ETV Bharat / state

ಟೋಯಿಂಗ್ ವಾಹನಕ್ಕೆ ಅಡ್ಡಿ ಆರೋಪ: ಬೆಂಗಳೂರಲ್ಲಿ 20 ಮಂದಿ ವಿರುದ್ಧ ಪ್ರಕರಣ - ಟೋಯಿಂಗ್ ವಾಹನದ ಸಿಬ್ಬಂದಿ

ಮದ್ಯ ಸೇವಿಸಿ ಟೋಯಿಂಗ್ ಮಾಡಿದ್ದಾರೆಂದು ಸುಳ್ಳು ಆರೋಪ ಮಾಡಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಸುಮಾರು 20 ಜನರ ವಿರುದ್ಧ ಪೊಲೀಸರು ಪ್ರಕರಣ​ ದಾಖಲಿಸಿದ್ದಾರೆ.

ಮದ್ಯ ಸೇವಿಸಿ ಟೋಯಿಂಗ್ ಆರೋಪ ಪ್ರಕರಣ
author img

By

Published : Sep 22, 2019, 9:33 AM IST

ಬೆಂಗಳೂರು: ಟೋಯಿಂಗ್ ವಾಹನದ ಸಿಬ್ಬಂದಿ ಕುಡಿದು ಟೋಯಿಂಗ್ ಮಾಡಿದ ಆರೋಪದ ಮೇಲೆ ನಡೆದ ಗಲಾಟೆ ಮಾಡಿ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜಾಜಿ‌‌ನಗರದ ಸಂಚಾರಿ ವಿಭಾಗದ ಎಎಸ್ಐ ಶಿವಾನಂದ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ರಾಜಾಜಿನಗರದ ಅಂಗಡಿಯೊಂದರ ಬಳಿ ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದೇವೆ.‌‌ ಈ ಬೋರ್ಡ್ ಹಾಕಿದಾಗಿನಿಂದ ಹಲವರು ತಕರಾರು ಮಾಡಿದ್ದರು. ನಿನ್ನೆ ಸಹ ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಟೋಯಿಂಗ್ ಮಾಡಲು ಹೋಗಿದ್ದಾಗ ವಾಹನದ ಚಾಲಕ ಮದ್ಯ ಸೇವಿಸಿದ್ದಾರೆಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ರೆ ಆಲ್ಕೋಮೀಟರ್ ನಲ್ಲಿ ಪರೀಕ್ಷೆಗೊಳಪಡಿಸಿದಾಗ, ಆರೋಪ ಸುಳ್ಳೆಂದು ಸಾಬೀತಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಸುಖಾಸುಮ್ಮನೆ ಗಲಾಟೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಟೋಯಿಂಗ್ ವಾಹನ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ 20 ಜನರ ವಿರುದ್ಧ ಪ್ರಕರಣ

ಹಾಗೆಯೇ ಚಾಲಕನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಹಲಸೂರು ಗೇಟ್ ಟ್ರಾಫಿಕ್ ಸ್ಟೇಷನ್ ಕಾನ್​ಸ್ಟೇಬಲ್​ಗೆ ಘಟನೆಗೆ ಕಾರಣ ಕೋರಿ ಸಮನ್ಸ್ ಜಾರಿ ಮಾಡಿದ್ದೇವೆ. ಪೇದೆಯಿಂದ ಉತ್ತರ ಬಂದ ಬಳಿಕ ಕ್ರಮ‌ ಕೈಗೊಳ್ಳಲಾಗುವುದು ಎಂದು ರವಿಕಾಂತೇಗೌಡ ಇದೇ ವೇಳೆ ತಿಳಿಸಿದರು.

Intro:Body:ಮದ್ಯ ಸೇವಿಸಿ ಟೋಯಿಂಗ್ ಮಾಡಿದ ಆರೋಪ ಪ್ರಕರಣ: ಗಲಾಟೆ ನಡೆಸಿದ್ದ ಮೇಲೆ ಕೇಸು ದಾಖಲಿಸಿದ ಪೊಲೀಸರು

ಬೆಂಗಳೂರು: ಕುಡಿದ ಆಮಲಿನಲ್ಲಿ ಟೋಯಿಂಗ್ ವಾಹನದ ಸಿಬ್ಬಂದಿ ಟೊಯಿಂಗ್ ಮಾಡಿದ ಆರೋಪ ಹಿನ್ನೆಲೆಯಲ್ಲಿ‌ ಇಂದು ನಡೆದ ಗಲಾಟೆ ವೇಳೆ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಪಾದನೆ ಹಿನ್ನೆಲೆಯಲ್ಲಿ ರಾಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ ರಾಜಾಜಿ‌‌ ನಗರದ ಸಂಚಾರಿ ವಿಭಾಗದ ಎಎಸ್ಐ ಶಿವಾನಂದ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಸುಮಾರು 20 ಜನರ ಮೇಲೆ ಕೇಸು ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ರಾಜಾಜಿನಗರದ ಅಂಗಡಿಯೊಂದರ ಬಳಿ ನೋ ಪಾರ್ಕಿಂಗ್ ಬೋರ್ಡ್ ಹಾಕಿದ್ದೇವೆ.‌‌ ಈ ಬೋರ್ಡ್ ಹಾಕಿದಾಗಿನಿಂದ ಹಲವರು ತಕರಾರು ಮಾಡಿದ್ದರು. ಇಂದು ಸಹ ನೋಪಾರ್ಕಿಂಗ್ ಸ್ಥಳದಲ್ಲಿ ಬೈಕ್ ಟೊಯಿಂಗ್ ಮಾಡಲು ಹೋಗಿದ್ದಾಗ ವಾಹನದ ಚಾಲಕ ಮದ್ಯ ಸೇವಿಸಿರುವುದಾಗಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೂಡಲೇ ನಮ್ಮ ಟ್ರಾಫಿಕ್ ಇನ್ ಸ್ಪೆಕ್ಟರ್ ಆಲ್ಕೋಮೀಟರ್ ನಲ್ಲಿ ಪರೀಕ್ಷೆ ಒಳಪಡಿಸಿದ್ದಾರೆ. ಪರೀಕ್ಷೆಯಿಂದ ಯಾವುದೇ ಡ್ರಿಂಕ್‌‌‌ ಮಾಡದಿರುವುದು ಸಾಬೀತಾಗಿದೆ. ಪಟ್ಟಭದ್ರ ಹಿತಾಸಕ್ತಿಗಳು ಸುಖಾಸುಮ್ಮನೆ ಗಲಾಟೆ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು ಈ ಸಂಬಂಧ ಕಾನೂನು ಸುವ್ಯವಸ್ಥೆ ವಿಭಾಗದ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ನಿನ್ನೆ ಚಾಲಕನ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಆರೋಪ ಎದುರಿಸುತ್ತಿರುವ ಹಲಸೂರು ಗೇಟ್ ಟ್ರಾಫಿಕ್ ಸ್ಟೇಷನ್ ಕಾನ್ ಸ್ಟೇಬಲ್ ಗೆ ಘಟನೆಗೆ ಕಾರಣ ಕೋರಿ ಸಮನ್ಸ್ ಜಾರಿ ಮಾಡಿದ್ದೇವೆ. ಪೇದೆಯಿಂದ ಉತ್ತರ ಬಂದ ಬಳಿಕ ಕ್ರಮ‌ಕೈಗೊಳ್ಳಲಾಗುವುದು ಇದೇ ವೇಳೆ ತಿಳಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.