ಬೆಂಗಳೂರು: ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದು ನಾಲ್ವರು ವಿದೇಶಿ ಯುವತಿಯರನ್ನು ರಕ್ಷಿಸಲಾಗಿದೆ.
ಓದಿ: ಭಿಕ್ಷೆ ಬೇಡುತ್ತಿದ್ದ ವಿಕಲಚೇತನರಿಗೆ ಕ್ರೇನ್ ಡಿಕ್ಕಿ: ತಾಯಿ - ಮಗು ಸ್ಥಳದಲ್ಲೇ ಸಾವು
ಆರೋಪಿಗಳು ಅಂತರರಾಜ್ಯ ಹಾಗೂ ವಿದೇಶದಿಂದ ಯುವತಿಯರನ್ನು ಕೆಲಸ ಮತ್ತು ನಗರದಲ್ಲಿ ಹೆಚ್ಚು ಹಣ ಕೊಡಿಸುವುದಾಗಿ ನಂಬಿಸಿ ದಂಧೆಯಲ್ಲಿ ತೊಡಗಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿಗಳಿಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.