ETV Bharat / state

ಸ್ಯಾಂಡಲ್​​​ವುಡ್​​​​ ಡ್ರಗ್ಸ್​ ಜಾಲ: ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ದಾಳಿ - Sanjana gulrani latest news

ಬೆಳ್ಳಂಬೆಳಗ್ಗೆ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿ ಪರಿಶೀಲನೆಯಲ್ಲಿ ತೊಡಗಿದೆ.

CCB raid on Sanjana gulrani house
ಸಂಜನಾ ಗರ್ಲಾನಿ ಮನೆ ಮೇಲೆ ಸಿಸಿಬಿ ದಾಳಿ
author img

By

Published : Sep 8, 2020, 7:18 AM IST

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್​​​ ನಂಟಿನ ತನಿಖೆ ಭಾಗವಾಗಿ ಮತ್ತೊಬ್ಬ ನಟಿಗೆ ಸಿಸಿಬಿ ಶಾಕ್ ನೀಡಿದೆ‌.

ಬೆಳ್ಳಂಬೆಳಗ್ಗೆ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ರೇಡ್ ಆಗಿದೆ‌. ಸಂಜನಾ ಇಂದಿರಾ ನಗರದ ಬಳಿ ನಿವಾಸ ಹೊಂದಿದ್ದು, ಸಂಜನಾ ಆಪ್ತ ರಾಹುಲ್ ಹೇಳಿಕೆ‌ ಆಧಾರದ ಮೇಲೆ ದಾಳಿ ಮಾಡಿರುವ ಸಿಸಿಬಿ ಸದ್ಯ ಪರಿಶೀಲನೆ ನಡೆಸಿದೆ. ಡ್ರಗ್ಸ್ ಜಾಲದಲ್ಲಿ ಸಂಜನಾ ಹೆಸರು ಕೇಳಿ ಬಂದ ಹಿನ್ನೆಲೆ ಮೊನ್ನೆಯಿಂದ ವಿಚಾರಣೆಗೆ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗಿತ್ತು. ಆದರೆ ನಟಿಯ ಒಂದೊಂದು ಚಲನವಲನಗಳನ್ನು ವೀಕ್ಷಣೆ ಮಾಡಿ, ಜೊತೆಗೆ ಸಿಸಿಬಿ ವಶದಲ್ಲಿರುವ ರಾಹುಲ್ ಹೇಳಿಕೆ, ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಹೇಳಿಕೆಯ ಆಧಾರದ ಮೇರೆಗೆ ಸಿಸಿಬಿ ಜಂಟಿ ಅಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಸಿಸಿಬಿ ಇನ್ಸ್​​ಪೆಕ್ಟರ್ ಅಂಜುಮಾಲ, ಪೂರ್ಣಿಮಾ ಸೇರಿ 6ಕ್ಕೂ ಹೆಚ್ಚು ಮಂದಿಯ ನೇತೃತ್ವದ ತಂಡ ದಾಳಿ ಮಾಡಿ ಮನೆ ಪರಿಶೀಲನೆಯಲ್ಲಿ ತೊಡಗಿದೆ.

ದಾಳಿ ವೇಳೆ ಸಂಜನಾ ಗಲ್ರಾನಿ ಮನೆಯಲ್ಲೇ ಇದ್ದು, ಶೋಧ ಕಾರ್ಯ ಮುಂದುವರೆದಿದೆ. ನಟಿ ರಾಗಿಣಿ ದ್ವಿವೇದಿ ಮನೆ ಮೇಲೆ ಕೂಡ ಇದೇ ರೀತಿ ದಾಳಿ ನಡೆಸಿ ತದ ನಂತರ ವಿಚಾರಣೆಗೆ ಕರೆ ತಂದು ವಶಕ್ಕೆ ಪಡೆಯಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.