಾಹಿತಿಗಳು ಹೊರಬಿದ್ದಿವೆ.

Sandlwood Drug Link Case update
ಡ್ರಗ್ಸ್ ನಂಟು ಆರೋಪಿಗಳ ಮೊಬೈಲ್ ರಿಟ್ರೈವ್ ಮಾಡಿದ ಸಿಸಿಬಿ
author img

By

Published : Sep 13, 2020, 10:38 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾದವರ ವಿಚಾರಣೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಸದ್ಯ, ಆರೋಪಿಗಳ ಮೊಬೈಲ್​ ರಿಟ್ರೈವ್ ಮಾಡಲಾಗಿದ್ದು, ​ಮಾದಕ ಲೋಕದ ನಂಟಿನ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಿದೆ.

ಡ್ರಗ್ಸ್​​ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಮಣಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಯ ಮೊಬೈಲ್​ ಫೋನ್​​ಗಳನ್ನು ವಶಪಡಿಸಿಕೊಂಡಿದ್ದ ಸಿಸಿಬಿ ಅಧಿಕಾರಿಗಳು ರಿಟ್ರೈವ್​ ಮಾಡಲು ಎಫ್​ಎಸ್​ಎಲ್​ಗೆ ರವಾನೆ ಮಾಡಿದ್ದರು. ಮೊಬೈಲ್ ರಿಟ್ರೈವ್​ ಆಗಿರುವ ಕಾರಣ ಆರೋಪಿಗಳು ಯಾವೆಲ್ಲಾ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಬಯಲಾಗಿದೆ. ಚಂದನವನದ ನಟಿ ಮಣಿಯರು ತಾವು ಗುರುತಿಸಿದ ಅಪಾರ್ಟ್​ಮೆಂಟ್​ಗಳಿಗೆ ಮಾದಕ ವಸ್ತುಗಳನ್ನು ಪೂರೈಸಿಕೊಂಡು ತಾವೂ ಸೇವಿಸಿ, ಐಷಾರಾಮಿ ರಾಜಕಾರಣಿಗಳ ಮಕ್ಕಳ ಜೊತೆ ಕುಣಿದು ಕುಪ್ಪಳಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ನಗರದ 4 ಐಷಾರಾಮಿ ಅಪಾರ್ಟ್​ಮೆಂಟ್​ಗಳನ್ನ ಡ್ರಗ್ಸ್ ಪಾರ್ಟಿಯ ಅಡ್ಡಗಳನ್ನಾಗಿ ಮಾಡಿದ್ದರು. ಈ ಅಪಾರ್ಟ್​ಮೆಂಟ್​ಗಳಲ್ಲಿ ಪೇಜ್ ತ್ರಿ ಪಾರ್ಟಿಗಳನ್ನ ಆಯೋಜೀಸುತ್ತಿದ್ದು, ಪಾರ್ಟಿಗಳು ರಾತ್ರಿ 12 ಗಂಟೆಯ ಬಳಿಕ ಆರಂಭವಾಗುತ್ತಿತ್ತು. ಪಾರ್ಟಿಗೆ ನಿಗದಿತ ವ್ಯಕ್ತಿಗಳಿಗೆ ಮಾತ್ರ ಎಂಟ್ರಿ ಇತ್ತು. ಇದಕ್ಕಾಗಿ ಪ್ರತ್ಯೇಕ ವಾಟ್ಸ್ ಆ್ಯಪ್​ ಗ್ರೂಪ್​ ಕೂಡ ಕ್ರಿಯೇಟ್​ ಮಾಡಲಾಗಿತ್ತು. ಈ ಗ್ರೂಪ್​ಗೆ ಆಫ್ಟರ್​ ಹವರ್ಸ್​ ಎಲೈಟ್​ ಪಾರ್ಟಿ ಎಂದು ಹೆಸರಿಡಲಾಗಿತ್ತು. ಇದರ ಮೂಲಕ ಪಾರ್ಟಿ ಆಯೋಜನೆ ಬಗ್ಗೆ ಚರ್ಚೆ ನಡೆಯುತ್ತಿತ್ತು ಎಂಬ ವಿಷಯ ಗೊತ್ತಾಗಿದೆ.

ಸಿಸಿಬಿ ಅಧಿಕಾರಿಗಳು ದಾಳಿ ಮಾಡುತ್ತಿರುವ ವಿಚಾರ ತಿಳಿದು ನಟಿ ಮಣಿಯರು ತಮ್ಮ ಮೊಬೈಲ್​ನಲ್ಲಿದ್ದ ಈ ಗ್ರೂಪ್ ಡಿಲಿಟ್​ ಮಾಡಿದ್ದರು. ಮೊಬೈಲ್ ರಿಟ್ರೈವ್ ವೇಳೆ ಡಿಲಿಟ್​ ಆಗಿರುವ ಎಲ್ಲಾ ಮಾಹಿತಿ ಬಯಲಾಗಿದೆ. ಪಾರ್ಟಿ ನಡೆಯುತ್ತಿದ್ದ ಅಪಾರ್ಟ್​ಮೆಂಟ್​ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ನ್ಯಾಯಾಲಯದ ಅನುಮತಿ ಪಡೆದು ಅಪಾರ್ಟ್​ಮೆಂಟ್​ಗಳ ಮೇಲೆ ದಾಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಶೆ ಪಾರ್ಟಿಗಳು ನಡೆಯುತ್ತಿದ್ದ ಅಪಾರ್ಟ್​ಮೆಂಟ್​ಗಳು ಯಾರದ್ದು ಎಂಬುದರ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆ ಹಾಕ್ತಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.