ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸದ್ಯ ರಾಜಕೀಯ ಮಜಲುಗಳನ್ನ ಪಡೆಯುತ್ತಿದ್ದು, ಪಕ್ಕಾ ಸಾಕ್ಷ್ಯಾಧಾರದ ಮೇರೆಗೆ ಘಟನೆಗೆ ಕುಮ್ಮಕ್ಕು ನೀಡಿದ ಆರೋಪಿಯನ್ನ ಖೆಡ್ಡಾಕ್ಕೆ ಕೆಡವಲು ಸಿಸಿಬಿ ಪ್ಲಾನ್ ಮಾಡಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ರಾಜಕೀಯ ಜಿದ್ದಾಜಿದ್ದಿಗೋಸ್ಕರ ಈ ರೀತಿಯಾಗಿದೆ ಎಂದು ಹೇಳಿಕೆ ನೀಡಿದ್ದು, ಸದ್ಯ ಮಾಜಿ ಮೇಯರ್ ಸಂಪತ್ ಜೊತೆ ಯಾರೆಲ್ಲಾ ಲಿಂಕ್ ಹೊಂದಿದ್ದಾರೆ ಅವರನ್ನ ಕರೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮುನೇಶ್ವರ ವಾರ್ಡ್ ಕಾಂಗ್ರೆಸ್ ಕಾರ್ಪೋರೇಟರ್ ಪತಿ ಸೈಯದ್ ನಾಸಿರ್ನಿಂದ 15 ಪುಟಗಳ ಹೇಳಿಕೆ ಪಡೆದಿದ್ದಾರೆ.
ಸದ್ಯ ಇನ್ನಷ್ಟು ಮಂದಿಯನ್ನ ವಿಚಾರಣೆಗೆ ಕರೆಯಲು ತಯಾರಿ ನಡೆಸಿದ್ದಾರೆ. ಮತ್ತೊಂದೆಡೆ ಮಾಜಿ ಮೇಯರ್ ಸಂಪತ್ ರಾಜ್ ಪಿಎ ಅರುಣ್ ಸಿಸಿಬಿ ವಶದಲ್ಲಿದ್ದು, ಸಂಪತ್ ರಾಜ್ ಲೆಫ್ಟ್ ರೈಟ್ ಹ್ಯಾಂಡ್ ಇವನೇ ಆಗಿದ್ದ. ಹೀಗಾಗಿ ಈತನ ಬಳಿಯಿಂದ ಸಂಪತ್ ರಾಜ್ ಚಲನವಲನ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.
ಸಿಸಿಬಿ ಡಿಸಿಪಿ ರವಿಕುಮಾರ್ ತನಿಖೆಯ ಜವಾಬ್ದಾರಿ ತೆಗೆದುಕೊಂಡಿದ್ದು, ಮಾಜಿ ಮೇಯರ್ ಸಂಪತ್ ಜೊತೆ ಯಾರೆಲ್ಲಾ ಲಿಂಕ್ ಹೊಂದಿದ್ದಾರೆ ಆ ವ್ಯಕ್ತಿಗಳನ್ಮ ದಿನ ಪೂರ್ತಿ ಕೂರಿಸಿ ವಿಚಾರಣೆ ನಡೆಸಿ, ಪ್ರಕರಣದಲ್ಲಿ ಭಾಗಿಯಾದವರನ್ನ ಬಂಧನ ಮಾಡಲು ಮುಂದಾಗುತ್ತಿದ್ದಾರೆ.