ಬೆಂಗಳೂರು : ಒಂದೆಡೆ ಚುನಾವಣೆ ನಡೆಯುತ್ತಿದ್ದು, ಮತ್ತೊಂದೆಡೆ ಸಿಸಿಬಿ ಪೊಲೀಸರು ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೌಡಿ ಸಂಜಯ್, ಆತನ ಸಹಚರರುಗಳಾದ ಚಂದನ್, ನಂದೀಶ್, ಸುಭಾಷ್, ಕಿರಣ್ ಬಂಧಿತ ಆರೋಪಿಗಳು. ಇವರು ಗಿರಿನಗರ ಪೊಲೀಸ್ ಠಾಣಾ ಸರಹದ್ದಿನ ಬಳಿ ಸಾರ್ವಜನಿಕರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ನಗದು, ಆಭರಣ ದೋಚಲು ಸಜ್ಜಾಗಿದ್ದರು. ಈ ಕುರಿತು ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳ ಬಳಿಯಿಂದ ಒಂದು ಲಾಂಗ್, ಒಂದು ಡ್ರಾಗರ್, ಎರಡು ಪೆಪ್ಪರ್ ಸ್ಪ್ರೇ ಒಂದು ಆಟೋ ರೀಕ್ಷಾ ವಶಪಡಿಸಿಕೊಂಡಿದ್ದಾರೆ.
ಇನ್ನು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಸಂಜಯ್ ಅಲಿಯಾಸ್ ಸಂಜು ವಿಜಯನಗರ ಪೊಲೀಸ್ ಠಾಣಾ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ರಾಜಾಗೋಪಾಲನಗರ ಪೊಲೀಸ್ ಠಾಣೆಯಲ್ಲಿ, ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇನ್ನು ಆರೋಪಿ ಚಂದನ್ ವಿರುದ್ಧ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣವಿದೆ. ಉಳಿದ ಆರೋಪಿಗಳು ಬೇರೆ ಬೇರೆ ಪ್ರಕರಣದ ಆರೋಪಿಗಳಾಗಿದ್ದು, ಸದ್ಯ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.