ETV Bharat / state

ಸಾಲ ಕೊಡುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದವರ ಬಂಧನ: ಆ್ಯಪ್​ಗಳ ಮೇಲೆ ನಿಗಾ ಇಟ್ಟ ಸಿಸಿಬಿ

ಇತ್ತೀಚಿನ ದಿನಗಳಲ್ಲಿ ಆನ್​ಲೈನ್​ ಮೂಲಕ ಸಾಲ ಕೊಡಲು ಅನೇಕ ಆ್ಯಪ್​ಗಳು ಹುಟ್ಟಿಕೊಂಡಿವೆ. ಇವು ಜನರಿಂದ ಸಾಕಷ್ಟು ಹಣ ಸುಲಿಗೆ ಮಾಡುತ್ತಿದ್ದು, ಈ ಕುರಿತಂತೆ ಅನೇಕ ಪ್ರಕರಣಗಳು ದಾಖಲಾಗಿವೆ. ಈ ಕುರಿತಂತೆ ಸಿಸಿಬಿ ಮತ್ತು ಸಿಐಡಿ ಅಧಿಕಾರಿಗಳು ತನಿಖೆ ನಡೆಸಲು ತಂಡ ರಚಿಸಿ ಮೂವರನ್ನು ಬಂಧಿಸಿದ್ದಾರೆ. ಈ ಕುರಿತಂತೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್
CCB Additional Commissioner Sandeep Patil
author img

By

Published : Dec 28, 2020, 1:29 PM IST

Updated : Dec 28, 2020, 2:25 PM IST

ಬೆಂಗಳೂರು: ಕೊರೊನಾದಿಂದ ಬಹಳಷ್ಟು ಮಂದಿ ಕೆಲಸ ಕಳೆದುಕೊಂಡು ಸಾಲಕ್ಕಾಗಿ ಆ್ಯಪ್​ಗಳ ಮೊರೆ ಹೋಗುತ್ತಿದ್ದು, ಸಾಲ ಕೊಡುವ ನೆಪದಲ್ಲಿ ಆ್ಯಪ್​ಗಳು ಜನರಿಂದ ಹಣ ಸುಲಿಗೆ ಮಾಡುತ್ತಿದ್ದವು. ಇದರಿಂದ ಅನೇಕ ದೂರುಗಳು ಕೇಳಿ ಬಂದಿದ್ದು, ಈ ಸಂಬಂಧ ಸಿಸಿಬಿ ಮತ್ತು ಸಿಐಡಿ ತಂಡದ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ.

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್

ಈ ಕುರಿತಂತೆ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕೊರೊನಾ ಮಹಾಮಾರಿಯಿಂದ ದೇಶದಲ್ಲಿ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಬಹುತೇಕ ಮಂದಿ ಕೆಲಸ ಕಳೆದುಕೊಂಡು ಹಣದ ಅವಶ್ಯಕತೆಯಿಂದ ನಾನಾ ಬ್ಯಾಂಕ್​ಗಳಲ್ಲಿ ಸಾಲದ ಮೊರೆ ಹೋಗಿದ್ದಾರೆ. ಈ ವೇಳೆ ಸರಿಯಾದ ಸಮಯದಲ್ಲಿ ಹಣ ಸಿಗದಿದ್ದಾಗ ಸಾಲ ಕೊಡುವಂತಹ ಆ್ಯಪ್​ಗಳಿಂದ ಹಣ ಪಡೆಯುತ್ತಿದ್ದಾರೆ.

ಇದನ್ನೆ ನೆಪವಾಗಿಟ್ಟುಕೊಂಡ ಚೀನಾ ಕಂಪೆನಿಗಳು ಸಾರ್ವಜನಿಕರಿಂದ ಹಣ ಪೀಕಲು ಮುಂದಾಗಿವೆ. ಸದ್ಯ ಈ ಆ್ಯಪ್​ ನಡೆಸುತ್ತಿರುವ ಗ್ಯಾಂಗ್ ಲೋನ್ ಕೊಟ್ಟು ಮನಬಂದಷ್ಟು ಬಡ್ಡಿ, ಚಕ್ರ ಬಡ್ಡಿ ಸರ್ವಿಸ್ ಚಾರ್ಜಸ್ ಹೆಸರಲ್ಲಿ ದುಬಾರಿ ಹಣ ವಸೂಲಿ ಮಾಡ್ತಿದ್ದಾರೆ. ಹೀಗಾಗಿ ಇಂತಹ ಆ್ಯಪ್​​ಗಳಿಗೆ ಬ್ರೇಕ್ ಹಾಕಲು ಸಿಐಡಿ ಹಾಗೂ ಸಿಸಿಬಿ ತಂಡಗಳು ರೆಡಿಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದರು.

ಓದಿ: ಗೋ ಹತ್ಯೆ ‌ನಿಷೇಧ ಮಸೂದೆ ಸುಗ್ರೀವಾಜ್ಞೆಗೆ ಸಚಿವ ಸಂಪುಟ ತೀರ್ಮಾನ; ಪ್ರಭು ಚವ್ಹಾಣ್

ಸೈಯದ್ ಅಹ್ಮದ್, ಸೈಯದ್ ಇರ್ಫಾನ್, ಆದಿತ್ಯ ಸೇನಾಪತಿ ಬಂಧಿತ ಆರೋಪಿಗಳು. ಇವರು ಅಕ್ರಮ ಆನ್​ಲೈನ್​ ಲೋನ್​ ನೀಡುವ ಆ್ಯಪ್​ಗಳನ್ನು ನಡೆಸುತ್ತಿದ್ದರು. ಇದರ ಮೂಲಕ ಸಾಲ ಪಡೆದ ಜನರಿಗೆ ಹೆಚ್ಚಿನ ಪ್ರಮಾಣದ ಬಡ್ಡಿ ಹಾಕುವುದು, ಹಣ ಕೊಡುವ ವೇಳೆ ಬೆದರಿಕೆ ಹಾಕುವುದನ್ನು ಮಾಡುತ್ತಿದ್ದರು. ಈ ಕುರಿತಂತೆ ಸೈಬರ್​ ವಿಭಾಗದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಇಂತಹ ಅಕ್ರಮದ ಕುರಿತಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.

ಇದರ ತನಿಖೆ ನಡೆಸಲು ಸಿಸಿಬಿಯಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡು ಯಾರು ಯಾವ ಆ್ಯಪ್​ಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೃತ್ಯವನ್ನು ಒಂದು ಕಂಪೆನಿಯ ಮೂಲಕ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ. Money day, paisa pay, lone time, ₹ day, ₹ curt, in cash ಆ್ಯಪ್​ಗಳ ಮೂಲಕ ಹಣದ ವ್ಯವಹಾರ ನಡೆಸುತ್ತಿದ್ದರು.

ಬಂಧಿತರಿಂದ 25 ಲ್ಯಾಪ್​ಟಾಪ್​ಗಳು, 118 ಮೊಬೈಲ್​ಗಳು, 30 ಸಿಮ್​ ಕಾರ್ಡ್​​ಗಳು ಸೇರಿದಂತೆ ಸೀಲ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಕಂಪೆನಿಗಳಿಗೆ ಭೇಟಿ ನೀಡಿ ಅಪಾರ ಪ್ರಮಾಣದಲ್ಲಿ ವಸ್ತುಗಳ ಜಪ್ತಿ ಮಾಡಿ ಹೆಚ್ಚಿನ ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Last Updated : Dec 28, 2020, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.