ETV Bharat / state

ಲಂಚ ಕೇಳಿದ ಆರೋಪ: ಆರ್‌ಪಿಎಫ್ ಇನ್ಸ್​​ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡ ಸಿಬಿಐ - ಬೆಂಗಳೂರು ಲೇಟೆಸ್ಟ್​​ ಕ್ರೈಂ ನ್ಯೂಸ್​

ಲಂಚ ಕೇಳಿದ ಆರೋಪದಡಿ ಬೈಯ್ಯಪ್ಪನಹಳ್ಳಿ ರೈಲ್ವೆ ಪಡೆ (ಆರ್​​ಪಿಎಫ್) ಇನ್ಸ್​​ಪೆಕ್ಟರ್ ಉಮೇಶ್ ಡಾಕರ್ ಹಾಗೂ ಕಾನ್ಸ್​​ಟೇಬಲ್ ರಾಘವೇಂದ್ರ ಎಂಬುವವರ ವಿರುದ್ಧ ಸಿಬಿಐನ ಎಸಿಬಿ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

CBI
ಕೇಂದ್ರೀಯ ತನಿಖಾ ದಳ
author img

By

Published : Mar 9, 2022, 6:55 AM IST

ಬೆಂಗಳೂರು: ಪ್ರಕರಣ ಮುಚ್ಚಿಹಾಕಲು ಖಾಸಗಿ ಆಸ್ಪತ್ರೆಯೊಂದರ ಮ್ಯಾನೇಜರ್​​ಗೆ 1.50 ಲಕ್ಷ ರೂ.ಲಂಚ ಕೇಳಿದ ಆರೋಪದಡಿ ಬೈಯ್ಯಪ್ಪನಹಳ್ಳಿ ರೈಲ್ವೆ ಪಡೆ (ಆರ್​​ಪಿಎಫ್) ಇನ್ಸ್​​ಪೆಕ್ಟರ್ ಹಾಗೂ ಕಾನ್ಸ್​​ಟೇಬಲ್ ವಿರುದ್ಧ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಆತ್ರೇಯಾ ಆಸ್ಪತ್ರೆಯ ನಿರ್ವಹಣಾ ವಿಭಾಗದ ಮ್ಯಾನೇಜರ್ ಮಂಜುನಾಥ್ ಎಂಬುವರು ನೀಡಿದ ದೂರಿನ ಮೇರೆಗೆ ಇನ್ಸ್​​ಪೆಕ್ಟರ್ ಉಮೇಶ್ ಡಾಕರ್ ಹಾಗೂ ಕಾನ್ಸ್​​ಟೇಬಲ್ ರಾಘವೇಂದ್ರ ಎಂಬುವವರ ವಿರುದ್ಧ ಸಿಬಿಐನ ಎಸಿಬಿ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ಬೈಯ್ಯಪ್ಪನಹಳ್ಳಿ ರೈಲ್ವೆ ಜಾಗದ ಸಮೀಪದಲ್ಲಿರುವ ಆಸ್ಪತ್ರೆಯು ನವೀಕರಣ ಕಾಮಗಾರಿ ಮುಗಿಸಿತ್ತು. ಕಳೆದ ತಿಂಗಳು(ಫೆಬ್ರವರಿ) 26 ರಂದು ರಿನೋವೇಷನ್ ಕಾರ್ಯಕ್ರಮಕ್ಕಾಗಿ ರೈಲ್ವೆ ಜಾಗ ಬಳಸಿಕೊಂಡಿತ್ತು. ಶಾಮಿಯಾನ ಸೇರಿದಂತೆ‌ ಇತರ ಕಾರ್ಯಗಳಿಗೆ ನೆಲ ಅಗೆಯುವಾಗ ರೈಲ್ವೆ ಕೇಬಲ್ ಹಾನಿಯಾಗಿತ್ತು.‌

ಈ ಸಂಬಂಧ ಆರ್​​ಪಿಎಫ್‌ ಇನ್ಸ್​​ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ‌ ಪರಿಶೀಲಿಸಿ, ಆಸ್ಪತ್ರೆ ವಿರುದ್ಧ ಅಸಮಾಧಾನ ತೋರ್ಪಡಿಸಿದ್ದರು. ಇಲಾಖೆ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ ರೈಲ್ವೆ ಕೇಬಲ್​​​ಗಳಿಗೆ ಹಾನಿ ಮಾಡಿದ್ದೀರಾ ಎಂದು ಆರೋಪಿಸಿದ್ದರು.

ಆಗಿರುವ ಹಾನಿ ಬಗ್ಗೆ ಮಾರೆಮಾಚಲು 25 ಸಾವಿರ ದಂಡ ಹಾಗೂ‌ ಹೆಚ್ಚುವರಿಯಾಗಿ 1.50 ಲಕ್ಷ ನೀಡುವಂತೆ ಲಂಚ ಕೇಳಿದ್ದರು. ಇದಕ್ಕೆ ಕಾನ್ಸ್​​ಟೇಬಲ್ ರಾಘವೇಂದ್ರ ಸಾಥ್ ನೀಡಿದ್ದಾರೆ ಎಂದು ಆರೋಪಿಸಿ ಇಬ್ಬರ ವಿರುದ್ಧ ನೀಡಿದ ದೂರಿನ ಮೇರೆಗೆ ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಬಿಟಿಸಿಯಲ್ಲಿ ಕುದುರೆಗಳಿಗೆ ಹಿಂಸೆ ಆರೋಪ: ಒಂದು ವರ್ಷದಲ್ಲಿ ಸುಧಾರಣೆ ತರುವುದಾಗಿ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.