ETV Bharat / state

ಸಿಸಿಬಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ ಮಾಜಿ ಮೇಯರ್.. ಸಂಪತ್‌ರಾಜ್‌ ಪತ್ತೆಗೆ ಮುಂದುವರೆದ ಶೋಧ!

author img

By

Published : Nov 8, 2020, 1:14 PM IST

ತನ್ನ ಮೊಬೈಲ್​​ನಿಂದಲೇ ಘಟನೆ ಬಗ್ಗೆ ಮಾಹಿತಿ ಪಡೆದು, ‌ಕುಮ್ಮಕ್ಕು ನೀಡಿದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾನೆ. ಶಾಸಕ ಅಖಂಡ ಶ್ರೀನಿವಾಸ್​​ ಹೇಳಿಕೆ ದಾಖಲಿಸಿಕೊಂಡ ವೇಳೆಯೂ ಸಂಪತ್ ಹೆಸರು ಪ್ರಸ್ತಾಪವಾಗಿದೆ. ರಾಜಕೀಯವಾಗಿ ಮುಗಿಸುವ ನಿಟ್ಟಿನಲ್ಲಿ ಈ ರೀತಿ ಪ್ಲ್ಯಾನ್ ಮಾಡಿರುವ ವಿಚಾರವನ್ನು ತಿಳಿಸಿದ್ದರು..

sampath raj
ಮಾಜಿ ಮೇಯರ್ ಸಂಪತ್ ರಾಜ್

ಬೆಂಗಳೂರು : ಡಿಜೆಹಳ್ಳಿ, ಕೆಜಿಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಮಾಜಿ ಮೇಯರ್ ಸಂಪತ್ ರಾಜ್ ಪತ್ತೆಗೆ ಸಿಸಿಬಿ ಎಲ್ಲೆಡೆ ಶೋಧ ಕಾರ್ಯ ಮುಂದುವರೆಸಿದೆ. ಮುಂಬೈನಲ್ಲಿರೋ ಖಾಸಗಿ ಹೋಟೆಲ್‌ನಲ್ಲಿದ್ದಾರೆಂಬ ಸುಳಿವು ಸಿಕ್ಕ ಮೇಲೆ ಪೊಲೀಸರು ಅಲ್ಲಿಗೆ ತೆರಳಿದ್ದರು. ಆದರೆ, ಸಂಪತ್‌ ರಾಜ್, ಪೊಲೀಸರಿಗೇ ಚಳ್ಳೆ ಹಣ್ಣು ತಿನ್ನಿಸಿ ಹೋಟೆಲ್ ಖಾಲಿ ಮಾಡಿ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ಸಿಸಿಬಿ ಅಧಿಕಾರಿಗಳು ಇತರೆಡೆ ಶೋಧ ಮುಂದುವರೆಸಿದ್ದಾರೆ.

ರಾಜಕೀಯ ಆ್ಯಂಗಲ್​​ನಲ್ಲಿ ಸಿಸಿಬಿ ಪೊಲೀಸರ ತನಿಖೆ : ಸಿಸಿಬಿಯ 5 ವಿಶೇಷ ತಂಡ ಈಗಾಗಲೇ ಶೋಧ ಕಾರ್ಯಕೈಗೊಂಡಿವೆ. ಆದ್ರೆ, ರಾಜಕೀಯ ನಾಯಕರು ಸಂಪತ್ ಪರ ನಿಂತಿದ್ದಾರೆನ್ನುವ ಗುಮಾನಿಯೂ ಸಿಸಿಬಿಗಿದೆ. ರಾಜಕೀಯ ವ್ಯಕ್ತಿಗಳ ಕೆಲ ರೆಸಾರ್ಟ್​​ನಲ್ಲಿರಿಬಹುದೆಂಬ ಅನುಮಾನವೂ ಸೃಷ್ಟಿಯಾಗಿದೆ. ಈ ಅನುಮಾನದ ಮೇಲೆ ಫೀಲ್ಡಿಗಿಳಿದ ಪೊಲೀಸರು ಬಿಡದಿ ಸೇರಿ ಅನೇಕ ಕಡೆ ಇರುವ ರೆಸಾರ್ಟ್​​​ಗಳಲ್ಲಿ ಪರಿಶೀಲಿಸಲು ಮುಂದಾಗಿದ್ದಾರೆ.

ಸಂಪತ್​ ರಾಜ್​​ ಕಣ್ಣಮುಚ್ಚಾಲೆ : ಶಾಸಕ ಅಖಂಡ ಶ್ರೀನಿವಾಸ್​​ ಮನೆಗೆ ಬೆಂಕಿ ಇಟ್ಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಸಂಪತ್ ರಾಜ್​​ ಗುರುತಿಸಿಕೊಂಡಿದ್ದಾನೆ. ಈತ ಘಟನೆ ನಡೆದ 70 ದಿನಗಳಿಂದ ಪೊಲೀಸರಿಗೆ ಸಿಗದೆ ಕಣ್ಣಾಮುಚ್ಚಾಲೆಯಾಟ ನಡೆಸುತ್ತಿದ್ದಾನೆ. ಆಗಸ್ಟ್ 11ರ ರಾತ್ರಿ ಡಿಜೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಭಯಾನಕ ಘಟನೆ ನಡೆದಿತ್ತು. ಈ ಬಗ್ಗೆ ಕೇಸ್ ಟೇಕ್ ಓವರ್ ಮಾಡಿದ್ದ ಸಿಸಿಬಿ ಎರಡು ದಿನಗಳ ಬಳಿಕ ಸಂಪತ್​ ರಾಜ್‌ಗೆ ನೋಟಿಸ್ ಕೊಟ್ಟಿದ್ದತ್ತು.

