ಬೆಂಗಳೂರು: ಜಲಮಂಡಳಿ ನಿರ್ವಹಣೆ ಕಾಮಗಾರಿ ಹಾಗೂ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಹಲವೆಡೆ ಬುಧವಾರದಂದು ಕಾವೇರಿ ನೀರು ಸ್ಥಗಿತಗೊಳ್ಳಲಿದೆ. ಕೆ. ಆರ್ ಪುರಂನಲ್ಲಿ ಜೋಡಣಾ ಕಾರ್ಯ ಹಾಗೂ ಟಿ. ಕೆ ಹಳ್ಳಿಯಲ್ಲಿರುವ 2500 ಮಿ. ಮೀಟರ್ ವ್ಯಾಸದ ಬಟರ್ ಫ್ಲೈವಾಲ್ವ್ನ 250 ಮಿ. ಮೀಟರ್ ವ್ಯಾಸದ ತುಕ್ಕು ಹಿಡಿದ ಬೈಪಾಸ್ ಮಾರ್ಗವನ್ನು ಬದಲಾಯಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಬುಧವಾರ ಬೆಳಗಿನ ಜಾವ: 03:00 ಗಂಟೆಯಿಂದ ರಾತ್ರಿ: 09:00 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಯಲಹಂಕ, ಜಕ್ಕೂರು, ಬ್ಯಾಟರಾಯನಪುರ, ವಿದ್ಯಾರಣ್ಯಪುರ, ಬಿಇಎಲ್ ಲೇಔಟ್, ಹೆಚ್.ಎಂ.ಟಿ ಲೇಔಟ್, ದಾಸರಹಳ್ಳಿ, ಶೆಟ್ಟಹಳ್ಳಿ, ಮಲ್ಲಸಂದ್ರ, ಬಗಲಗುಂಟೆ, ಟಿ. ದಾಸರಹಳ್ಳಿ, ಪೀಣ್ಯ, ರಾಜ್‌ಗೋಪಾಲನಗರ, ಚೊಕ್ಕಸಂದ್ರ, ಹೆಗ್ಗನಹಳ್ಳಿ, ಹೆಚ್.ಎಂ.ಟಿ ನಂದಿನಿ ಲೇಔಟ್, ಆರ್.ಆರ್. ನಗರ, ಕೆಂಗೇರಿ, ಉಲ್ಲಾಳ, ಅನ್ನಪೂರ್ಣೇಶ್ವರಿ ನಗರ, ಪಾಪರೆಡ್ಡಿಪಾಳ್ಯ, ಮಲ್ಲತ್ತಹಳ್ಳಿ ನಗರ, ಲೇಔಟ್, ಐಡಿಯಲ್ ಹೋಮ್ಸ್, ಬಿಇಎಂಎಲ್ ಲೇಔಟ್,
ಪಟ್ಟಣಗೆರೆ, ಚೆನ್ನಸಂದ್ರ, ಕೊತ್ತನೂರು ಜ್ಞಾನಭಾರತಿ ಜಗಜ್ಯೋತಿ ಲೇಔಟ್, ಮಾರತ್‌ಹಳ್ಳಿ ಹೂಡಿ ದಿಣ್ಣೆ ಜೆ.ಪಿ.ನಗರ, 6,7,8 ನೇ ಹಂತ, ವಿಜಯಬ್ಯಾಂಕ್ ಲೇಔಟ್, ಕೂಡ್ಲು, ಅಂಜನಾಮರ, ಬೊಮ್ಮನಹಳ್ಳಿ , ಕೆ ಆರ್.ಪುರಂ, ರಾಮಮೂರ್ತಿನಗರ, ಮಹದೇವಪುರ, ವೈಟ್‌ಫೀಲ್ಡ್, ನಾಗರಬಾವಿ, ಜಿ.ಕೆ.ವಿ.ಕೆ. ಸಂಜಯನಗರ, ನ್ಯೂ ಐಇಎಲ್ ರಸ್ತೆ, - ಹೆಚ್.ಎಸ್ ಲೇಔಟ್ ಜೆ.ಪಿ.ನಗರ, ಹೆಚ್.ಬಿ.ಆರ್.ಲೇಔಟ್, ದೊಮ್ಮಲೂರು, ಬನ್ನೇರುಘಟ್ಟ ರಸ್ತೆ, ಜಂಬೂಸವಾರಿ ದಿಣ್ಣೆ, - ಲಗ್ಗೆರೆ, ಶ್ರೀಗಂಧದ ಕಾವಲ್, ಟೆಲಿಕಾಂ ಲೇಔಟ್, ಶ್ರೀನಿವಾಸ ನಗರ, ಬಾಹುಬಲಿ ನಗರ.
