ಬೆಂಗಳೂರು: ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದು ಮಾದಕ ದಂಧೆಯಲ್ಲಿ ತೊಡಗಿದ್ದ ಆಫ್ರಿಕನ್ ಮೂಲದ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಾಂಜಾನಿಯಾ ಮೂಲದ ಬರಾಕಾ ಸಾಲೇಮಾನಿ ಚಾವು (28) ಬಂಧಿತ ಆರೋಪಿ ಎಂಬುದಾಗಿ ತಿಳಿದು ಬಂದಿದೆ.
ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ ಆರೋಪಿ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಬಳಿಕ ಅರ್ಧಕ್ಕೆ ಓದು ನಿಲ್ಲಿಸಿ ಹಣ ಸಂಪಾದನೆಗಾಗಿ ಮುಂಬೈನಿಂದ ಎಂಡಿಎಂಎ ತಂದು ಬೆಂಗಳೂರಿನಲ್ಲಿ ಮಾರಾಟದಲ್ಲಿ ತೊಡಗಿದ್ದ. ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಎಂಡಿಎಂಎ ಮಾರಾಟದಲ್ಲಿ ತೊಡಗಿದ್ದಾಗ ಸಿಸಿಬಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 15 ಲಕ್ಷ ಮೌಲ್ಯದ 150 ಗ್ರಾಂ ಎಂಡಿಎಂಎ ಜಪ್ತಿ ಮಾಡಲಾಗಿದ್ದು, ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಓದಿ: ನೀರು ನುಗ್ಗಿ ದ್ವೀಪದಂತಾದ ಮನೆಯಲ್ಲಿ ಸಿಲುಕಿದ್ದ ನಾಯಿಗಳನ್ನು ರಕ್ಷಿಸಿದ ಸ್ಥಳೀಯರು