ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಲಿಂಕ್ ಆರೋಪ ಪ್ರಕರಣ ಸಂಬಂಧ 5ನೇ ಆರೋಪಿ ವೈಭವ್ ಜೈನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಯಾಗಿದ್ದ ವೈಭವ್, 2018ರಲ್ಲಿ ರವಿಶಂಕರ್ ಹಾಗೂ ರಾಗಿಣಿ ಪಾರ್ಟಿಗೆ ಹೋಗಿದ್ದಾಗ ಆರೋಪಿಗಳಿಗೆ ಪರಿಚಯವಾಗಿದ್ದನಂತೆ.
ಈ ಪರಿಚಯ ಸ್ನೇಹಕ್ಕೆ ತಿರುಗಿ ಸಲುಗೆ ಜಾಸ್ತಿ ಆಗ್ತಾ ಹೋದಂತೆ ವೈಭವ್ ವ್ಯವಹಾರ ರವಿಶಂಕರ್ ತಿಳಿದುಕೊಂಡಿದ್ದ. ಕಾಲ ಕ್ರಮೇಣ ಬೃಹತ್ ಪಾರ್ಟಿ ಆಯೋಜಿಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಶ್ರೀಮಂತರ ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ಸಪ್ಲೈ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದನಂತೆ.
ಸದ್ಯ ರಾಗಿಣಿ ಆಪ್ತ ಬಂಧಿತ ಆರೋಪಿ ರವಿಶಂಕರ್ ನೀಡಿದ ಮಾಹಿತಿ ಮೇರೆಗೆ ವೈಭವ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಿರೇನ್ ಖನ್ನಾ ಜೊತೆಗೆ ಡೈರೆಕ್ಟ್ ಲಿಂಕ್ ಹೊಂದಿದ್ದ ವೈಭವ್, ಪ್ರಕರಣದ ಮತ್ತೊಬ್ಬ ಆರೋಪಿ ಆದಿತ್ಯಾ ಆಳ್ವಾ ಜೊತೆ ಸೇರಿ ಪಾರ್ಟಿ ಆರ್ಗನೈಸ್ ಮಾಡುತ್ತಿದ್ದ. ನಗರದ ಪ್ರತಿಷ್ಠಿತ ಹೋಟೆಲ್, ರೆಸಾರ್ಟ್ಗಳಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಪಾರ್ಟಿಗೆ ಅಂತಾನೆ ವಾಟ್ಸಪ್ ಮತ್ತು ಟೆಲಿಗ್ರಾಂನಲ್ಲಿ ಗ್ರೂಪ್ ಮಾಡಿ ಆಹ್ವಾನ ನೀಡುತ್ತಿದ್ದನಂತೆ.
ಅಲ್ಲದೆ ಯಾರನ್ನು ಪಾರ್ಟಿಗೆ ಆಹ್ವಾನಿಸಬೇಕು, ಅವರಿಗೆ ಏನೇನೂ ವ್ಯವಸ್ಥೆ ಇರಬೇಕು ಎಲ್ಲವನ್ನೂ ನಿಭಾಯಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.