ಬೆಂಗಳೂರು: ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ಮೂರು ಆನ್ಲೈನ್ ಲೋನ್ ಆ್ಯಪ್ ಕಂಪನಿಗಳ ಸಿಸಿಬಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಲ ಆನ್ಲೈನ್ ಲೋನ್ ಆ್ಯಪ್ಗಳು ಆರ್ಬಿಐ ನಿಯಮ ಉಲ್ಲಂಘಿಸಿ ಮುಂಗಡ ಹಣ ಸಾಲ ನೀಡುತ್ತಿದ್ದವು. ಮರುಪಾವತಿ ವೇಳೆ ಗ್ರಾಹಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿತ್ತು. ಅಲ್ಲದೇ ಗ್ರಾಹಕರ ಕಾಂಟ್ಯಾಕ್ಟ್ಸ್, ಫೋಟೋ ದುರ್ಬಳಕೆ ಬಗ್ಗೆ ದೂರುಗಳು ಕೇಳಿ ಬಂದಿದ್ದವು.
ಈ ರೀತಿಯ ಆ್ಯಪ್ಗಳಿಂದ ಕಿರುಕುಳವಿದ್ದರೆ, ದೂರು ನೀಡುವಂತೆ ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಾರ್ವಜನಿಕರಿಗೆ ಟ್ವಿಟರ್ ಮೂಲಕ ಸೂಚನೆ ನೀಡಿದ್ದಾರೆ.