ETV Bharat / state

ಮಾಂಸ ದಂಧೆ ಅಡ್ಡೆ ಮೇಲೆ ಸಿಸಿಬಿ ದಾಳಿ : ಇಬ್ಬರು ಯುವತಿಯರ ರಕ್ಷಣೆ - ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ ಸುದ್ದಿ

ಅಮಾಯಕ ಹೆಣ್ಣು ಮಕ್ಕಳಿಗೆ ಕೆಲಸದ ಆಮಿಷ ತೋರಿಸಿ ಹೊರ ರಾಜ್ಯಗಳಿಂದ ಯುವತಿಯರನ್ನ ಕರೆ ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಸುಬೇಂದ್ರ ಹಾಗೂ ಪ್ರಜ್ವಲ್ ಬಂಧಿತ ಆರೋಪಿಗಳು.

CCB attacks on prostitution,ಮಾಂಸ ದಂಧೆಯ ಅಡ್ಡೆ ಮೇಲೆ ಸಿಸಿಬಿ ದಾಳಿ
ಮಾಂಸ ದಂಧೆಯ ಅಡ್ಡೆ ಮೇಲೆ ಸಿಸಿಬಿ ದಾಳಿ
author img

By

Published : Jan 29, 2020, 5:06 PM IST

Updated : Jan 29, 2020, 6:51 PM IST

ಬೆಂಗಳೂರು : ಅಮಾಯಕ ಹೆಣ್ಣು ಮಕ್ಕಳಿಗೆ ಕೆಲಸದ ಆಮಿಷ ತೋರಿಸಿ ಹೊರ ರಾಜ್ಯಗಳಿಂದ ಯುವತಿಯರನ್ನ ಕರೆ ತಂದು ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಸುಬೇಂದ್ರ ಹಾಗೂ ಪ್ರಜ್ವಲ್ ಬಂಧಿತ ಆರೋಪಿಗಳು.

ಶ್ರೀರಾಂಪುರದಲ್ಲಿ ಮನೆ ಮಾಡಿಕೊಂಡ ಆರೋಪಿಗಳು ಅಮಾಯಕ ಯುವತಿಯರನ್ನ ಪುಸಲಾಯಿಸಿ ಹೆಚ್ಚು ಹಣ ಕೊಡುವುದಾಗಿ ಹೇಳಿ‌, ಮಾಂಸದ ದಂಧೆಯಲ್ಲಿ ತೊಡಗಿಕೊಂಡ್ರೆ ಕಡಿಮೆ ಅವಧಿಯಲ್ಲಿ ಕೈ ತುಂಬಾ ಹಣ ಮಾಡಬಹುದೆಂದು ಆಮಿಷ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು.

ಆರೋಪಿಗಳು ಫೋನ್ ಮೂಲಕ ಗಿರಾಕಿಗಳನ್ನ ಸಂಪರ್ಕ ಮಾಡುತ್ತಿದ್ದರು. ಗಿರಾಕಿಗಳಿಗೆ ಯುವತಿಯರ ಫೋಟೋ ಕಳಿಸುತ್ತಿದ್ದರು. ಗಿರಾಕಿಗಳು ಫಿಕ್ಸ್​ ಆದ ಬಳಿಕ 2 ರಿಂದ 3 ಸಾವಿರ ರೂ. ಹಣ ಫಿಕ್ಸ್ ಮಾಡಿ ಯುವತಿರನ್ನ ಗಿರಾಕಿ ಬಳಿ ಕಳುಹಿಸಿಕೊಡುತ್ತಿದ್ದರು.

ಮಾಹಿತಿ ತಿಳಿದು ಕೇಂದ್ರ ವಿಭಾಗ ಪೊಲಿಸರು ದಾಳಿ ನಡೆಸಿದ್ದಾರೆ. ಇಬ್ಬರು ಆರೋಪಿಗಳನ್ನ ಬಂಧಿಸಿ, ಇಬ್ಬರು ಯುವತಿಯರನ್ನ ರಕ್ಷಣೆ ಮಾಡಿದ್ದಾರೆ. ಬಂಧಿತ ಆರೋಪಿಗಳಿಂದ 35 ಸಾವಿರ ರೂ. ನಗದು ಹಾಗೂ ಮೊಬೈಲ್ ವಶಪಡಿಕೊಂಡಿದ್ದಾರೆ.

ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಲಾಗಿದ್ದು, ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

Intro:ಮಾಂಸದ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ
ಅಮಾಯಕ‌ ಇಬ್ಬರು ಯುವತಿಯರ ರಕ್ಷಣೆ ಮಾಡಿದ ಸಿಸಿಬಿ

ಅಮಾಯಕ ಹೆಣ್ಣು ಮಕ್ಕಳಿಗೆ ಕೆಲಸದ ಆಮಿಷ ತೋರಿಸಿ
ಹೊರ ರಾಜ್ಯಗಳಿಂದ ಯುವತಿಯರನ್ನ ಕರೆ ತಂದು ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ..ಸುಬೇಂದ್ರ ಹಾಗೂ ಪ್ರಜ್ವಲ್ ಬಂಧಿತ ಆರೋಪಿಗಳು.

ಶ್ರೀರಾಂಪುರದಲ್ಲಿ ಮನೆ ಮಾಡಿಕೊಂಡ ಆರೋಪಿಗಳು ಅಮಾಯಕ ಯುವತಿಯರನ್ನ ಪುಸಾಲಾಯಿಸಿ ಹೆಚ್ಚು ಹಣ ಕೊಡುವುದಾಗಿ ಹೇಳಿ‌ ಮಾಂಸದ ದಂಧೆಯಲ್ಲಿ ತೊಡಗಿಕೊಂಡ್ರೆ ಕಡಿಮೆ ಅವದಿಯಲ್ಲಿ ಕೈ ತುಂಬಾ ಹಣ ಮಾಡಬಹುದೆಂದು ಹಣದ ಅಮೀಷ ತೋರಿಸಿ ವೇಶ್ಯಾವಾಟಿಗೆ ದಂಧೆಯಲ್ಲಿ ತೋಡಗಿಕೊಳ್ಳುವಂತೆ ಯುವತಿಯರಿಗೆ ಆಮಿಷ ಮಾಡುತ್ತಿದ್ದರು.

ನಂತ್ರ ಆರೋಪಿಗಳು ಫೋನ್ ಮೂಲಕ ಗಿರಾಗಿಗಳನ್ನ ಸಂಪರ್ಕ ಮಾಡಿ ಯುವತಿಯರ ಪೋಟೋ ಕಳಿಸಿ ಗಿರಾಕಿಗಳು ಯುವತಿಯರ ಪೋಟೋಗೆ ಬೋಲ್ಡ್ ಆಗಿ ಒಕೆ ಮಾಡಿದ‌ ಮೇಲೆ ೨ ಸಾವಿರದಿಂದ ೩ ಸಾವಿರ ಹಣ ಫಿಕ್ಸ್ ಮಾಡಿ ಯುವತಿರನ್ನ ಗಿರಾಕಿ ಬಳಿ ಕಳಿಸಿಕೊಡ್ತಾ ಇದ್ದರು

ಈ ಮಾಹಿತಿ ತಿಳಿದು ಕೇಂದ್ರ ವಿಭಾಗ ಪೊಲಿಸರು ದಾಳಿ ನಡೆಸಿ
ಇಬ್ಬರು ಆರೋಪಿಗಳನ್ನ ಬಂಧಿಸಿ ಯುವತಿಯರಿಬ್ಬರನ್ನ ರಕ್ಷಣೆ ಮಾಡಿ ಬಂಧಿತ ಆರೋಪಿಗಳಿಂದ ೩೫ ಸಾವಿರ ನಗದು ಹಾಗೂ ಮೊಬೈಲ್ ವಶಪಡಿಕೊಂಡಿದ್ದಾರೆ. ಹಾಗೆ ಈ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನೀಕೆ ಮುಂದುವರೆಸಿದ್ದಾರೆ

Body:KN_BNG_07_CCB_7204498Conclusion:KN_BNG_07_CCB_7204498
Last Updated : Jan 29, 2020, 6:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.