ETV Bharat / state

ಡೋಪಿಂಗ್ ಟೆಸ್ಟ್ ವರದಿಯಲ್ಲಿ ಬಯಲಾಗಲಿದೆ ನಿಜ ಬಣ್ಣ: ನಟಿ ಮಣಿಯರ ಮೊಗದಲ್ಲಿ ಆತಂಕ - ಸ್ಯಾಂಡಲ್​ವುಡ್​ ಡ್ರಗ್​ ಜಾಲಾ ನಂಟು ಆರೋಪ

ವಿಚಾರಣೆಗೆ ಸರಿಯಾಗಿ ಸಹಕರಿಸದ ಹಿನ್ನೆಲೆ ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರನ್ನು ಸಿಸಿಬಿ ಡೋಪಿಂಗ್ ಟೆಸ್ಟ್​ಗೆ ಒಳಪಡಿಸಿತ್ತು. ಈ ಪರೀಕ್ಷಾ ವರದಿಯಲ್ಲಿ ಆರೋಪಿಗಳು ಮಾದಕ ವಸ್ತು ಸೇವಿಸಿದ ಬಗ್ಗೆ ಮಾಹಿತಿ ಗೊತ್ತಾಗಲಿದೆ. ಹೀಗಾಗಿ, ವರದಿಯ ಮೇಲೆ ನಟಿಯರ ಭವಿಷ್ಯ ನಿಂತಿದೆ.

CCB officials awaiting for doping test report
ಡೋಪಿಂಗ್ ಟೆಸ್ಟ್ ವರದಿಗಾಗಿ ಕಾಯುತ್ತಿರುವ ಸಿಸಿಬಿ ಅಧಿಕಾರಿಗಳು
author img

By

Published : Sep 13, 2020, 11:15 AM IST

ಬೆಂಗಳೂರು: ಡ್ರಗ್ಸ್​ ಜಾಲ ನಂಟು ಆರೋಪ ಪ್ರಕರಣದಲ್ಲಿ ನಮ್ಮ ಪಾತ್ರವೇನು ಇಲ್ಲವೆಂದೇ ಹೇಳುತ್ತಾ ಬಂದಿರುವ ನಟಿಯರಾದ ರಾಗಿಣಿ ಮತ್ತು ಸಂಜನಾಗೆ ಡೋಪಿಂಗ್​ ಟೆಸ್ಟ್ ವರದಿಯು ಆತಂಕ ಸೃಷ್ಟಿಸಿದೆ.

ಡೋಪಿಂಗ್​ ಟೆಸ್ಟ್ ವರದಿಯಲ್ಲಿ ಆರೋಪಿಗಳ ನಿಜ ಬಣ್ಣ ಬಯಲಾಗಲಿದೆ. ಹೀಗಾಗಿ ಡೋಪಿಂಗ್​ ಟೆಸ್ಟ್ ವರದಿಯ ಮೇಲೆ ನಟಿ ಮಣಿಯರ ಭವಿಷ್ಯ ನಿಂತಿದೆ. ಈ ನಡುವೆ ಇಂದು ಭಾನುವಾರವಾದ್ದರಿಂದ ಸಾಂತ್ವನ ಕೇಂದ್ರದಲ್ಲಿರುವ ನಟಿಯರಿಗೆ ವೀಕೆಂಡ್​ ಮಿಸ್​ ಮಾಡಿಕೊಂಡ ಬೇಜಾರು ಕೂಡ ಇದೆ. ಯಾಕೆಂದರೆ, ವೀಕೆಂಡ್​ ಬಂತೆಂದರೆ ನಟಿಯರು ತಮ್ಮ ಗ್ಯಾಂಗ್​ನೊಂದಿಗೆ ಸೇರಿಕೊಂಡು ಪಾರ್ಟಿ ಆಯೋಜಿಸಿ, ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದರು ಎನ್ನಲಾಗ್ತಿದೆ. ಈ ಪಾರ್ಟಿಗಳಲ್ಲಿ ಮಾದಕ ವಸ್ತುಗಳನ್ನು ಸೇವಿಸಿ ನಶೆಯಲ್ಲಿ ತೇಲಾಡ್ತಿದ್ದರು. ಆದರೆ, ಈಗ ಸಿಸಿಬಿ ವಶದಲ್ಲಿರುವುದರಿಂದ ಬಿಡುಗಡೆಯಾಗ್ತೀವೋ, ಇಲ್ಲ ಜೈಲು ಸೇರ್ತಿವೋ ಎಂಬ ಆತಂಕದಲ್ಲಿದ್ದಾರೆ.

ಸಿಸಿಬಿ ವಿಚಾರಣೆ ವೇಳೆ ಮಾದಕ ಲೋಕದ ನಂಟಿನ ಕುರಿತು ಆರೋಪಿಗಳು ಸರಿಯಾದ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಡೋಪಿಂಗ್ ಟೆಸ್ಟ್‌, ಹೇರ್ ಪೊಲಿಕ್ ಟೆಸ್ಟ್, ಉಗುರು ಟೆಸ್ಟ್, ಮೂತ್ರದ ಪರೀಕ್ಷೆ ಮಾಡಿಸಿದ್ದರು. ಈ ಟೆಸ್ಟ್​​ಗಳಿಂದ ಆರೋಪಿಗಳು ಮಾದಕ ವಸ್ತು ಸೇವಿಸಿದ್ದರೆ ಗೊತ್ತಾಗುತ್ತದೆ.

ಸದ್ಯ ಸಿಸಿಬಿ ಅಧಿಕಾರಿಗಳು ಕೂಡ ಪರೀಕ್ಷಾ ವರದಿಗಾಗಿ ಕಾಯುತ್ತಿದ್ದಾರೆ. ಆರಂಭದಲ್ಲಿ ಕಿರಿಕ್​ ಮಾಡುತ್ತಿದ್ದ ನಟಿಯರು, ಪರೀಕ್ಷೆ ಮಾಡಿಸಿದ ದಿನದಿಂದ ಮೌನಕ್ಕೆ ಜಾರಿದ್ದಾರೆ. ಎಲ್ಲಿ ಸಿಕ್ಕಿ ಬೀಳ್ತಿವೋ ಎಂಬ ಭಯ ಅವರನ್ನು ಶುರುವಾಗಿದೆ ಎನ್ನಲಾಗ್ತಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.