ವಿಚಾರಣೆಗೆ ಹಾಜರಾದರೂ ಕೂಡ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಎರಡು ಮೊಬೈಲ್ ಬಳಸುತ್ತಿದ್ದರೂ ಕೂಡ ಒಂದೇ ಮೊಬೈಲ್ ಎಂದು ಸುಳ್ಳು ಹೇಳಿದ್ದರು. ಮೊದಲು ವಿಚಾರಣೆ ನಡೆಸಿ ಸಿಸಿಬಿ ಸುಮ್ಮನೆ ಬಿಟ್ಟಿದ್ದು, ಸಂಪತ್​ಗೆ ಪರಾರಿಯಾಗಲು ಬಹುದೊಡ್ಡ ಅಸ್ತ್ರವಾಗಿತ್ತು. ಆಗಸ್ಟ್ 18ರಂದು ಸಂಪತ್ ರಾಜ್‌ ಆಪ್ತ ಅರುಣ್ ಎಂಬುವರನ್ನು ಬಂಧಿಸಿದಾಗ ‌ಆತ ಸಂಪತ್ ರಾಜ್ ಹೆಸರನ್ನು ಬಾಯ್ಬಿಟ್ಟಿದ್ದ.

ತನ್ನ ಮೊಬೈಲ್​​ನಿಂದಲೇ ಘಟನೆ ಬಗ್ಗೆ ಮಾಹಿತಿ ಪಡೆದು, ‌ಕುಮ್ಮಕ್ಕು ನೀಡಿದ ವಿಚಾರವನ್ನು ಪ್ರಸ್ತಾಪ ಮಾಡಿದ್ದಾನೆ. ಶಾಸಕ ಅಖಂಡ ಶ್ರೀನಿವಾಸ್​​ ಹೇಳಿಕೆ ದಾಖಲಿಸಿಕೊಂಡ ವೇಳೆಯೂ ಸಂಪತ್ ಹೆಸರು ಪ್ರಸ್ತಾಪವಾಗಿದೆ. ರಾಜಕೀಯವಾಗಿ ಮುಗಿಸುವ ನಿಟ್ಟಿನಲ್ಲಿ ಈ ರೀತಿ ಪ್ಲ್ಯಾನ್ ಮಾಡಿರುವ ವಿಚಾರವನ್ನು ತಿಳಿಸಿದ್ದರು.

ಎಲ್ಲಾ ವಿಚಾರ ಸಿಸಿಬಿಗೆ ತಿಳಿಯುತ್ತಿದ್ದಂತೆ ಅಲರ್ಟ್ ಆದ ಸಂಪತ್ ರಾಜ್​​, ತನಗೆ ಹುಷಾರಿಲ್ಲ ಎಂಬ ನಾಟಕ ಮಾಡಿದ್ದ ಎನ್ನಲಾಗಿದೆ. ಸಿಸಿಬಿ ಎರಡನೇ ನೋಟಿಸ್​ ಕೊಟ್ಟಾಗಲೂ ತನಗೆ ಕೊರೊನಾ ಇದೆ ಎಂಬ ಕಾರಣ ನೀಡಿದ್ದಾನೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿ ನಂತರ ಡಿಸ್ಚಾರ್ಜ್ ಆಗಿದ್ದ. ಮಗದೊಮ್ಮೆ ಕೊರೊನಾ ಕಾರಣ ನೀಡಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೇರಿ, ವೈದ್ಯರ ಮೂಲಕ ಪತ್ರ ಬರೆಸಿ ಎಸ್ಕೇಪ್ ಪ್ಲಾನಿಂಗ್ ಮಾಡಿದ್ರು ಎಂದು ತಿಳಿದು ಬಂದಿದೆ.

ಬಳಿಕ ಸಂಪತ್ ರಾಜ್​​​ ಆರೋಗ್ಯದ ಬಗ್ಗೆ ಮಾಹಿತಿ ಕೊಡಿ ಎಂದು ಸಿಸಿಬಿ ಅಧಿಕಾರಿಗಳು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಸೂಚಿಸಿದ್ದರು. ಆದರೆ, ವೈದ್ಯರು ಮಾಹಿತಿ ಕೊಡದ ಕಾರಣ ಕೆಎಂಸಿಗೆ ದೂರು ನೀಡಲು ಮುಂದಾದಾಗ, ಫೇಕ್ ರಿಪೋರ್ಟ್ ರೆಡಿ ಮಾಡಿಸಿ ರಾತ್ರೋರಾತ್ರಿ ಡಿಸ್ಚಾರ್ಜ್ ಮಾಡಿದ ಮಾಹಿತಿ ನೀಡಿದ್ರು.

ಸದ್ಯ ಮೊಬೈಲ್, ಬ್ಯಾಂಕ್ ವಹಿವಾಟು ಯಾವುದರಲ್ಲೂ ಆ್ಯಕ್ಟೀವ್​​ ಆಗದೆ ಎಸ್ಕೇಪ್ ಆಗಿ ಸಿಸಿಬಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಾಟ ಮಾಡುತ್ತಿದ್ದಾನೆ. ಹೀಗಾಗಿ, ಎಲ್ಲಾ ರೀತಿಯಲ್ಲೂ ಸಿಸಿಬಿ ಅಧಿಕಾರಿಗಳು ತಮ್ಮ ಶೋಧ ಕಾರ್ಯ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.