ETV Bharat / state

ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಿಸಿಬಿ ಅಧಿಕಾರಿಗಳ ಆಗಮನ: ರಾಗಿಣಿ, ಸಂಜನಾ ವಿಚಾರಣೆ ಆರಂಭ

author img

By

Published : Sep 9, 2020, 1:56 PM IST

Updated : Sep 9, 2020, 2:12 PM IST

ಡ್ರಕ್ಸ್​ ಲಿಂಕ್ ಆರೋಪದಡಿ ತನಿಖೆ ಎದುರಿಸುತ್ತಿರುವ ನಟಿಯರಾದ ಸಂಜನಾ ಹಾಗೂ ರಾಗಿಣಿಗೆ ಇಂದೂ ಸಹ ವಿಚಾರಣೆ ಮುಂದುವರಿಯಲಿದ್ದು, ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಿಸಿಬಿ ಪೊಲೀಸರು ಆಗಮಿಸಿದ್ದಾರೆ.

CCB Arrives at Women's Consolation Center
ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಿಸಿಬಿ ಆಗಮನ: ರಾಗಿಣಿ, ಸಂಜನಾಗೆ ವಿಚಾರಣೆ ಆರಂಭ

ಬೆಂಗಳೂರು: ರಾಗಿಣಿ ಹಾಗೂ ಸಂಜನಾ ವಿಚಾರಣೆ ನಡೆಸಲು ಸದ್ಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಿಸಿಬಿ ಇನ್ಸ್​​ಪೆಕ್ಟರ್​​ ಅಂಜುಮಾಲಾ ಆಗಮಿಸಿದ್ದು, ವಿಚಾರಣೆ ಸದ್ಯ ಚುರುಕುಗೊಂಡಿದೆ.

ಹಾಗೆ ತನಿಖೆಯ ದೃಷ್ಟಿಯಿಂದ ಮಡಿವಾಳದ ಎಫ್ಎಸ್​​​ಎಲ್​​​​ ಕಚೇರಿಗೆ ಯಾರನ್ನು ಶಿಫ್ಟ್ ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಮಾಡಲಿದ್ದಾರೆ.

ಹಾಗೆ ರಾಗಿಣಿಯನ್ನು ಮಡಿವಾಳಕ್ಕೆ ಕರೆದೊಯ್ದರೆ, ಸಂಜನಾ ಸಾಂತ್ವನ ಕೇಂದ್ರದಲ್ಲಿಯೇ ಇರಲಿದ್ದಾರೆ. ಒಂದು ವೇಳೆ ಸಂಜನಾ ಶಿಫ್ಟ್ ಆದ್ರೆ, ರಾಗಿಣಿ ಸಾಂತ್ವನ ಕೇಂದ್ರದಲ್ಲಿಯೇ ಇರುವ ಸಾಧ್ಯತೆಯಿದೆ.

ಮಹಿಳಾ ಸಾಂತ್ವನ ಕೇಂದ್ರಕ್ಕೆ ಸಿಸಿಬಿ ತಂಡ ಆಗಮನ

ಪೇಪರ್ ವರ್ಕ್​​​ನಲ್ಲಿ ಬಿಸಿಯಾಗಿದ್ದ ತನಿಖಾಧಿಕಾರಿಗಳು ಸದ್ಯ ಲಕ್ಕಸಂದ್ರದ ‌ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ರಾಗಿಣಿ, ರಾಹುಲ್, ರವಿಶಂಕರ್ ಮೊಬೈಲ್ ಡೇಟಾ ರಿಟ್ರೀವ್ ಆಗಿದೆ. ಸಿಸಿಬಿ ದಾಳಿ ಮುಂಚೆ ಈ ಆರೋಪಿಗಳು‌ ಮೊಬೈಲ್​​ನಲ್ಲಿದ್ದ ಮೆಸೇಜ್, ಫೋಟೋಸ್, ವಿಡಿಯೋಗಳೆಲ್ಲವನ್ನು ಡಿಲಿಟ್ ಮಾಡಿದ್ದರು ಎನ್ನಲಾಗ್ತಿದೆ.

ಹೀಗಾಗಿ ಮಡಿವಾಳ ಎಫ್ಎಸ್ಎಲ್​​​​ಗೆ ಮೊಬೈಲ್ ರವಾನೆ ಮಾಡಲಾಗಿತ್ತು‌. ಸದ್ಯ ಮೊಬೈಲ್​ ಡೇಟಾ ರಿಟ್ರೀವ್​​​ ಆಗಿದ್ದು, ಈ ದಾಖಲೆಗಳ ಮೇಲೆ ವಿಚಾರಣೆ ಮುಂದುವರಿಯಲಿದೆ.

Last Updated : Sep 9, 2020, 2:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.