ಬೆಂಗಳೂರು : ಅನೈತಿಕ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದ ರೌಡಿಶೀಟರ್ ಶಿವರಾಜ್ ಬಿನ್ ಕೃಷ್ಣಪ್ಪನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಶಿವರಾಜ್ ಬಿನ್ ಕೃಷ್ಣಪ್ಪ, ಭಟ್ಟಿ ಸಾರಾಯಿ ವ್ಯವಹಾರ, ಸುಲಿಗೆ, ಔಷಧಾಪರಾಧ ಇತ್ಯಾದಿ ಅಕ್ರಮ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ.
ಪೊಲೀಸರು ಹಲವು ಬಾರಿ ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ರೂ ಕೂಡಾ ಜಾಮೀನಿನ ಮೇಲೆ ಹೊರಬರುತ್ತಿದ್ದ. ಇದೀಗ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸಿದ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈತನ ವಿರುದ್ಧ 2 ಕೊಲೆ, 2 ಕೊಲೆ ಪ್ರಯತ್ನ, 1 ದರೋಡೆಗೆ ಸಿದ್ಧತೆ, 1 ದೊಂಬಿ ಸೇರಿದಂತೆ ಒಟ್ಟು ಏಳು ಪ್ರಕರಣಗಳು ದಾಖಲಾಗಿವೆ.