ETV Bharat / state

ಫೋನ್​ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ: ಕುಮಾರಸ್ವಾಮಿಗೆ ಆತಂಕ ಕಾಡ್ತಿದೆ ಅಂದ್ರು ಹೆಚ್. ವಿಶ್ವನಾಥ್ - ಸಿಬಿಐ ತನಿಖೆ

ಫೋನ್​ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ನೀಡಿರುವುದು ಕುಮಾರಸ್ವಾಮಿಗೆ ಆತಂಕ ತಂದಿರಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ ಎಂದು ಅನರ್ಹ ಶಾಸಕ ಹೆಚ್​. ವಿಶ್ವನಾಥ ಹೇಳಿದ್ರು.

ಅನರ್ಹ ಶಾಸಕ ಹೆಚ್.ವಿಶ್ವನಾಥ್
author img

By

Published : Aug 18, 2019, 4:30 PM IST

Updated : Aug 18, 2019, 4:37 PM IST

ಬೆಂಗಳೂರು: ಫೋನ್​ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವುದರಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಆತಂಕ ಶುರುವಾಗಿರಬಹುದು. ಸಿಎಂ ಯಡಿಯೂರಪ್ಪ ಅವರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ ಪರೋಕ್ಷವಾಗಿ ಹೆಚ್​ಡಿಕೆ ವಿರುದ್ಧ ಕುಟುಕಿದ್ದಾರೆ.

ಅನರ್ಹ ಶಾಸಕ ಹೆಚ್. ವಿಶ್ವನಾಥ್..

ಧವಳಗಿರಿ ನಿವಾಸದಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್​ ನಾಲ್ಕು ಭಾಗವಾಗಿದೆ. ಕೆಲವರು ಸ್ವಾಗತಿಸಿದರೆ, ಹಲವು ವಿರೋಧಿಸುತ್ತಿದ್ದಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಸಿದ್ದರಾಮಯ್ಯ ಸ್ವಾಗತಿಸಿರುವುದು ಒಳ್ಳೆಯದು ಎಂದು ಹೇಳಿದರು.

ನಾನು ಚುನಾವಣಾ ರಾಜಕಾರಣದಿಂದ ವಿರಾಮ ತೆಗೆದುಕೊಂಡಿದ್ದೇನೆ. ಆದರೆ, ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ. ಜನರ ಕಷ್ಟ, ಸುಖದಲ್ಲಿ ಭಾಗಿಯಾಗಿರುತ್ತೇನೆ ಎಂದು ಹೆಚ್.​ ವಿಶ್ವನಾಥ್​ ಸ್ಪಷ್ಟನೆ ನೀಡಿದ್ರು.

Intro:GggBody:KN_BNG_03_HVISHWANATH_BSYHOUSE_SCRIPT_7201951

ಸಿಬಿಐ ತನಿಖೆಗೆ ಕೊಟ್ಟಿರುವುದು ಕುಮಾರಸ್ವಾಮಿಗೆ ಆತಂಕ ಶುರುವಾಗಿದೆ: ಎಚ್.ವಿಶ್ವನಾಥ್

ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದರಿಂದ ಬಹುಶ: ಕುಮಾರಸ್ವಾಮಿ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ತಿಳಿಸಿದರು.

ಧವಳಗಿರಿಯಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಕೊಟ್ಟಿರೋದ್ರಿಂದ ಕುಮಾರಸ್ವಾಮಿ ಅವ್ರಿಗೆ ಆತಂಕ ಆಗಿದೆ. ಹಾಗಾಗಿಯೇ ಕುಮಾರಸ್ವಾಮಿ ತನಿಖೆಯನ್ನು ಅಮೇರಿಕ ಅಧ್ಯಕ್ಷ ಟ್ರಂಪ್ ಗೆ ಕೊಡಿ ಅಂತ ಮಾಜಿ ಸಿಎಂ ಹೇಳಿದ್ದಾರೆ. ಯಾಕೋ ಕುಮಾರಸ್ವಾಮಿ ಬಹಳ ಆತಂಕದಲ್ಲಿ ಇದ್ದ ಹಾಗೆ ಕಾಣಿಸುತ್ತದೆ. ಕುಮಾರಸ್ವಾಮಿ ಗೆ ಆತಂಕ ಶುರುವಾಗಿದೆ. ಅದಕ್ಕೆ ಅವರು ಅಂತರಾಷ್ಟ್ರೀಯ ತನಿಖಾ ಸಮಿತಿಗೆ ಕೊಡಿ ಅಂತ ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗುತ್ತದೆ. ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐಗೆ ಕೊಟ್ಟಿದ್ದು ಸ್ವಾಗತರ್ಹ ಎಂದು ವಿವರಿಸಿದರು.

ಮೊದಲಿಗೆ ತನಿಖೆ ಗೆ ಕೊಡಿ ಅಂದರು, ಕೊಟ್ಟ ಬಳಿಕ ಕಾಂಗ್ರೆಸ್ ದ್ವಂದ್ವ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ಕೊಡುತ್ತಾರೆ. ಸಿದ್ದರಾಮಯ್ಯ ಸಿಬಿಐ ತನಿಖೆ ಗೆ ವಹಿಸಿರುವುದನ್ನು ಸ್ವಾಗತಿಸಿರುವುದು ಒಳ್ಳೆಯದು ಎಂದು ಇದೇ ವೇಳೆ ತಿಳಿಸಿದರು.

ಉಪಚುನಾವಣೆ ಸ್ಪರ್ಧೆ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದೇನೆ. ರಾಜಕೀಯದಲ್ಲಿ ಸಕ್ರಿಯವಾಗಿ ಇರುತ್ತೇನೆ. ಜಿಟಿ ದೇವೇಗೌಡ ಮಗ ಕೂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ನನ್ನ ಮಗ ಜಿಲ್ಲಾ ಪಂಚಾಯತಿ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದಾರೆ. ಏನು ಆಗುತ್ತೋ ಕಾದು ನೋಡೋಣ ಎಂದು ಸೂಚ್ಯವಾಗಿ ತಿಳಿಸಿದರು.Conclusion:Gggg
Last Updated : Aug 18, 2019, 4:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.