ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಪ್ರಕರಣದಲ್ಲಿ ಬಂಧನವಾಗಿರುವ ಪ್ರಮುಖ ಆರೋಪಿ ವಿರೇನ್ ಖನ್ನಾ ವಿಚಾರಣೆ ವೇಳೆ ಹಲವು ವಿಷಯಗಳು ಬೆಳಕಿಗೆ ಬರುತ್ತಿವೆ.
ಖನ್ನಾ ತನ್ನ ಮೊಬೈಲ್ನಲ್ಲಿ ಡ್ರಗ್ಸ್ ಕುರಿತಂತೆ ಮಾಹಿತಿ ಹುಡುಕಾಡಿರುವುದು ಪತ್ತೆಯಾಗಿದೆ. ಗೂಗಲ್ನಲ್ಲಿ ಗಾಂಜಾ, ಎಂಡಿಎಂಎ ಮಾತ್ರೆಗಳ ಕುರಿತು ಸರ್ಚ್ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಡ್ರಗ್ಸ್ನಿಂದ ಹೊರಬರುವುದು ಹೇಗೆ ಎಂಬ ವಿಷಯದ ಬಗ್ಗೆಯೂ ಸರ್ಚ್ ಮಾಡಿದ್ದಾನೆ ಎನ್ನಲಾಗಿದೆ.
ಇದಲ್ಲದೆ ತನ್ನ ಪ್ರೇಯಸಿ ಜತೆ ಗಾಂಜಾ ಕುರಿತು ಚಾಟ್ ಮಾಡಿದ್ದ ಅಂಶ ಸಹ ತಿಳಿದು ಬಂದಿದೆ. ಖನ್ನಾ ಬಳಸುತ್ತಿದ್ದ 9 ಇ-ಮೇಲ್ ಐಡಿ ಮೇಲೆ ಕಣ್ಣಿಟ್ಟಿರುವ ಸಿಸಿಬಿ, ಇದರಲ್ಲಿ ನಾಲ್ಕು ಇ-ಮೇಲ್ ಐಡಿಗಳ ಪಾಸ್ವರ್ಡ್ ಪಡೆದುಕೊಂಡಿದೆ. ಇನ್ನುಳಿದ ಐಡಿಗಳ ಪಾಸ್ವರ್ಡ್ ನೀಡಲು ಖನ್ನಾ ನಿರಾಕರಿಸಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನುಳಿದ ಇ-ಮೇಲ್ ಐಡಿಗಳು ಓಪನ್ ಆದರೆ ಹಲವರ ಹೆಸರು ಬಹಿರಂಗವಾಗುವ ಸಾಧ್ಯತೆ ಇದೆ. ಅಲ್ಲದೆ ಹಲವು ಡ್ರಗ್ಸ್ ಪೆಡ್ಲರ್ಗಳ ಮಾಹಿತಿ ಸಹ ಲಭ್ಯವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.