ಬೆಂಗಳೂರು: ನಾಗರಬಾವಿ ಮುಖ್ಯರಸ್ತೆಯಲ್ಲಿರುವ ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ ಮಾಡಿ, ಅದರ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ನಾಗರಬಾವಿ ಮುಖ್ಯರಸ್ತೆಯ 1947 ದಿ ಬ್ಲಾಕ್ ಹೌಸ್ ಕೆಫೆ ಹೆಸರಿನ ಹುಕ್ಕಾ ಬಾರ್ನಲ್ಲಿ ಅಕ್ರಮವಾಗಿ ಹುಕ್ಕಾವನ್ನ ಗ್ರಾಹಕರಿಗೆ ನೀಡುತ್ತಿದ್ದರು. ಮಾಹಿತಿ ಪಡೆದ ಕೇಂದ್ರ ವಿಭಾಗದ ಸಿಸಿಬಿ ಪೊಲಿಸರು ದಾಳಿ ನಡೆಸಿ ಮಾಲೀಕ ಓಂಕಾರ್ ಸಮರ್ಥ್, ಕ್ಯಾಶಿಯರ್ ಚಿನ್ಮಯೀ, ಹಾಗೂ ಸೌರಭ್ ಜೈನ್ ಎಂಬುವವರನ್ನ ಬಂಧಿಸಿದ್ದಾರೆ. 22 ವಿವಿಧ ಮಾದರಿಯ ತಂಬಾಕು, 28 ಹುಕ್ಕಾ ಪಾಟ್, 4.400 ರೂ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಘಟನೆ ಕುರಿತು ಜ್ಞಾನಭಾರತಿ ಠಾಣೆಯಲ್ಲಿ COTPA ಕಾಯಿದೆಯಡಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದಾರೆ.