ETV Bharat / state

ಸಿಸಿಬಿಯಿಂದ ರಾಗಿಣಿಗೆ ಪ್ರಶ್ನೆಗಳ ಸುರಿಮಳೆ... ಸಮರ್ಪಕ ಉತ್ತರ ಕೊಟ್ಟರೆ ಮಾತ್ರ ರಿಲೀಫ್​...!?

author img

By

Published : Sep 4, 2020, 1:30 PM IST

ರಾಗಿಣಿಗೆ ಕೇವಲ ಡ್ರಗ್ ಮಾಫಿಯಾ ಮಾತ್ರವಲ್ಲದೇ ರವಿಶಂಕರ್ ಜೊತೆಗಿನ ನಂಟು, 2019ರಲ್ಲಿ ನಡೆದ ಗಲಾಟೆ ಪ್ರಕರಣ ಎಲ್ಲವೂ ಸೇರಿ ಸುಮಾರು 80ಕ್ಕೂ ಹೆಚ್ಚು ಪ್ರಶ್ನೆಗಳು ರೆಡಿ ಮಾಡಿದ್ದಾರೆ. ಸಿಸಿಬಿಯ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದರೆ ಮಾತ್ರ ರಿಲೀಫ್​ ನೀಡುವ ಸಾಧ್ಯತೆ ಇದೆ.

ccb-investigating-actress-ragini-in-link-with-drug-case
ಸಿಸಿಬಿಯಿಂದ ರಾಗಿಣಿಗೆ ಪ್ರಶ್ನೆಗಳ ಸುರಿಮಳೆ...ಇವತ್ತೇ ಅರೆಸ್ಟ್ ಆಗ್ತಾರಾ ರಾಗಿಣಿ..?

ಬೆಂಗಳೂರು: ಸ್ಯಾಂಡಲ್​​​​ವುಡ್ ಡ್ರಗ್ಸ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸದ್ಯ ಸಿಸಿಬಿ ಪೊಲೀಸರು, ನಟಿ ರಾಗಿಣಿ ತನಿಖೆಯ ಭಾಗವಾಗಿ ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ.

ಸಿನಿಮಾ ಕೆರಿಯರ್ ಬಗ್ಗೆ, ರಾಗಿಣಿ ಚಿತ್ರರಂಗದಲ್ಲಿ ಬೆಳೆದು ಬಂದ ಹಾದಿಯ ಬಗ್ಗೆ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಇಂಡಸ್ಟ್ರಿಯಲ್ಲಿ ಯಾರ ಜೊತೆ ಸಂಪರ್ಕದಲ್ಲಿದ್ದಿರಿ ? ಸದ್ಯ ಬಂಧಿತನಾದ ರವಿಶಂಕರ್ ಜೊತೆ ಹೇಗೆ ಸಂಬಂಧ? ಯಾವಾಗ ಪರಿಚಯ‌.? ಎಂಬೆಲ್ಲಾ ಪ್ರಶ್ನೆಗಳನ್ನು ನಟಿಗೆ ಅಧಿಕಾರಿಗಳು ಕೇಳಿದ್ದಾರೆ.

ಮತ್ತೊಂದೆಡೆ ರಾಗಿಣಿ ಮನೆಯಿಂದ ಸಿಸಿಬಿ ಅಧಿಕಾರಿಗಳು ಒಂದು ಬ್ಯಾಗ್ ತಂದಿದ್ದಾರೆ. ಅದರಲ್ಲಿ ಮೊಬೈಲ್ ಟ್ಯಾಬ್, ಲ್ಯಾಪ್‌ಟಾಪ್ ಹಾಗೆ ಕೆಲ ದಾಖಲೆ ತಂದಿದ್ದು ಇದರ ಬಗ್ಗೆ ಕೂಡ ವಿಚಾರಣೆ ನಡೆಸುತ್ತಿದ್ದಾರೆ. ಹಾಗೆ ಎರಡು ಮೊಬೈಲ್​​​​ ಸ್ವಿಚ್​​ ಆಫ್​​ ಮಾಡಿದ್ಯಾಕೆ..? ಆ.29ರಂದು ಯಾಕೆ ವಾಟ್ಸಾಪ್​​​ ಅನ್ ಇನ್ಸ್​​ಸ್ಟಾಲ್​​ ಮಾಡಿದ್ರಿ.? ಹಾಗೆ ತನಿಖೆಗೆ ಸಹಕರಿಸ್ತೀನಿ ಎಂದು ಟ್ವೀಟ್ ಮಾಡಿದ್ರಿ, ಹಾಗಿದ್ರೆ ಯಾಕೆ ಮೊಬೈಲ್ ಸ್ವಿಚ್ ಆಫ್ ಮಾಡಬೇಕಿತ್ತು ಅನ್ನೋ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸಿಸಿಬಿ ಹಿರಿಯ ಅಧಿಕಾರಿಗಳ ‌ಮುಂದೆ ವಿಚಾರಣೆಗೆ ಹಾಜರಾದ ನಟಿ ರಾಗಿಣಿ

ಜೊತೆಗೆ ರಾಗಿಣಿಗೆ ಕೇವಲ ಡ್ರಗ್ ಮಾಫಿಯಾ ಮಾತ್ರವಲ್ಲದೇ ರವಿಶಂಕರ್ ಜೊತೆಗಿನ ನಂಟು, 2019ರಲ್ಲಿ ನಡೆದ ಗಲಾಟೆ ಪ್ರಕರಣ ಎಲ್ಲವೂ ಸೇರಿ ಸುಮಾರು 80ಕ್ಕೂ ಹೆಚ್ಚು ಪ್ರಶ್ನೆಗಳು ರೆಡಿ ಮಾಡಿದ್ದಾರೆ.

ರಾಗಿಣಿ ಮೇಲಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಕೇಳುವ ಪ್ರಶ್ನೆಗೆ ಸಮರ್ಪಕ ಉತ್ತರ ನೀಡಿದರೆ ರಾಗಿಣಿಗೆ ರಿಲೀಫ್​​​ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಡ್ರಗ್ ಸೇವನೆ ಬಗ್ಗೆ ಅಧಿಕೃತವಾಗಿ ಒಪ್ಪಿಕೊಂಡ್ರೆ ಅರೆಸ್ಟ್ ಪ್ರೊಸೀಜರ್ ನಡೆಸುವ ಸಾಧ್ಯತೆ ಇದೆ.

ಸದ್ಯ ವಿಚಾರಣೆಯ ಕೊಠಡಿಯಲ್ಲಿ ರಾಗಿಣಿ ಸೇರಿ ಸಂದೀಪ್ ಪಾಟೀಲ್, ಡಿಸಿಪಿ ರವಿಕುಮಾರ್, ಮಹಿಳಾ ಇನ್ಸ್​​ಪೆಕ್ಟರ್​​​ ಅಂಜುಮಾಲ ನಾಯಕ್ ಹಾಗೂ ಸಿಸಿಬಿ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ 5 ಮಂದಿ ರಾಗಿಣಿ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.