ETV Bharat / state

ವಾಯುವಿಹಾರಕ್ಕೆ ಬರುವ ವೃದ್ಧರೇ ಇವರ ಟಾರ್ಗೆಟ್: ಇವ್ರೇನು ​ಮಾಡ್ತಿದ್ರು ಗೊತ್ತೇ? - Banglore news

ವಾಯುವಿಹಾರಕ್ಕೆಂದು ಉದ್ಯಾನವನಗಳಿಗೆ ಬರುವ ಹಿರಿಯ ನಾಗರಿಕರನ್ನೇ ಗುರಿಯಾಗಿಸುತ್ತಿದ್ದ ವಂಚಕರು ನಕಲಿ ಆಯುರ್ವೇದಿಕ್ ಔಷಧ ಮಾರಾಟ ಮಾಡುತ್ತಿದ್ದರು. ಈ ಮೂಲಕ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದರು.

ಪಾರ್ಕ್​ಗೆ ಬರುತ್ತಿದ್ದ ವೃದ್ಧರೇ ಇವರ ಟಾರ್ಗೆಟ್: ನಕಲಿ ಔಷಧಿ ನೀಡಿ ಮುಂದೇನು​ಮಾಡ್ತಿದ್ರು..!?
author img

By

Published : Oct 5, 2019, 5:03 PM IST

ಬೆಂಗಳೂರು: ವಾಯುವಿಹಾರಕ್ಕೆ ಹೋಗುವ ಹಿರಿಯ ನಾಗರಿಕರನ್ನೇ ಗುರಿ ಮಾಡಿಕೊಂಡು ನಕಲಿ ಆಯುರ್ವೇದಿಕ್ ಔಷಧ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ನಾಲ್ವರು ವಂಚಕರನ್ನು ಸಿಸಿಬಿ ಪೊಲೀಸರು ಮಟ್ಟ ಹಾಕಿದ್ದಾರೆ.

ನಕಲಿ ಆಯುರ್ವೇದಿಕ್ ಔಷಧಿ ಮಾರಾಟ ಮಾಡುತ್ತಿದ್ದ ವಿರೂಪಾಕ್ಷಪ್ಪ, ಸಂತೋಷ್, ದೀಪಕ್ ಹಾಗೂ ವಿನಾಯಕ ಬಂಧಿತ ಆರೋಪಿಗಳು. ಇವರಿಂದ‌ ₹ 6.40 ಲಕ್ಷ ನಗದು, 5 ಮೊಬೈಲ್ ಹಾಗೂ 8 ಚೆಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಂಚಕರ ಸ್ಟೋರಿ ಇದು:

ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದಿ ಆಯುರ್ವೇದಿಕ್ ಮೆಡಿಸಿನ್ ಅಂಗಡಿ ತೆರೆದಿದ್ದ ಆರೋಪಿಗಳು ಉದ್ಯಾನವನಗಳಿಗೆ ಹೋಗುವ ವೃದ್ಧರನ್ನು ಗುರಿಯಾಗಿಸಿಕೊಳ್ತಿದ್ದರು. ಮಧುಮೇಹ, ರಕ್ಕದೊತ್ತಡ ಮೊದಲಾದ ಖಾಯಿಲೆಗಳಿಗೆ ಗುಣಮಟ್ಟದ ಆರ್ಯುವೇದಿಕ್ ಔಷಧಿ ನೀಡುವುದಾಗಿ ಅವರನ್ನು ನಂಬಿಸುತ್ತಿದ್ದರು. ಬಳಿಕ ಅವರನ್ನು ವಿಶ್ವಾಸಕ್ಕೆ ಪಡೆದು ನಕಲಿ ಆಯುರ್ವೇದದ ಔಷಧಿ ನೀಡಿ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸುತ್ತಿದ್ದರು.‌

ಸದ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ರಾಮಮೂರ್ತಿ, ವೆಂಕಟೇಶ್, ಬಾಲಾಜಿ, ಕರಾಟೆ ಗೋವಿಂದ, ಮಹೇಶ್, ಮಲ್ಲಿಕ್, ಆನಂದ್ ಎಂಬುವವರ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Intro:Body:
ವಾಯುವಿಹಾರಕ್ಕಾಗಿ ಪಾರ್ಕ್ ಗೆ ಬರುತ್ತಿದ್ದ ವೃದ್ಧರೇ ಇವರ ಟಾರ್ಗೆಟ್: ನಕಲಿ ಔಷಧಿ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಗಳ ಬಂಧನ

ಬೆಂಗಳೂರು: ವಾಯುವಿಹಾರಕ್ಕೆ ಹೋಗುವ ಹಿರಿಯ ನಾಗರಿಕರನ್ನೇ ಟಾರ್ಗೆಟ್ ಮಾಡಿಕೊಂಡು ನಕಲಿ ಆಯುರ್ವೇದಿಕ್ ಔಷಧಿ ಮಾರಾಟ ಮಾಡಿ ಲಕ್ಷಾಂತರ ರೂ.ಹಣ ವಂಚಿಸುತ್ತಿದ್ದ ನಾಲ್ವರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಕಲಿ ಆಯುರ್ವೇದಿಕ್ ಔಷಧಿ ಮಾರಾಟ ಮಾಡುತ್ತಿದ್ದ ವಿರೂಪಾಕ್ಷಪ್ಪ, ಸಂತೋಷ್, ದೀಪಕ್ ಹಾಗೂ ವಿನಾಯಕ ಬಂಧಿತ ಆರೋಪಿಗಳು. ಇವರಿಂದ‌ 6.40 ಲಕ್ಷ ರೂ.ನಗದು, 5 ಮೊಬೈಲ್ ಹಾಗೂ 8 ಚೆಕ್ ಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿದ್ದಿ ಆಯುರ್ವೇದಿಕ್ ಮೆಡಿಸಿನ್ ಅಂಗಡಿ ತೆರೆದಿದ್ದ ಅರೋಪಿಗಳು ಪಾರ್ಕ್ ಗಳಿಗೆ ಹೋಗುವ ವೃದ್ಧರನ್ನು ಗುರಿಯಾಗಿಸಿಕೊಂಡು ಶುಗರ್, ಬಿಪಿ‌‌ ಮೊದಲಾದ ಖಾಯಿಲೆಗಳಿಗೆ ಗುಣಮಟ್ಟದ ಆರ್ಯುವೇದಿಕ್ ಔಷಧಿ ನೀಡುವುದಾಗಿ ನಂಬಿಸಿ ಅವರನ್ನು ವಿಶ್ವಾಸಕ್ಕೆ ಪಡೆದು ನಕಲಿ ಆಯುರ್ವೇದದ ಔಷಧಿ ನೀಡಿ ಲಕ್ಷಾಂತರ ರೂ.ಪಡೆದುಕೊಂಡು ವಂಚಿಸುತ್ತಿದ್ದರು.‌ ಸದ್ಯ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳಾದ ರಾಮಮೂರ್ತಿ, ವೆಂಕಟೇಶ್, ಬಾಲಾಜಿ, ಕರಾಟೆ ಗೋವಿಂದ, ಮಹೇಶ್, ಮಲ್ಲಿಕ್, ಆನಂದ್ ಎಂಬುವರು ತಲೆಮರೆಸಿಕೊಂಡಿದ್ದು‌‌ ಇವರ ಪತ್ತೆಗಾಗಿ ಬಲೆ ಬೀಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.