ಜಾಲಹಳ್ಳಿ, ಏರೋ ಇಂಜಿನ್, ಓ.ಎಂ.ಐ.ಆರ್, ಬೊಮ್ಮನಹಳ್ಳಿ, ಅರಕೆರೆ, ಬಿ.ಹೆಚ್.ಇ.ಎಲ್. ಲೇಔಟ್, ಸುಂಕದಕಟ್ಟೆ, ಬ್ಯಾಡರಹಳ್ಳಿ, ಸರ್.ಎಂ.ವಿ.ಲೇಔಟ್, ಕೊಟ್ಟಗೆಪಾಳ್ಯ, ಎಲ್.ಐ.ಸಿ.ಲೇಔಟ್, ನಾಗದೇವನಹಳ್ಳಿ, ಮೈಸೂರು ರಸ್ತೆ, ಶಿರ್ಕೆ, ಚಿಕ್ಕಗೊಲ್ಲರಹಟ್ಟಿ, ಸುಬ್ಬಣ್ಣ ಗಾರ್ಡನ್, ನಾಯಂಡನಹಳ್ಳ, ಕಾಮಾಕ್ಷಿಪಾಳ್ಯ, ಗೋವಿಂದರಾಜ್‌ನಗರ, ಕೆ.ಹೆಚ್.ಚಿ.ಕಾಲೋನಿ, ಮೂಡಲಪಾಳ್ಯ, ಆದರ್ಶ ನಗರ ಮುನೇಶ್ವರನಗರ, ಕೊಡಿಗೆಹಳ್ಳಿ, ಅಮೃತಹಳ್ಳಿ, ಕೋಗಿಲು, ಜೆ.ಪಿ.ಪಾರ್ಕ್, ಯಶವಂತಪುರ, ರಂಗನಾಥಮರ, ಸದ್ಗುಂಟೆ ಪಾಳ್ಯ ಕಸವನಹಳ್ಳಿ.
ಕೋನೆನಾ ಅಗ್ರಹಾರ, ಸುಧಾಮನಗರ, ಮುರುಗೇಶ್ ಪಾಳ್ಯ, ಹೆಚ್.ಆರ್.ಬಿ.ಆರ್.ಲೇಔಟ್, ನಾಗವಾರ, ಬಾಲಾಜಿಲೇಔಟ್, ಹೆಚ್.ಚಿ.ಟಿ ಕಾಲೋನಿ, ಸಾರ್ವಭೌಮನಗರ, ಹುಳಿಮಾವು, ಬಂಡೆಪಾಳ್ಯ, ಸರಸ್ವತಿ ಪುರಂ, ರಾಘವೇಂದ್ರ ಲೇಔಟ್, ಸಿಂಡಿಕೇಟ್ ಬ್ಯಾಂಕ್ ಕಾಲೋನಿ, ರಾಮಯ್ಯ ಲೇಔಟ್, ಪ್ರಗತಿ ಲೇಔಟ್, ಸಿಲ್ಕ್ ಕಾಲೋನಿ, ಮಂಗಮ್ಮನಪಾಳ್ಯ, ಸಿಂಗಸಂದ್ರ, ದೇವರಚಿಕ್ಕನಹಳ್ಳಿ, ಲಕ್ಷ್ಮಿನಾರಾಯಣಪುರ, ಸೋಮಸುಂದರ ಪಾಳ್ಯ, ದೊಡ್ಡನೆಕುಂದಿ, ಗರುಡಾಚಾರ್ ಪಾಳ್ಯ, ಸಪ್ತಗಿರಿಲೇಔಟ್.
ಮುನೆಕೊಳಲ, ಇಸ್ರೋ ಲೇಔಟ್, ಬೃಂದಾವನ ನಗರ, ತಿಗಳರಪಾಳ್ಯ, ಅಕ್ಷಯನಗರ, ರಮೇಶ್ ನಗರ, ಅಣ್ಣಸಂದ್ರಪಾಳ್ಯ, ಪಟಾಲಮ್ಮ ಲೇಔಟ್, ಗಾಯತ್ರಿಲೇಔಟ್, ಮಂಜುನಾಥ್ ನಗರ, ರಾಮಾಂಜನೇಯ ಲೇಔಟ್, ಮಾರೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕಾವೇರಿ ನೀರು ಸರಬರಾಜು ಯೋಜನೆಯ 4 ನೇ ಹಂತ 2ನೇ ಘಟ್ಟದಡಿ ನೀರು ಸರಬರಾಜಾಗುವ ಪ್ರದೇಶಗಳ ಸಂಪೂರ್ಣ ವಿವರವನ್ನು ಪ್ರಕಟಿಸಲಾಗಿದೆ. ವಿವರವನ್ನು ಮಂಡಳಿಯ ಅಧಿಕೃತ ಜಾಲತಾಣ (WWW.bwssb.karnataka.gov.in) ದಲ್ಲಿ ಪ್ರಕಟ ಮಾಡಲಾಗಿದೆ ಎಂದು ತಿಳಿಸಿದೆ.
ಓದಿ: ಬಿಜೆಪಿ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಮಾತ್ರ ಕೊರೊನಾ ಅಡ್ಡಿ: ಕೃಷ್ಣ ಬೈರೇಗೌಡ