ETV Bharat / state

ಅಂದರ್​ ಬಾಹರ್​ ಆಡುತ್ತಿದ್ದವರಿಗೆ ಶಾಕ್​ ನೀಡಿದ ಸಿಸಿಬಿ: 72 ಜನ ಆರೋಪಿಗಳು ಅಂದರ್​ - ಇಸ್ಪೀಟ್ ಆಟ

ಬೆಂಗಳೂರಲ್ಲಿ ತಡರಾತ್ರಿ ಇಸ್ಟೀಟ್​ ಆಟದಲ್ಲಿ ತೊಡಗಿದ್ದ 72 ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

Representative Image
ಸಾಂದರ್ಭಿಕ ಚಿತ್ರ
author img

By

Published : Nov 20, 2020, 8:43 AM IST

ಬೆಂಗಳೂರು: ನಗರದ ಕ್ಲಬ್​​ನಲ್ಲಿ ಇಸ್ಪೀಟ್​ ಹಾಗೂ ಅಂದರ್​ ಬಾಹರ್​ ಆಟ ಆಡುತ್ತಿದ್ದ 72 ಮಂದಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಗುರುವಾರ ತಡ ರಾತ್ರಿ ನಗರದ ಅರೇಬಿಕ್ ಕಾಲೇಜ್ ಪೋಸ್ಟ್ ಕ್ರಾಸ್ ಬಳಿ ಇರುವ ಕ್ಲಬ್​ವೊಂದರ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಹಣವನ್ನ ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆ ಜೊತೆ ಅಂದರ್ ಬಾಹರ್ ಆಡುತ್ತಿದ್ದ 72 ಮಂದಿಯನ್ನು ಬಂಧಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಡಿ.ಜೆ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಆರೋಪಿಗಳು ಕ್ಲಬ್​​ನಲ್ಲಿ ಪ್ರತಿನಿತ್ಯ ಈ ಅದೃಷ್ಟದ ಆಟವಾಡುತ್ತಿರುವ ಬಗ್ಗೆ ಸಿಸಿಬಿ ವಿಶೇಷ ತಂಡಕ್ಕೆ ಬಾತ್ಮೀದಾರರು ಮಾಹಿತಿ ನೀಡಿದ್ದು, ಈ ಮೇರೆಗೆ ದಾಳಿ‌ ನಡೆಸಿ ಆರೋಪಿಗಳನ್ನು ಬಂಧಿಸಿ ‌ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.