ಬೆಂಗಳೂರು: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿಗಳ ಬಂಧನ ಮಾಡುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾಮ್ರಾಟ್ ಠಾಕೂರ್, ರಾಕೇಶ್ ಬುದ್ದಿ ಬಾಲ್ ಬಂಧಿತ ಆರೋಪಿಗಳು. ಇವರು ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಕೋ ಬಾಡಿ ಸ್ಪಾ ಸೆಲೂನ್ ಎಂಬ ಹೆಸರಿನಲ್ಲಿ ಸ್ಪಾ ನಡೆಸುತ್ತಿರುವುದಾಗಿ ಹೇಳಿ ಫ್ಲಾಟ್ ಒಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಸ್ಪಾ ಹೆಸರಿನಲ್ಲಿ ಹುಡುಗಿಯರನ್ನ ಕೆಲಸಕ್ಕೆ ಕರೆಸಿಕೊಂಡು ಕಾನೂನು ಬಾಹಿರವಾಗಿ ಮಸಾಜ್ ಪಾರ್ಲರ್ ಹೆಸರಲ್ಲಿ ಹೆಸರಿನಲ್ಲಿ ಹುಡುಗಿಯರನ್ನ ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಳ್ಳುತ್ತಿದ್ದರು
ಈ ಮಾಹಿತಿ ಮೇರೆಗೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನು 6 ಜನ ಹುಡುಗಿಯರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ಇವರನ್ನ ರಕ್ಷಣೆ ಮಾಡಲಾಗಿದೆ.
ಇನ್ನು ಬಂಧಿತ ಆರೋಪಿಗಳು ಕಡಿಮೆ ಸಮಯದಲ್ಲಿ ಹಣ ಗಳಿಸುವ ಉದ್ದೇಶದಿಂದ ಹುಡುಗಿಯರಿಗೆ ಹೆಚ್ಚು ಹಣಗಳಿಸುವ ಆಮಿಷ ತೋರಿಸಿ, ಕೆಲಸ ಕೊಡುವುದಾಗಿ ನಂಬಿಸಿ ಗಿರಾಕಿಗಳ ಜೊತೆ ವೇಶ್ಯಾವಾಟಿಕೆಗೆ ತೊಡಗಿಸಿ ಅಧಿಕ ಹಣ ಗಳಿಸಿ ಜಿವನ ಸಾಗಿಸುತ್ತಿದ್ದರು ಎನ್ನಲಾಗಿದೆ.